Please enable javascript.ಪೆಟ್‌ ಕೇರ್‌: ಪಾರಿವಾಳದ ಗೂಡು ಹೀಗಿರಲಿ - Pet care - Vijay Karnataka

ಪೆಟ್‌ ಕೇರ್‌: ಪಾರಿವಾಳದ ಗೂಡು ಹೀಗಿರಲಿ

Vijaya Karnataka Web 23 Oct 2016, 3:46 am
Subscribe

ಪಕ್ಷಿ ಪ್ರಿಯರು ಮನೆಯಲ್ಲಿಯೇ ಪಾರಿವಾಳವನ್ನು ಸಾಕುತ್ತಿದ್ದರೆ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

pet care
ಪೆಟ್‌ ಕೇರ್‌: ಪಾರಿವಾಳದ ಗೂಡು ಹೀಗಿರಲಿ
-ಪಕ್ಷಿ ಪ್ರಿಯರು ಮನೆಯಲ್ಲಿಯೇ ಪಾರಿವಾಳವನ್ನು ಸಾಕುತ್ತಿದ್ದರೆ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಅವುಗಳಿಗೆ ಗೂಡು ಹೊಂದದೆ ಅವು ಹೊರಗೆ ಹಾರಿ ಹೋಗಿ ಮರಳಿ ಹಿಂತಿರುಗಿ ಬರದಿರಬಹುದು.

-ಪಾರಿವಾಳಕ್ಕೆ ಮರದ ಗಟ್ಟಿಯಾದ ಹಾಗೂ ಕಾಗದದ ರಟ್ಟಿನಿಂದ ಗೂಡನ್ನು ವಿಶಾಲವಾಗಿ ನಿರ್ಮಿಸಿದರೆ ಸಾಕು.

- ಸಾಧ್ಯವಾದಷ್ಟು ಟೆರೇಸ್‌ನ ಮೇಲೆ ಅಥವಾ ಮನೆಯ ಮೇಲೆ ಗೂಡು ನಿರ್ಮಿಸಿದರೆ ಪಾರಿವಾಳಕ್ಕೆ ಇಷ್ಟವಾಗುತ್ತದೆ. ಅದು ಬಹುಬೇಗ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ.

-ಕೈ ತೋಟವಿದ್ದರೆ ಅದರ ಒಳಗೂ ಗೂಡನ್ನು ಇಡಬಹುದು. ನೈಸರ್ಗಿಕವಾದ ಗಿಡಗಳ ಮಧ್ಯೆ ಜೀವಿಸಲು ಈ ಪಕ್ಷಿಗಳಿಗೆ ತುಂಬಾ ಇಷ್ಟ.

-ಪಾರಿವಾಳದ ಗೂಡನ್ನು ದಿನಕ್ಕೆ ಒಂದು ಬಾರಿಯಾದರೂ ಶುಚಿಗೊಳಿಸಬೇಕು. ಇಲ್ಲವಾದರೆ ಅವುಗಳಿಗೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.

-ಸಂಜೆಯ ಸಮಯ ಪಾರಿವಾಳವನ್ನು ಗೂಡಿನಿಂದ ಹಾರಲು ಬಿಡಿ. ಅವುಗಳನ್ನು ಸದಾ ಗೂಡಿನೊಳಗೆ ಮುಚ್ಚಿಟ್ಟುಕೊಂಡರೆ ಅವುಗಳಿಗೆ ಹಿಂಸೆಯಾಗುತ್ತದೆ.

-ಗೂಡಿನ ಒಳಗೆ ಅವುಗಳಿಗೆ ಇಷ್ಟವಾಗುವ ಕಾಳುಗಳಿರಲಿ. ಯಾಕೆಂದರೆ ಅವು ಅದನ್ನು ಹಸಿವಾದಾಗ ಹೆಕ್ಕಿ ತಿನ್ನುತ್ತವೆ.

-ಹಾಗೆಯೇ ಗೂಡಿನ ಒಂದು ಮೂಲೆಯಲ್ಲಿ ಅವುಗಳಿಗೆ ಕುಡಿಯಲು ನೀರು ಇಡುವುದನ್ನು ಮರೆಯಬೇಡಿ. ಯಾಕೆಂದರೆ ಅವು ಕೂಡಾ ನಮ್ಮಂತೆ ತಿಂದ ನಂತರ ನೀರು ಕುಡಿಯುತ್ತದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ