ಆ್ಯಪ್ನಗರ

ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ

ಕೆಪಿಎಸ್‌ಸಿಯಿಂದ 1203 ಹುದ್ದೆಗಳ ಭರ್ತಿ -ಪೊಲೀಸ್‌ ಇಲಾಖೆಯಲ್ಲಿ 41 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ನೇಮಕ ಕರ್ನಾಟಕ ...

Vijaya Karnataka Web 15 Jan 2017, 5:00 am

ಕೆಪಿಎಸ್‌ಸಿಯಿಂದ 1203 ಹುದ್ದೆಗಳ ಭರ್ತಿ

-ಪೊಲೀಸ್‌ ಇಲಾಖೆಯಲ್ಲಿ 41 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ನೇಮಕ

ಕರ್ನಾಟಕ ಲೋಕಸೇವಾ ಆಯೋಗ ಭರ್ತಿ ಮಾಡಲಿರುವ ಗ್ರೂಪ್‌ 'ಎ' ತಾಂತ್ರಿಕ, ಗ್ರೂಪ್‌ 'ಬಿ' ತಾಂತ್ರಿಕ/ ತಾಂತ್ರಿಕೇತರ ಮತ್ತು ಗ್ರೂಪ್‌ ಸಿ ತಾಂತ್ರಿಕ ವೃಂದದ ಹುದ್ದೆಗಳಿಗೆ ಮತ್ತು ರಾಜ್ಯ ಪೊಲೀಸ್‌ ಇಲಾಖೆಯ ಇಂಟಲಿಜೆನ್ಸ್‌ ವಿಭಾಗದಲ್ಲಿನ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಜನವರಿ 15 (ಇಂದು ) ಕೊನೆಯ ದಿನವಾಗಿದೆ. ಕೆಪಿಎಸ್‌ಸಿ 1203 ಹುದ್ದೆಗಳಿಗೆ ನೇಮಕಾತಿ ನಡೆಸಲಿದ್ದು, ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

Vijaya Karnataka Web kpsc posting finall call for apply
ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ


ಅಂತೆಯೇ ಪೊಲೀಸ್‌ ಇಲಾಖೆಯಲ್ಲಿ 41 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು ಖಾಲಿ ಇವೆ. ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸದಿರುವ ಅಭ್ಯರ್ಥಿಗಳು ಇಂದು ಸಂಜೆ 5 ಗಂಟೆಯೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಕೆಪಿಎಸ್‌ಸಿ: http://kpsc.kar.nic.in/

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ