ಆ್ಯಪ್ನಗರ

ಕರಾವಳಿ ಭದ್ರತಾಪಡೆಯಲ್ಲಿ ನೇಮಕ

ಭಾರತೀಯ ಕರಾವಳಿ ಭದ್ರತಾ ಪಡೆಯು ಯಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು 2019ನೇ ಸಾಲಿನಿಂದ ಆರಂಭವಾಗಲಿರುವ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Vijaya Karnataka Web 18 Jul 2018, 5:37 pm
ಕರಾವಳಿ ಭದ್ರತಾಪಡೆಯಲ್ಲಿ ನೇಮಕ, ಡಿಪ್ಲೊಮಾ ಓದಿದರೆ ಅವಕಾಶ
Vijaya Karnataka Web jobs


ಕ್ವಿಕ್‌ ಲುಕ್‌
-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 1, 2018
-ಪರೀಕ್ಷೆ ನಡೆಯುವುದು: ಅಕ್ಟೋಬರ್‌, 2018
-ಕೋರ್ಸ್‌ ಆರಂಭ: ಜನವರಿ, 2019
-ವಿವರಗಳನ್ನು ಪಡೆಯಲು: www.joinindiancoastguard.gov.in

ಭಾರತೀಯ ಕರಾವಳಿ ಭದ್ರತಾ ಪಡೆಯು ಯಾಂತ್ರಿಕ್‌ ಹುದ್ದೆಗಳನ್ನು ಭರ್ತಿ ಮಾಡಲು 2019ನೇ ಸಾಲಿನಿಂದ ಆರಂಭವಾಗಲಿರುವ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಹತೆಗಳೇನು?

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ಬಳಿಕ ಮೂರು ವರ್ಷದ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳು ಯಾಂತ್ರಿಕ್‌ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಅಭ್ಯರ್ಥಿಗಳು ಎಲೆಕ್ಟ್ರಿಕಲ್‌/ ಮೆಕ್ಯಾನಿಕಲ್‌/ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್‌ (ರೇಡಿಯೋ/ಪವರ್‌) ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ನಲ್ಲಿ ಶೇಕಡಾ 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.ಯಾವುದಾದರೂ ಕ್ರೀಡೆಯಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ ಅಭ್ಯರ್ಥಿಗಳಾಗಿದ್ದಲ್ಲಿ ಅಂಥವರಿಗೆ ಶೇಕಡಾ 5 ಅಂಕಗಳ ಸಡಿಲಿಕೆ ಇದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 22 ವರ್ಷ. ಅಂದರೆ ಅಭ್ಯರ್ಥಿಗಳು 1997ರ ಫೆಬ್ರವರಿ 1 ಹಾಗೂ 2001ರ ಜನವರಿ 31ರ ನಡುವೆ ಜನಿಸಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಇದೆ.

ದೈಹಿಕ ಅರ್ಹತೆ:
ಎತ್ತರ ಕನಿಷ್ಠ 157 ಸೆಂ.ಮೀ. ಎದೆಯ ಸುತ್ತಳತೆ: ಕನಿಷ್ಠ 5 ಸೆಂ.ಮೀ.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಡಿಪ್ಲೊಮಾ ಪಠ್ಯಕ್ರಮವನ್ನು ಆಧರಿಸಿ ರೀಸನಿಂಗ್‌, ಇಂಗ್ಲಿಷ್‌ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ‌ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪರೀಕ್ಷೆಗಳು ಎಲ್ಲಿ?: ಮುಂಬೈ, ಚೆನ್ನೈ, ಕೋಲ್ಕೊñ ಮತ್ತು ನೋಯ್ಡಾಗಳಲ್ಲಿ ಪರೀಕ್ಷೆ ನಡೆಯಲಿದೆ. 2018ರ ಅಕ್ಟೋಬರ್‌ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರವೇಶಪತ್ರವನ್ನು ಆಗಸ್ಟ್‌ 13ರಿಂದ 22ರೊಳಗೆ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ತರಬೇತಿ ಹೀಗೆ: 2019ರ ಜನವರಿಯಿಂದ ಕೋರ್ಸ್‌ ಆರಂಭವಾಗಲಿದೆ. ಒಡಿಶಾದ ಐಎನ್‌ಎಸ್‌ ಚಿಲ್ಕಾ ದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಯಾಂತ್ರಿಕ ಹುದ್ದೆಗೆ ನೇಮಕಗೊಂಡವರು ಪ್ರಧಾನ ಸಹಾಯಕ್‌ ಎಂಜಿನಿಯರ್‌ ಹುದ್ದೆ ತನಕವೂ ಬಡ್ತಿ ಪಡೆಯುವ ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ