ಆ್ಯಪ್ನಗರ

ಆರ್‌ಬಿಐನಲ್ಲಿ 526 ಅಟೆಂಡೆಂಟ್‌ ಹುದ್ದೆಗಳು

ಬೆಂಗಳೂರಿನಲ್ಲಿವೆ 58 ಹುದ್ದೆಗಳು/ಆನ್‌ಲೈನ್‌ ಎಗ್ಸಾಮ್‌ ಮೂಲಕ ಆಯ್ಕೆ

Vijaya Karnataka 19 Nov 2017, 4:29 pm

ಬೆಂಗಳೂರಿನಲ್ಲಿವೆ 58 ಹುದ್ದೆಗಳು/ಆನ್‌ಲೈನ್‌ ಎಗ್ಸಾಮ್‌ ಮೂಲಕ ಆಯ್ಕೆ

ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್‌ 7, 2017

ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಉಡುಪಿ ಮತ್ತು ಶಿವಮೊಗ್ಗ

ವಿವರಗಳಿಗೆ: www.rbi.org.in

*ಖಾಲಿ ಇರುವ ಹುದ್ದೆಗಳು 526

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಇರುವವರಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ದೇಶಾದ್ಯಂತ ಇರುವ ಆರ್‌ಬಿಐ ಕಚೇರಿಗಳಲ್ಲಿ ಖಾಲಿ ಇರುವ 526 ಆಫೀಸ್‌ ಅಟೆಂಡೆಂಟ್‌ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್‌ 7 ಕೊನೆಯ ದಿನವಾಗಿದೆ.

ಎಲ್ಲೆಲ್ಲಿ ಎಷ್ಟು ಹುದ್ದೆ?

ಅಹಮದಾಬಾದ್‌-39, ಬೆಂಗಳೂರು-58, ಭೋಪಾಲ್‌-45, ಚಂಡೀಗಢ ಮತ್ತು ಶಿಮ್ಲಾ-47, ಚೆನ್ನೈ-10, ಗುವಾಹಟಿ-10, ಹೈದರಾಬಾದ್‌-27, ಜಮ್ಮು-19, ಲಖನೌ-13, ಕೋಲ್ಕೊತಾ-10,ಮುಂಬೈ, ನೇವಿ ಮುಂಬೈ ಮತ್ತು ಪಣಜಿ-165, ನಾಗ್ಪುರ-9. ದೆಹಲಿ-27 ಮತ್ತು ತಿರುವನಂತಪುರಂ-27

ಅರ್ಹತೆಗಳೇನು?

ದೇಶದ ಯಾವುದೇ ಅಂಗೀಕೃತ ಶಿಕ್ಷಣಸಂಸ್ಥೆಯಿಂದ 10ನೇ ತರಗತಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು ಮತ್ತು ಗರಿಷ್ಠ 25 ವರ್ಷಕ್ಕಿಂತ ಹೆಚ್ಚಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:

Vijaya Karnataka Web job vanancy in rbi
ಆರ್‌ಬಿಐನಲ್ಲಿ 526 ಅಟೆಂಡೆಂಟ್‌ ಹುದ್ದೆಗಳು


450 ರೂ. ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳು ಮತ್ತು ಎಕ್ಸ್‌ಸರ್ವಿಸ್ ಮೆನ್‌ಗೆ 0 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಆನ್‌ಲೈನ್‌ ಪರೀಕ್ಷೆ ಹಾಗೂ ಭಾಷಾ ಜ್ಞಾನ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್‌ ಎಗ್ಸಾಮ್‌ನಲ್ಲಿ ಜನರಲ್‌ ಇಂಗ್ಲಿಷ್‌, ರೀಸನಿಂಗ್‌, ಜನರಲ್‌ ಅವೇರ್ನೆಸ್‌ ಮತ್ತು ನ್ಯೂಮರಿಕಲ್‌ ಎಬಿಲಿಟಿಗೆ ಸಂಬಂಧಿಸಿದಂತೆ ತಲಾ 30 ಅಂಕಗಳಂತೆ 120 ಅಂಕಗಳ ಪ್ರಶ್ನೆಗಳಿಗೆ 90 ನಿಮಿಷಗಳಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು.

ಪರೀಕ್ಷಾ ತರಬೇತಿ:

ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯುವ ಅವಕಾಶವಿದೆ. ತರಬೇತಿ ಅಗತ್ಯವಿದ್ದಲ್ಲಿ ತಾನು ತರಬೇತಿ ಬಯಸುವುದಾಗಿ ಪತ್ರ ಬರೆಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ