ಆ್ಯಪ್ನಗರ

ನೇವಲ್‌ ಕಮಾಂಡ್‌ನಲ್ಲಿ ನೇಮಕ

ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಓದಿದವರಿಗೆ ನೌಕಾಪಡೆಯಲ್ಲಿದೆ ಉದ್ಯೋಗ.

Vijaya Karnataka Web 12 Jul 2016, 4:00 am

ಖಾಲಿ ಹುದ್ದೆಗಳು 262

ಕೊಚ್ಚಿಯಲ್ಲಿರುವ ಸೌದರ್ನ್‌ ನೇವಲ್‌ ಕಮಾಂಡ್‌ನಲ್ಲಿ ಗ್ರೂಪ್‌ ಸಿ ಹುದ್ದೆಗಳಿಗೆ ನೇಮಕ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಹುದ್ದೆಗಳು ಮತ್ತು ವಿದ್ಯಾರ್ಹತೆ ವಿವರಗಳು

ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಮಿನಿಸ್ಟ್ರೀಯಲ್‌): ಸಫಾಯ್‌ವಾಲಾ 157, ವಾಚ್‌ಮನ್‌ 35 ಮತ್ತು ಪ್ಯೂನ್‌ 15 ಹುದ್ದೆಗಳು ಸೇರಿ ಒಟ್ಟು 246 ಹುದ್ದೆಗಳಿಗೆ ನೇಮಕ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರುÊ 18ರಿಂದ 27 ವರ್ಷದೊಳಗಿನ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ನಾನ್‌ ಇಂಡಿಸ್ಟ್ರೀಯಲ್‌): ಎಸ್‌ಎಸ್‌ಎಲ್‌ಸಿ ಓದಿರುವ ಮತ್ತು ಆಯಾ ಟ್ರೇಡ್‌ನಲ್ಲಿ ಐಟಿಐ ಕೋರ್ಸ್‌/ಕಾರ್ಯನಿರ್ವಹಿಸಿದ ಅನುಭವ ಇರುವ 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದಲ್ಲಿ ಒಟ್ಟು 16 ಹುದ್ದೆಗಳು ಖಾಲಿ ಇವೆ.

ಆಯ್ಕೆ ಹೇಗೆ?: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. 2016ರ ಸೆಪ್ಟೆಂಬರ್‌ 25 ಅಥವಾ ಅಕ್ಟೋಬರ್‌ 01ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಪರೀಕ್ಷೆ ಹೇಗಿರುತ್ತದೆ?: ಜನರಲ್‌ ಇಂಟಲಿಜೆನ್ಸ್‌, ನ್ಯೂಮರಿಕಲ್‌ ಅಪ್ಟಿಟ್ಯೂಡ್‌, ಜನರಲ್‌ ಇಂಗ್ಲಿಷ್‌, ಜನರಲ್‌ ಅವೇರ್ನೆಸ್‌ ಮತ್ತು ಅವೇರ್ನೆಸ್‌ ಇನ್‌ ರಿಲೆವೆಂಟ್‌ ಫೀಲ್ಡ್‌ ಗೆ ಸಂಬಂಧಿಸಿದಂತೆ ತಲಾ 20 ಅಂಕಗಳು ಸೇರಿದಂತೆ ಒಟ್ಟು 100 ಅಂಕಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು.

ಅರ್ಜಿ ನಮೂನೆಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ: The Flag Officer Commanding-in-Chief (for SO (CRC), Headquarters, Southern Naval Command, Kochi-682004, Kerala.

ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ: www.davp.nic.in/WriteReadData/ADS/eng_10702_243_1617b.pdf

Vijaya Karnataka Web indian navy jobs 2016 navy recruitment
ನೇವಲ್‌ ಕಮಾಂಡ್‌ನಲ್ಲಿ ನೇಮಕ

ಕ್ವಿಕ್‌ ಲುಕ್‌

-ಅರ್ಜಿ ಸಲ್ಲಿಸಲು ಕೊನೆಯ ದಿನ 2016ರ ಆಗಸ್ಟ್‌ 12

-ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ನೇಮಕ

-ಲಿಖಿತ ಪರೀಕ್ಷೆ: 2016ರ ಸೆಪ್ಟೆಂಬರ್‌ 25 ಮತ್ತು ಅಕ್ಟೋಬರ್‌ 01

-ಭಾರತೀಯ ನೌಕಾಪಡೆಯ ವೆಬ್‌: www.joinindiannavy.gov.in


**

ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ

- ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹುದ್ದೆಗೆ ಖಾಲಿ ಇದೆ

-2016ರ ಜುಲೈ 21 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ

-ಕನ್ನಡ ಮತ್ತು ಇಂಗ್ಲಿಷ್‌ ಶೀಘ್ರಲಿಪಿ ಗೊತ್ತಿದ್ದರೆ ಅರ್ಜಿ ಸಲ್ಲಿಸಿ

ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿಯಿರುವ 3 ಶೀಘ್ರಲಿಪಿಗಾರರು, 3 ಬೆರಳಚ್ಚುಗಾರರು ಹಾಗೂ 1 ಬೆರಳಚ್ಚು ನಕಲುಗಾರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2016ರ ಜುಲೈ 21 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಮೂರೂ ರೀತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ/ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಢ ಶಿಕ್ಷ ಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ/ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು. ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 35 ವರ್ಷ.

ಆಯ್ಕೆ ಹೇಗೆ?: ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ನಿಮಿಷವೊಂದಕ್ಕೆ 120 ಪದಗಳ ದರದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ ಸಾಮಾರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ನಮೂನೆ ಮತ್ತು ವಿವರಗಳಿಗೆ ಸಂಪರ್ಕಿಸಬೇಕಾದ ವೆಬ್‌ ವಿಳಾಸ: http://ecourts.gov.in/ballari

**

ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಕೆಲಸ ಬೇಕೆ?

-ನೋಂದಣಿಗೆ ಕೊನೆ ದಿನ ಜುಲೈ 13

-ಅರ್ಜಿ ಗಳನ್ನು ಜುಲೈ 22ರೊಳಗೆ ಕಳುಹಿಸಿ

- ವಿವರಗಳಿಗೆ: www.ncbl.org.in

ಬೆಂಗಳೂರಿನ ದಿ ನ್ಯಾಷನಲ್‌ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ 30 ಕಿರಿಯ ಸಹಾಯಕ ಗ್ರೇಡ್‌ ಮತ್ತು 5 ಜವಾನರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜುಲೈ 2016.

ಅರ್ಹತೆಗಳೇನು?: ಫಿನಾಶ್ಷಿಯಲ್‌ ಕೋರ್ಸ್‌ ಪದವಿ ಪಡೆದಿರುವ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಅನುಭವ, ಗ್ರ್ಯಾಜುಯೇಟ್‌ ಡಿಗ್ರಿ ಇನ್‌ ಕೋ-ಆಪರೇಶನ್‌ ಇದ್ದವರನ್ನು ಕಿರಿಯ ಸಹಾಯಕ ಗ್ರೇಡ್‌ ಹುದ್ದೆಗಳಿಗೆ ನೇಮಕ ನಡೆಸಲಾಗುತ್ತದೆ. ಅಂತೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುರುವ ಮತ್ತು ಬ್ಯಾಕಿಂಗ್‌ ಕ್ಷೇತ್ರದಲ್ಲಿ ಸುಮಾರು 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವ ಮತ್ತು ಲಘು ವಾಹನ ಚಲಿಸಲು ಪರವಾನಿಗೆ ಪಡೆದ ಅಭ್ಯರ್ಥಿಗಳನ್ನು ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಸಲ್ಲಿಸಲು ಜುಲೈ 13ರೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಿ, ಸ್ವದೃಡೀಕೃತ ಯಥಾಪ್ರತಿಗಳನ್ನು ಜುಲೈ 22ರೊಳಗೆ ಬ್ಯಾಂಕಿಗೆ ಕಳುಹಿಸಬೇಕು. ಎರಡೂ ಹುದ್ದೆಗಳಿಗೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ.

ಅರ್ಜಿಗಳನ್ನು ಸಲ್ಲಿಸಲು ಜುಲೈ 13ರೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಿ, ಸ್ವದೃಡೀಕೃತ ಯಥಾಪ್ರತಿಗಳನ್ನು ಜುಲೈ 22ರೊಳಗೆ ಬ್ಯಾಂಕಿಗೆ ಕಳುಹಿಸಬೇಕು.

**

ಪೊಲೀಸ್‌ ಇಲಾಖೆಯಲ್ಲಿ ಅನುಯಾಯಿ ಹುದ್ದೆ

ಧಾರವಾಡ ಮತ್ತು ಹಾಸನ ತರಬೇತಿ ಶಾಲೆಯಲ್ಲಿ ನೇಮಕಾತಿ

ಹಾಸನ ಮತ್ತು ಧಾರವಾಡ ಪೊಲೀಸ್‌ ತರಬೇತಿ ಶಾಲೆಯಲ್ಲಿ ಖಾಲಿ ಇರುವ ಅನುಯಾಯಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹಾಸನ ತರಬೇತಿ ಶಾಲೆಯಲ್ಲಿ 21 ಹುದ್ದೆಗಳು ಮತ್ತು ಧಾರವಾಢದಲ್ಲಿ 19 ಹುದ್ದೆಗಳು ಸೇರಿದಂತೆ ಒಟ್ಟು 40 ಹುದ್ದೆಗಳಿಗೆ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ 2016ರ ಆಗಸ್ಟ್‌ 16. ಏಳನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ದಿನಾಂಕ: 16-08-2016ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 25 ವರ್ಷವಾಗಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 250 ರೂಪಾಯಿ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂಪಾಯಿ.

ಅರ್ಜಿ ಹೀಗೆ ಸಲ್ಲಿಸಿ: ಅರ್ಜಿ ನಮೂನೆಗಳನ್ನು ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಪೊಲೀಸ್‌ ಅಧೀಕ್ಷಕರು ಹಾಗೂ ಪ್ರಾಂಶುಪಾಲರು, ಪೊಲೀಸ ತರಬೇತಿ ಶಾಲೆ ಖಾನಾಪೂರ ಬೆಳಗಾವಿ ಜಿಲ್ಲೆ-591302 ರವರ ಕಛೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ: www.ksp.gov.in

**

ನೇರ ಸಂದರ್ಶನ

ನಿಮ್ಹಾನ್ಸ್‌

ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಮೂರು ವಿವಿಧ ಹುದ್ದೆಗಳಿಗೆ ನೇಮಕ ನಡೆಯಲಿದೆ.

ರಿಸರ್ಚ್‌ ಅಸೋಸಿಯೇಟ್‌ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋ ಹುದ್ದೆಗಳಿಗೆ ಇದೇ ಜುಲೈ 15ರಂದು ಸಂದರ್ಶನ ನಡೆಯಲಿದೆ. ಪಿಎಚ್‌.ಡಿ/ಎಂಡಿ ಅಥವಾ ಎಂಎಸ್‌ ವ್ಯಾಸಂಗ ಮಾಡಿದವರು ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗಳಿಗೂ ಹಾಗೂ ಬೇಸಿಕ್‌ ಸೈನ್ಸ್‌ನಲ್ಲಿ ಬಿಎಸ್ಸಿ ಓದಿ, ಎನ್‌ಇಟಿ ತೇರ್ಗಡೆಯಾದವರನ್ನು ಜೂ.ರಿಸರ್ಚ್‌ ಫೆಲೋ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುತ್ತದೆ. ಇವುಗಳಿಗೆ ಸಂದರ್ಶನ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ಅರ್ಜಿ ಸಲ್ಲಿಸಿ: ಖಾಲಿ ಇರುವ ಒಂದು ಮಾನಿಟರಿಂಗ್‌ ಆ್ಯಂಡ್‌ ಇವಾಲ್ಯವೇಶನ್‌ ಆಫೀಸರ್‌ ಹುದ್ದೆಗೆ ಎಂಬಿಬಿಎಸ್‌/ಎಂಡಿ/ಎಂಎಸ್‌ ಓದಿದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು 2016ರ ಜುಲೈ 18ರೊಳಗೆ ಅರ್ಜಿ ಸಲ್ಲಿಸಬಹುದು.

ವಿವರಗಳಿಗೆ: www.nimhans.ac.in

**

ಧಾರವಾಡದ ಕೃಷಿ ವಿವಿ

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ವಿವಿಧ ಹುದ್ದೆಗಳು ಖಾಲಿ ಇದ್ದು, ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ.

ಸೀನಿಯರ್‌ ರಿಸರ್ಚ್‌ ಫೆಲೋ ಮತ್ತು ಕಂಪ್ಯೂಟರ್‌ ಅಸಿಸ್ಟೆಂಟ್‌: ಪದವಿ ಓದಿರುವವರು ಕಂಪ್ಯೂಟರ್‌ ಅಸಿಸ್ಟೆಂಟ್‌ ಹುದ್ದೆಗೂ ಮತ್ತು ಎಂಎಚ್‌ಎಸ್‌ಸಿ ವಿದ್ಯಾರ್ಹತೆ ಇರುವವರು ಎಸ್‌ಆರ್‌ಎಫ್‌ ಸಂದರ್ಶನದಲ್ಲಿಯೂ ಭಾಗವಹಿಸಬಹುದು. ಇವುಗಳಿಗೆ ಜುಲೈ 26ರಂದು ಸಂದರ್ಶನ ನಡೆಯಲಿದೆ.

ಪೋಸ್ಟ್‌ ಮಾಸ್ಟರ್ಸ್‌ ಫೆಲೋ: ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಜುಲೈ 19ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಿ.

ಫೀಲ್ಡ್‌ ಅಸಿಸ್ಟೆಂಟ್‌: ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರುವ ಮತ್ತು ಈಗಾಗಲೇ ಫೀಲ್ಡ್‌ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಇದ್ದವರು ಜುಲೈ 16ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು

ವಿವರಗಳಿಗೆ: www.uasd.edu

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ