ಆ್ಯಪ್ನಗರ

ಪೋಸ್ಟ್‌ ಬ್ಯಾಂಕ್‌ನಲ್ಲಿ 1150 ಹುದ್ದೆಗಳು

ಅಂಚೆ ಇಲಾಖೆಯ ಉದ್ಯೋಗಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Vijaya Karnataka Web 11 Feb 2018, 1:37 pm
ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ)ನಿಯೋಜನೆ (ಡೆಪ್ಯುಟೇಶನ್‌) ಆಧಾರದಲ್ಲಿ ಬರೋಬ್ಬರಿ 1,150 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿದೆ.
Vijaya Karnataka Web job in post bank
ಪೋಸ್ಟ್‌ ಬ್ಯಾಂಕ್‌ನಲ್ಲಿ 1150 ಹುದ್ದೆಗಳು


ಅಂಚೆ ಇಲಾಖೆಯ ಉದ್ಯೋಗಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ.

ಮ್ಯಾನೇಜರ್‌ (ಸೇಲ್ಸ್‌)-200 ಹುದ್ದೆಗಳು, ಅಸಿಸ್ಟೆಂಟ್‌ ಮ್ಯಾನೇಜರ್‌(ಏರಿಯಾ ಆಪರೇಷನ್ಸ್‌)-300 ಹುದ್ದೆಗಳು ಮತ್ತು ಟೆರಿಟರಿ ಆಫೀಸರ್‌ -650 ಹುದ್ದೆಗಳಿಗೆ ನೇಮಕಾತಿ
ನಡೆಯಲಿದೆ.

ಅಂಚೆ ಇಲಾಖೆಗೆ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಇದ್ದವರು ಮ್ಯಾನೇಜರ್‌ ಹುದ್ದೆಗೂ, ಕನಿಷ್ಠ ಐದು ವರ್ಷ ಪೋಸ್ಟಲ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡಿದವರು ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗೂ ಮತ್ತು ಐದು ವರ್ಷಗಳ ಕಾಲ ಗ್ರಾಮ್‌ ಡಾಕ್‌ ಸೇವಕ್‌ ಆಗಿ ಕಾರ್ಯನಿರ್ವಹಿಸಿದವರು ಟೆರಿಟೋರಿಯಲ್‌ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 40 ವರ್ಷ. ಇಂಟಿಮೇಶನ್‌ ಫೀಸ್‌ ಸೇರಿ 475 ರೂ. ಅನ್ನು ಶುಲ್ಕವಾಗಿ ಪಾವತಿಸಲು ಸೂಚಿಸಲಾಗಿದೆ. ಇದೇ ಜನವರಿ ಕೊನೆಯ ವಾರದಲ್ಲಿ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ ಬೆಂಗಳೂರು, ಕಲಬುರಗಿ, ಹುಬ್ಬಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಗಳಲ್ಲಿ

ಪರೀಕ್ಷಾ ಕೇಂದ್ರಗಳಿರಲಿವೆ. ವಿವರಗಳಿಗೆ: www.indiapost.gov.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ