ಆ್ಯಪ್ನಗರ

RRB NTPC Recruitment: ಭಾರತೀಯ ರೈಲ್ವೆಯಲ್ಲಿರುವ 1.30 ಲಕ್ಷ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗವನ್ನು ಅರಸುತ್ತಿರುವ ಯುವ ಜನತೆಗೆ ಸಿಹಿ ಸುದ್ದಿ. ಭಾರತೀಯ ರೈಲ್ವೆ ಖಾಲಿಯಿರುವ ಸುಮಾರು 1.30 ಲಕ್ಷ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆರ್‌ಆರ್‌ಬಿ ಎನ್‌ಟಿಸಿ, ಲೆವೆಲ್‌ 1 ಮತ್ತು ರೈಲ್ವೆ ಸಚಿವಾಲಯದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಫೆಬ್ರವರಿ 28ರಿಂದ ಆನ್‌ಲೈನ್‌ ಅರ್ಜಿಗಳು ಲಭ್ಯ ಇವೆ.

Times Now 25 Feb 2019, 9:42 am
ಹೊಸದಿಲ್ಲಿ: ಭಾರತೀಯ ರೈಲ್ವೆಯಲ್ಲಿ ಸುಮಾರು 1.30 ಲಕ್ಷ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ರೈಲ್ವೆ ನೇಮಕಾತಿ ಮಂಡಳಿ ಅಧಿಕೃತ ಮಾಹಿತಿ ನೀಡಿದ್ದು, ಆರ್‌ಆರ್‌ಬಿ ಎನ್‌ಟಿಪಿಸಿ, ಲೆವೆಲ್‌ 1 ಮತ್ತು ರೈಲ್ವೆ ಸಚಿವಾಲಯದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ.
Vijaya Karnataka Web Railway


ಆರ್‌ಆರ್‌ಬಿ ಎನ್‌ಟಿಸಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿಗಳು ಫೆಬ್ರವರಿ 28ರಿಂದ ಲಭ್ಯವಾಗಲಿವೆ. ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಮಾರ್ಚ್‌ 4ರಂದು, ಸಚಿವಾಲಯದ ಕಚೇರಿಯಲ್ಲಿರುವ ಖಾಲಿ ಹುದ್ದೆಗಳಿಗೆ ಮಾರ್ಚ್‌ 8ರಂದು ಮತ್ತು ಲೆವೆಲ್‌ 1 ಹುದ್ದೆಗಳಿಗೆ ಮಾರ್ಚ್‌ 12ರಂದು ಆನ್‌ಲೈನ್‌ ಅರ್ಜಿಗಳು ಸಿಗಲಿವೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ಮಾಹಿತಿಗಾಗಿ ಆರ್‌ಆರ್‌ಬಿ ಮುಂಬಯಿ, ಅಲಹಾಬಾದ್‌, ಪಟನಾ, ಅಜ್ಮೀರ್‌, ಬೆಂಗಳೂರು, ಚೆನ್ನೈ ಇತ್ಯಾದಿ ಕೇಂದ್ರಗಳ ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದು. ಶಿಕ್ಷಣದ ಅರ್ಹತೆ, ವಯೋಮಿತಿ ಇತ್ಯಾದಿ ಮಾಹಿತಿ ಲಭ್ಯವಿವೆ. ಆರ್‌ಆರ್‌ಬಿ ಬೆಂಗಳೂರು ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ.

ಇನ್ನೂ ವಿಸ್ತೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ವಾರದಲ್ಲಿ ಆರ್‌ಆರ್‌ಬಿ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗಲಿವೆ.

ರೈಲ್ವೆ ವೆಬ್‌ಸೈಟ್‌ನಲ್ಲಿ ಸಿಇಎನ್‌ 01/2019, ಸಿಇಎನ್‌ 02/2019 ಮತ್ತು ಸಿಇಎನ್‌ 03/2019 ಪ್ರಕಟನೆಗಳು ಕ್ರಮವಾಗಿ ಫೆಬ್ರವರಿ 28, ಮಾರ್ಚ್‌ 4 ಮತ್ತು ಮಾರ್ಚ್‌ 12ರಂದು ಸಿಗಲಿವೆ.

ಎನ್‌ಟಿಪಿಸಿ ಅಥವಾ ನಾನ್‌ ಟೆಕ್ನಿಕಲ್‌ ಪಾಪುಲರ್‌ ಕೆಟಗರಿಯಲ್ಲಿ 30,000 ಖಾಲಿ ಹುದ್ದೆಗಳಿವೆ. ಇದರಲ್ಲಿ ಜೂನಿಯರ್‌ ಕ್ಲರ್ಕ್‌ ಅಥವಾ ಟೈಪಿಸ್ಟ್‌, ಅಕೌಂಟ್ಸ್‌ ಕ್ಲರ್ಕ್‌, ಟ್ರೈನಿ ಕ್ಲರ್ಕ್‌, ಟಿಕೆಟ್‌ ಕ್ಲರ್ಕ್‌, ಟ್ರಾಫಿಕ್‌ ಅಸಿಸ್ಟೆಂಟ್‌, ಗೂಡ್ಸ್‌ ಗಾರ್ಡ್‌, ಸೀನಿಯರ್‌ ಕ್ಲರ್ಕ್‌ ಇತ್ಯಾದಿ ಪೋಸ್ಟ್‌ಗಳು ಇವೆ. ಆರ್‌ಆರ್‌ಬಿ ಲೆವೆಲ್‌ 1 ವಿಭಾಗದಲ್ಲಿ 1.30 ಲಕ್ಷ ಖಾಲಿ ಹುದ್ದೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ