ಆ್ಯಪ್ನಗರ

ಏರ್‌ ಇಂಡಿಯಾ ಚಾರ್ಟರ್ಸ್‌ನಲ್ಲಿ ವೇಕೆನ್ಸಿ

ಏರ್‌ ಇಂಡಿಯಾ ಚಾರ್ಟರ್ಸ್‌ ಲಿಮಿಟೆಡ್‌ನಲ್ಲಿ ಮ್ಯಾನೇಜರ್‌, ಅಸಿಸ್ಟೆಂಟ್‌, ಚೀಫ್‌ ಮ್ಯಾನೇಜರ್‌, ಸೀನಿಯರ್‌ ಆಫೀಸರ್‌, ಎಚ್‌ಆರ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಒಟ್ಟು 11 ಹುದ್ದೆಗಳು ಖಾಲಿ ಇವೆ.

Vijaya Karnataka Web 12 Oct 2016, 4:39 am
ಏರ್‌ ಇಂಡಿಯಾ ಚಾರ್ಟರ್ಸ್‌ ಲಿಮಿಟೆಡ್‌ನಲ್ಲಿ ಮ್ಯಾನೇಜರ್‌, ಅಸಿಸ್ಟೆಂಟ್‌, ಚೀಫ್‌ ಮ್ಯಾನೇಜರ್‌, ಸೀನಿಯರ್‌ ಆಫೀಸರ್‌, ಎಚ್‌ಆರ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಒಟ್ಟು 11 ಹುದ್ದೆಗಳು ಖಾಲಿ ಇವೆ. ವಿವಿಧ ಹುದ್ದೆಗಳಿಗೆ ತಕ್ಕಂತೆ ಪದವಿ, ಬಿಇ/ಬಿಟೆಕ್‌/ ಎಂಬಿಎ/ಎಂಎಸ್‌ಡಬ್ಲ್ಯು/ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಬಯಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್‌ 24, 2016 ಕೊನೆಯ ದಿನಾಂಕವಾಗಿದೆ.
Vijaya Karnataka Web air india charters
ಏರ್‌ ಇಂಡಿಯಾ ಚಾರ್ಟರ್ಸ್‌ನಲ್ಲಿ ವೇಕೆನ್ಸಿ


ಅರ್ಜಿಯನ್ನು ಅಂಚೆ ಮೂಲಕ ಮಾತ್ರ ಕಳುಹಿಸಲು ಅವಕಾಶವಿದೆ. ವಿಳಾಸ: The Chief of HR Air India Charters Limited, Airlines House, Durbar Hall Road, Near Gandhi Square, Kochi- 682016. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ ವಿಳಾಸ: http://airindiaexpress.in

ಕಂಟೊನ್ಮೆಂಟ್‌ ಬೋರ್ಡ್‌ ಜಾಬ್‌

ರಕ್ಷಣಾ ಸಚಿವಾಲಯದಡಿ ಬರುವ ಲಖನೌ ಕಂಟೊನ್ಮೆಂಟ್‌ ಬೋರ್ಡ್‌ನಲ್ಲಿ ಸಬ್‌ ಡಿವಿಷನಲ್‌ ಆಫೀಸರ್‌ ಗ್ರೇಡ್‌ 2 ಹುದ್ದೆ ಖಾಳಿ ಇದೆ. ಒಟ್ಟು 10 ಹುದ್ದೆಗಳು ಖಾಲಿ ಇದ್ದು, ಸಾಮಾನ್ಯ ವರ್ಗಕ್ಕೆ 3, ಒಬಿಸಿಗೆ 2, ಎಸ್‌ಸಿ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 4 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಶೈಕ್ಷಣಿಕ ಅರ್ಹತೆ: ಮೆಟ್ರಿಕ್ಯುಲೇಷನ್‌, ಡಿಪ್ಲೊಮಾ ಅಥವಾ ಡ್ರಾಫ್ಟ್ಸ್‌ಮೆನ್‌ ಸರ್ಟಿಫಿಕೇಟ್‌. ಲಿಖಿತ ಪರೀಕ್ಷೆ ಮತ್ತು ಕೌಶಲ ಪರೀಕ್ಷೆ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ: 50 ರೂಪಾಯಿ. ಅರ್ಜಿ ಸಲ್ಲಿಸಲು ನವೆಂಬರ್‌ 15, 2016 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌ ವಿಳಾಸ: www.cblucknow.org.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ