ಆ್ಯಪ್ನಗರ

ಪಿಡಿಒ: ಅರ್ಜಿ ಸಲ್ಲಿಸುವುದು ಹೇಗೆ?

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಜಿಪಿಎಸ್‌) ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ...

Vijaya Karnataka Web 16 Sep 2016, 12:15 pm

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಜಿಪಿಎಸ್‌) ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಮಾಹಿತಿ ಇಲ್ಲಿದೆ.

*ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಎರಡೂ ಹುದ್ದೆಗಳಿಗೂ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಒಂದು ಜಿಲ್ಲೆಗೆ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೆ ಮತ್ತೊಂದು ಜಿಲ್ಲೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

* ಅಭ್ಯರ್ಥಿಗಳು ಈ ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟಿನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ತಪ್ಪದೇ ಪಾಲಿಸಬೇಕು. ಸೂಚನೆಗಳನ್ನು ಪಾಲಿಸದಿರುವ ಅಭ್ಯರ್ಥಿಗಳು ಅನರ್ಹಗೊಳಿಸಲಾಗುತ್ತದೆ.

Vijaya Karnataka Web pdo how to apply
ಪಿಡಿಒ: ಅರ್ಜಿ ಸಲ್ಲಿಸುವುದು ಹೇಗೆ?


ಪಿಡಿಒ: ಇಂದಿನಿಂದ ಅರ್ಜಿ ಸಲ್ಲಿಸಿ

* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅಗತ್ಯ ಬಿದ್ದಾಗ ಈ ದಾಖಲೆಗಳನ್ನು ಹಾಜರು ಪಡಿಸಬೇಕು.

1.ಅಂತಿಮವಾಗಿ ಸಲ್ಲಿಸಿದ ಅರ್ಜಿಯ ಮೂರು ಪ್ರತಿ.

2. ಶುಲ್ಕವನ್ನು ಪಾವತಿಸಿರುವುದಕ್ಕೆ ಚಲನ್‌ ಪ್ರತಿ.

3.ಸ್ಕ್ಯಾ‌ನ್‌ ಮಾಡಿ ಸಲ್ಲಿಸಿರುವ ಅಭ್ಯರ್ಥಿಯ ಭಾವಚಿತ್ರದ 2-3 ಪ್ರತಿಗಳು.

4. ಪ್ರವೇಶ ಪತ್ರದ ಪ್ರತಿಗಳು.

* ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಾಧಿಕಾರವು ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್‌ ಸಂಖ್ಯೆಗೆ / ಇ-ಮೇಲ್‌ ವಿಳಾಸಕ್ಕೆ ರವಾನಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮೊಬೈಲ್‌ ನಂಬರ್‌ ಮತ್ತು ಇ-ಮೇಲ್‌ ವಿಳಾಸ ನೇಮಕ ಪ್ರಕ್ರಿಯೆ ಪೂರ್ಣವಾಗುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ.

* ಒಂದು ವೇಳೆ ನೀವು ತಪ್ಪಾಗಿ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದ್ದರೆ, ಈ ಕಾರಣದಿಂದ ಸಕಾಲದಲ್ಲಿ ಸಂದೇಶಗಳು ನಿಮಗೆ ತಲುಪದಿದ್ದಲ್ಲಿ ಅಂತಹ ಪ್ರPರಣಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

* ನೇಮಕಾತಿಯ ಮಾಹಿತಿ/ ಸೂಚನೆಗಳ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಎಲ್ಲಾ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ಅನ್ನು ಆಗಾಗ ನೋಡುವಂತೆ ಸೂಚಿಸಲಾಗಿದೆ.

* ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಹತೆಗಳನ್ನು ಮತ್ತು ಇತರ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮುಂದುವರೆಯಬೇಕು.

* ಅಭ್ಯರ್ಥಿಗಳು, ಆನ್‌ಲೈನ್‌ ಅರ್ಜಿ ನಮೂನೆಯಲ್ಲಿ ಒದಗಿಸಿರುವ ಮಾಹಿತಿ ಅಥವಾ ಅಭ್ಯರ್ಥಿಗಳು ಸಲ್ಲಿಸಿರುವ ಇನ್ನಿತರ ಯಾವುದೇ ದಾಖಲೆಗಳು ನಕಲಿ ದಾಖಲೆಗಳೆಂದು ಕಂಡುಬಂದ ಪಕ್ಷದಲ್ಲಿ ಅಭ್ಯರ್ಥಿಯ ಅಭ್ಯರ್ಥಿತನವನ್ನು, ರದ್ದು ಪಡಿಸಿ, ನೇಮಕಾತಿಯಿಂದ ಯಾವುದೇ ಹಂತದಲ್ಲಿ ಕೈ ಬಿಡಲಾಗುತ್ತದೆ ಮತ್ತು ಅಂತಹ ಅಭ್ಯರ್ಥಿಯ ವಿರುದ್ಧ ಸರಕಾರದಿಂದ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಲಾಗುತ್ತದೆ.

* ಎಲ್ಲಾ ಸಂಬಂಧಿಸಿದ ದಾಖಲೆಗಳು / ಅಂಕ ಪಟ್ಟಿಗಳು / ಪದವಿಯ ಪ್ರಮಾಣಪತ್ರಗಳು-ಅಂಕಪಟ್ಟಿಗಳು /ಮೀಸಲಾತಿಯ ಪ್ರಮಾಣಪತ್ರಗಳು ಹಾಗು ಇನ್ನಿತರ ಅವಶ್ಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು

ನಿಗದಿಪಡಿಸಿರುವ ಕೊನೆಯ ದಿನಾಂಕ ಅಥವಾ ಅದಕ್ಕೂ ಮೊದಲಿನ ದಿನಾಂಕದೊಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಡೆದಿರಬೇಕು.

* ಕೇವಲ ಅರ್ಜಿಯನ್ನು ಸಲ್ಲಿಸದ ಮಾತ್ರಕ್ಕೆ ಅಭ್ಯರ್ಥಿಯು ನೇಮಕಾತಿಗೆ ಅರ್ಹತೆಯನ್ನು ಪಡೆದಿರುವ ಹಕ್ಕನ್ನು ಹೊಂದಿರುವೆನೆಂದು ಭಾವಿಸಬಾರದು ದಾಖಲೆಗಳ ಪರಿಶೀಲನೆಯ ನಂತರವೇ ಅಭ್ಯರ್ಥಿಗಳು ಸಲ್ಲಿಸುವ ಮಾಹಿತಿಗಳನ್ನು ಪರಿಗಣಿಸಲಾಗುವುದು.

* ಸಂಪೂರ್ಣವಾಗಿ ಎಲ್ಲಾ ಮಾಹಿತಿಗಳನ್ನು ಓದಿ ಅರ್ಥ ಮಾಡಿಕೊಂಡಿದ್ದೇನೆಂದು ಅಭ್ಯರ್ಥಿಗಳು ಒಪ್ಪಿಗೆಯನ್ನು ಸೂಚಿಸಿದ ನಂತರವೇ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಅಭ್ಯರ್ಥಿಯ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

* ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ದಾಖಲೆಗಳನ್ನು ಸಿದ್ದವಾಗಿ ಇಟ್ಟುಕೊಂಡು ನಂತರ ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಬೇಕು.

1. JPG Format ನಲ್ಲಿ ಸ್ಕ್ಯಾ‌ನ್‌ ಮಾಡಿದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ.

2. JPG Format ನಲ್ಲಿ ಸ್ಕ್ಯಾ‌ನ್‌ ಮಾಡಿದ ಅಭ್ಯರ್ಥಿಯ ಸಹಿ.

3. JPG Formatನಲ್ಲಿ ಸ್ಕ್ಯಾ‌ನ್‌ ಮಾಡಿದ ಅಭ್ಯರ್ಥಿಯ ಎಡಗೈ ಹೆಬ್ಬೆರಳ ಗುರುತು.

4. ಹೆಸರು, ಜನ್ಮ ದಿನಾಂಕ, ನೊಂದಣಿ ಸಂಖ್ಯೆ ಮತ್ತು ತೇರ್ಗಡೆಯಾದ ವರ್ಷವನ್ನು ದಾಖಲಿಸಲು ಎಸ್‌ಎಸ್‌ಎಲ್‌ಸಿ / 10ನೇ ತರಗತಿಯ ಅಂಕಪಟ್ಟಿ.

5. ಅಂಕಗಳನ್ನು / ತೇರ್ಗಡೆಯಾದ ವರ್ಷವನ್ನು ದಾಖಲಿಸಲು ಪದವಿ ಕೋರ್ಸಿನ ಎಲ್ಲಾ ವರ್ಷದ ಸೆಮಿಸ್ಟರ್‌ನ ಅಂಕಪಟ್ಟಿಗಳು.

* ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಖಾಲಿ ಇರುವ ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಡೌನ್‌ಲೋಡ್‌ ಮಾಡಿ ಅರ್ಜಿ ತುಂಬುವ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳಬಹುದು.

* ಅಭ್ಯರ್ಥಿಗಳು ಅಂತಿಮವಾಗಿ ಸಲ್ಲಿಸುವ ಅರ್ಜಿಯಲ್ಲಿನ ಮಾಹಿತಿ /ವಿವರಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲಾಗುವುದರಿಂದ ಮಾಹಿತಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು ಮತ್ತು ಅಭ್ಯರ್ಥಿಯ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬರಿಳಿನ ಗುರುತು ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು / ಪ್ರಮಾಣಪತ್ರಗಳನ್ನು ಅಪ್‌ ಲೋಡ್‌ ಮಾಡುವಂತಿಲ್ಲ.

ಹೀಗೆ ಅರ್ಜಿ ಸಲ್ಲಿಸಿ

* ಪ್ರಾಧಿಕಾರದ ವೆಬ್‌ನಲ್ಲಿ ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್‌ ಅನ್ನು ಒತ್ತಿ. ಅಲ್ಲಿ ಕಾಣಿಸುವ ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಲು ಪ್ರಾರಂಭಿಸಿ.

* ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಿ ಮುಕ್ತಾಯವಾದ ನಂತರ P್ಟಛಿvಜಿಛಿಡಿ ಅನ್ನು ಆಯ್ಕೆ ಮಾಡಿ.

* ನೀವು ದಾಖಲಿಸಿರುವ ಎಲ್ಲಾ ವಿವರಗಳು ಪರದೆಯ ಮೇಲೆ ಕಾಣಿಸುತ್ತದೆ. ಸರಿಯಾಗಿದೆಯೇ ಎಂದು ಪರೀಕ್ಷಿಸಿ, ಏನಾದರು ಬದಲಾವಣೆ ಮಾಡಬೇಕಿದ್ದಲ್ಲಿ declaration ಮಾಡುವ ಮೊದಲು ಬದಲಾಯಿಸಿ. ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಂಡು savಛಿ ಬಟನ್‌ ಅನ್ನು ಒತ್ತಿ.

* ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬರಿಳಿನ ಗುರುತನ್ನು ಅಪ್‌ಲೋಡ್‌ ಮಾಡಿ.

* ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳು ದಾಖಲಿಸಿದ ಮೊಬೈಲ್‌ ಸಂಖ್ಯೆಗೆ ಅರ್ಜಿ ಐಡಿ ಯನ್ನು ಕಳುಹಿಸಲಾಗುತ್ತದೆ ಹಾಗು ಅದೇ ಅರ್ಜಿ ಐಡಿಯನ್ನು

ಪರದೆಯ ಮೇಲೆ ತೋರಿಸಲಾಗುತ್ತದೆ.

* ಅಭ್ಯರ್ಥಿಗಳು ಚಲನ್‌ನ ಪ್ರತಿಯನ್ನು ಪ್ರಿಂಟ್‌ ತೆಗೆದುಕೊಳ್ಳಬೇಕು.

* ಅಭ್ಯರ್ಥಿಗಳು ಕರ್ನಾಟಕದಲ್ಲಿನ ಯಾವುದೇ ಇ-ಅಂಚೆ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕು. ಇ-ಅಂಚೆ ಕಚೇರಿಯವರು ಒಂದು ಪ್ರತಿಯನ್ನು ಇಟ್ಟುಕೊಂಡು ಉಳಿದ

ಪ್ರತಿಯನ್ನು ಅಭ್ಯರ್ಥಿಗೆ ಹಿಂದಿರುಗಿಸುತ್ತಾರೆ.

* ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಿದ ನಂತರ ಅರ್ಜಿಯ ಪ್ರಿಂಟ್‌ ಅನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಅಗತ್ಯವಿದ್ದಾಗ ಹಾಜರು ಪಡಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ