ಆ್ಯಪ್ನಗರ

ಪೆಟ್‌ care: ಇವುಗಳಿದ್ದರೆ ಮಾತ್ರ ಪ್ರಾಣಿ ಸಾಕಿ

ಪೆಟ್‌ ಕೇರ್‌ ಪ್ರಾಣಿಗಳನ್ನು ಸಾಕುವ ಮುನ್ನ -ಪ್ರಾಣಿಗಳನ್ನು ಎಲ್ಲರೂ ಸಾಕಲು ಆಗುವುದಿಲ್ಲ ಯಾಕೆಂದರೆ ಪ್ರಾಣಿಗಳ ಬಗ್ಗೆ ಒಲವಿದ್ದಾಗ ಮಾತ್ರ ಸಾಕಲು ಸಾಧ್ಯವಾಗುತ್ತದೆ...

Vijaya Karnataka Web 5 Jan 2017, 4:00 am

ಪ್ರಾಣಿಗಳನ್ನು ಸಾಕುವ ಮುನ್ನ

-ಪ್ರಾಣಿಗಳನ್ನು ಎಲ್ಲರೂ ಸಾಕಲು ಆಗುವುದಿಲ್ಲ. ಯಾಕೆಂದರೆ ಪ್ರಾಣಿಗಳ ಬಗ್ಗೆ ಒಲವಿದ್ದಾಗ ಮಾತ್ರ ಸಾಕಲು ಸಾಧ್ಯವಾಗುತ್ತದೆ.

- ಪ್ರಾಣಿಗಳಿಗಾಗಿಯೇ ದಿನದಲ್ಲಿ ಸ್ಪಲ್ಪ ಸಮಯವನ್ನಾದರೂ ಬಿಡುವು ಮಾಡಿಕೊಳ್ಳಬೇಕು. ಯಾಕೆಂದರೆ ಅವುಗಳು ನಮಗೆ ಹೊಂದಿಕೊಂಡಾಗ ಮಾತ್ರ ಸಾಕಲು ಸಾಧ್ಯವಾಗುತ್ತದೆ.

-ಸಮಯಕ್ಕೆ ಸರಿಯಾಗಿ ಆಹಾರ ನೀಡಬೇಕು. ಯಾವ ಪ್ರಾಣಿಗೆ ಯಾವ ಆಹಾರವನ್ನು ನೀಡಬೇಕೆಂದು ಮೊದಲೇ ತಿಳಿದುಕೊಂಡಿರಬೇಕು. - ಸಾಕುವ ಪ್ರಾಣಿಗೊಂದು ಚೆಂದದ ಹೆಸರನ್ನು ಇಡಬೇಕು. ಅದರ ಹೆಸರನ್ನು ಹಿಡಿದು ಕರೆದಾಗ ಎಲ್ಲಿ ಇದ್ದರೂ ನಿಮಗೆ ಸ್ಪಂದಿಸುತ್ತವೆ. ಕೆಲವೊಮ್ಮೆ ಓಡಿ ಬರುತ್ತವೆ. ಪ್ರಾಣಿಗಳು ಮೂಕವಾಗಿರಬಹುದು. ಆದರೆ ಅವುಗಳ ಮನಸು ಒಳ್ಳೆಯದಿರುತ್ತವೆ.

-ಅವುಗಳಿಗೆ ಕ್ರೂರವಾಗಿ ಹೊಡೆಯ ಮಾಡಬಾರದು. ಹಾಗೆ ಮಾಡಿದರೆ ಅವು ನಿಮ್ಮನ್ನು ನೋಡಿ ಹೆದರಿ ಓಡಿ ಹೋಗುತ್ತವೆ.

-ಪ್ರಾಣಿಗಳಿಗೆ ಮಲಗಲು, ಕೂರಲು ಸೂಕ್ತವಾದ ಪುಟ್ಟದಾದ ಮನೆಯನ್ನು ನಿರ್ಮಿಸಬೇಕು. ಇದರಿಂದ ಅವುಗಳಿಗೆ ಮಳೆ, ಬಿಸಿಲು , ಗಾಳಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ.

-ಪ್ರಾಣಿಗಳಿಗೆ ಕಾಯಿಲೆಯಾದಾಗ ಪಶು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಔಷದೋಪಚಾರ ಕೊಡಿಸಬೇಕು. ಇಲ್ಲವಾದರೆ ಕೆಲವೊಮ್ಮೆ ಕಾಯಿಲೆಯಿಂದ ಸಾಯುವ ಪರಿಸ್ಥಿತಿ ಉಂಟಾಗಬಹುದು.

- ಪ್ರಾಣಿಗಳ ಬಗ್ಗೆ ಅನುಕಂಪವಿರಬೇಕು. ಅವು ಕೂಡ ನಿಮ್ಮಲ್ಲೊಬ್ಬ ಸದಸ್ಯನೆಂದು ಭಾವಿಸಿದಾಗ ಮಾತ್ರ ನೀವು ಸಾಕಲು , ನಿರ್ವಹಿಸಲು ಸುಲಭವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ