ಆ್ಯಪ್ನಗರ

ಪೆಟ್‌ care:ವಿವಿಧ ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಬೆಳೆಯಬಹುದಾ?

ಆಕ್ವೇರಿಯಂನಲ್ಲಿರಲಿ ವೆರೈಟಿ ಮೀನುಗಳು -ಅಕ್ವೇರಿಯಂನಲ್ಲಿ ಒಂದೇ ಜಾತಿಯ ಮೀನನ್ನು ಸಾಕಬೇಡಿ ವಿವಿಧ ಬಗೆಯ ಮೀನುಗಳಿದ್ದರೆ ನೋಡಲು ಕೂಡ ಸುಂದರವಾಗಿ ಕಾಣುತ್ತದೆ...

Vijaya Karnataka Web 24 Dec 2016, 5:00 am

-ಅಕ್ವೇರಿಯಂನಲ್ಲಿ ಒಂದೇ ಜಾತಿಯ ಮೀನನ್ನು ಸಾಕಬೇಡಿ. ವಿವಿಧ ಬಗೆಯ ಮೀನುಗಳಿದ್ದರೆ ನೋಡಲು ಕೂಡ ಸುಂದರವಾಗಿ ಕಾಣುತ್ತದೆ.

-ಮೀನುಗಳು ಉಷ್ಣವಲಯದ ಜೀವಿಗಳು. ಇವುಗಳು ನಮ್ಮ ಪರಿಸರಕ್ಕೆ ಹೊಂದಿಕೊಳ್ಳಬೇಕಾದರೆ ಜಾಗ್ರತೆಯಾಗಿ ನಿರ್ವಹಣೆ ಮಾಡಬೇಕು.

-ಗೋಲ್ಡನ್‌, ಸಿಲ್ವರ್‌, ರೆಡ್‌ ಮುಂತಾದ ವಿವಿಧ ಬಣ್ಣಗಳಿಂದ ಕೂಡಿದ ಮೀನುಗಳಿದ್ದರೆ ಅಂದವಾಗಿ ಕಾಣುವುದಲ್ಲದೇ ಮನೆಗೆ ಮೆರಗು ನೀಡುತ್ತದೆ. ಮನೆಗೆ ಬಂದ ಅತಿಥಿಗಳು ಕೂಡಾ ಇದನ್ನು ತುಂಬಾ ಇಷ್ಟಪಡುತ್ತಾರೆ.

-ಯಾವುದೇ ಕಾರಣಕ್ಕೂ ಒಂದು ಅಥವಾ ಒಂದೇ ಜಾತಿಯ ಮೀನು ಅಕ್ವೇರಿಯಂನಲ್ಲಿದ್ದರೆ ಬಹುಬೇಗ ಸಾವನ್ನಪ್ಪುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಅವುಗಳ ಒಳಿತಿಗಾದರೂ ಎಲ್ಲ ಬಗೆಯ ಫಿಶ್‌ಗಳು ಅಕ್ವೇರಿಯಂನಲ್ಲಿದ್ದರೆ ಬೆಸ್ಟ್‌.

-ಮೀನಿನ ಆರೈಕೆಗೆ ಕ್ಲೀನ್‌ ಟ್ಯಾಂಕ್‌ ಮುಖ್ಯವಾದುದು. ಅಕ್ವೇರಿಯಂನ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಟ್ಯಾಂಕ್‌ ಸಾಕಷ್ಟು ದೊಡ್ಡದಿದ್ದರೆ ಉತ್ತಮ. ಯಾಕೆಂದರೆ ಆಗ ಮಾತ್ರ ಸಾಕಷ್ಟು ಮೀನು ಸಾಕಲು ಸಾಧ್ಯವಾಗುತ್ತದೆ.

-ಮೀನುಗಳು ಎಲೆಗಳು, ಬಂಡೆಗಳ ಮೇಲೆ ಈಜಲು ಇಷ್ಟಪಡುತ್ತವೆ. ಆದ್ದರಿಂದ ಟ್ಯಾಂಕಿನ ಒಳಗೆ ಸಣ್ಣ ಸಣ್ಣ ಬಣ್ಣ ಬಣ್ಣದ ಕಲ್ಲುಗಳನ್ನು ಜೋಡಿಸಿರಿ. ಬಳ್ಳಿ, ಎಲೆಗಳಿದ್ದರೆ ಇನ್ನೂ ಉತ್ತಮ.

-ಇವು ಉಷ್ಣವಲಯದ ಜೀವಿಗಳಾಗಿರುವುದರಿಂದ ಇದಕ್ಕೆ ಸುಮಾರು 84:86 ಡಿಗ್ರಿ ಫ್ಯಾರನ್‌ ಹೀಟ್‌ ನೀರಿನ ತಾಪಮಾನ ಬೇಕು. ಅಕ್ವೇರಿಯಂನಲ್ಲಿ ಹೀಟರ್‌ ಬಳಸಿಕೊಂಡು ಮೀನುಗಳಿಗೆ ಪರಿಪೂರ್ಣ ತಾಪಮಾನ ನೀಡುವಂತೆ ಮಾಡಿ.

-ಎಲ್ಲಾ ಬಗೆಯ ಮೀನುಗಳು ಹುಳಗಳು, ಎರೆಹುಳುಗಳು, ಉಪ್ಪು ಮಿಶ್ರಿತ ಆಹಾರವನ್ನು ತಿನ್ನುತ್ತವೆ. ಆದ್ದರಿಂದ ಮನೆಯಲ್ಲಿಯೂ ಇವುಗಳಿಗೆ ಉಪ್ಪು ಮಿಶ್ರಿತ ಆಹಾರವನ್ನು ತಿನ್ನಲು ನೀಡಿರಿ.

-ಟ್ಯಾಂಕನ್ನು ಇಡುವ ಸ್ಥಳವೂ ತುಂಬಾ ಮುಖ್ಯವಾಗುತ್ತದೆ. ಇವುಗಳು ಶಾಂತವಾದ ಸ್ಥಳವನ್ನು ಇಷ್ಟಪಡುತ್ತವೆ. ಇಲ್ಲವಾದರೆ ಇವುಗಳ ಹೃದಯ ಕಂಪಿಸುತ್ತದೆ. ಆದ್ದರಿಂದ ನಿಶ್ಯಬ್ದವಾದ ಸ್ಥಳದಲ್ಲಿ ಮೀನಿನ ಟ್ಯಾಂಕನ್ನು ಇಡುವುದನ್ನು ಮರೆಯಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ