ಆ್ಯಪ್ನಗರ

ಸೈಕಾಲಜಿ ಓದಿದರೆ ಉದ್ಯೋಗಾವಕಾಶ

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ 5 ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. ಸಂದರ್ಶನ ದಿನಾಂಕ 2016ರ ಮಾರ್ಚ್ 21 ಬೆಳಿಗ್ಗೆ 11 ಗಂಟೆಗೆ. ಗರಿಷ್ಠ ವಯೋಮಿತಿ 35 ವರ್ಷ

Vijaya Karnataka Web 19 Mar 2016, 4:10 am
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ 5 ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. ಸಂದರ್ಶನ ದಿನಾಂಕ 2016ರ ಮಾರ್ಚ್ 21 ಬೆಳಿಗ್ಗೆ 11 ಗಂಟೆಗೆ. ಗರಿಷ್ಠ ವಯೋಮಿತಿ 35 ವರ್ಷ
Vijaya Karnataka Web psychology careers
ಸೈಕಾಲಜಿ ಓದಿದರೆ ಉದ್ಯೋಗಾವಕಾಶ


ಹುದ್ದೆ ಮತ್ತು ವಿದ್ಯಾರ್ಹತೆ

ಸೀನಿಯರ್ ಇನ್ವೆಸ್ಟಿಗೇಟರ್-01ಹುದ್ದೆ ಖಾಲಿ ಇದ್ದು, ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂಫಿಲ್ ಓದಿದವರು ಹಾಗೂ ಕ್ಲಿನಿಕಲ್ ಸೈಕಾಲಜಿ/ನ್ಯೂರೋ ಸೈಕಾಲಜಿಗೆ ಸಂಬಂಧಿಸಿದ ಅಸೈನ್‌ಮೆಂಟ್ ಹಾಗೂ ರಿಸರ್ಚ್ ಪ್ರಾಜೆಕ್ಟ್‌ಗಳಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವವಿರುವವರು ಈ ಹುದ್ದೆಗೆ ಅರ್ಹರು.

ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-02 ಹುದ್ದೆಗಳಿದ್ದು, ವಿಜ್ಞಾನ ವಿಷಯದಲ್ಲಿ ಪದವಿ ಓದಿರಬೇಕು. ಹಾಗೂ ಮೂರು ವರ್ಷ ಲ್ಯಾಬ್/ ಫೀಲ್ಡ್‌ನಲ್ಲಿ ಕೆಲಸ ಮಾಡಿದ ಅನುಭವವಿರಬೇಕು.

ಪ್ರೋಗ್ರಾಮರ್ -ಖಾಲಿ ಇರುವ 01 ಹುದ್ದೆಗೆ, ಕಂಪ್ಯೂಟರ್ ಅಪ್ಲಿಕೇಶನ್, ಇನ್‌ಫಾರ್ಮೇಶನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇಲ್ಲವೇ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿಟೆಕ್ ಓದಿರಬೇಕು.

ಟೆಕ್ನಿಕಲ್ ಅಸಿಸ್ಟೆಂಟ್- 01 ಹುದ್ದೆ ಖಾಲಿ ಇದ್ದು, ಅಕೌಂಟ್/ಐಟಿ ಹಾಗೂ ಕಂಪ್ಯೂಟರ್ ಜ್ಞಾನವಿರುವವರು ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ ನಡೆಯುವ ಸ್ಥಳ: ಕಮಿಟಿ ರೂಮ್, ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ನಿಮ್ಹಾನ್ಸ್, ಬೆಂಗಳೂರು-560029

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: http://nimhans.ac.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ