ಆ್ಯಪ್ನಗರ

ಎಸ್‌ಬಿಐನಲ್ಲಿ ಮ್ಯಾನೇಜರ್ ಆಗಲು ಅವಕಾಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಬ್ಯಾಂಕ್‌ನ ಮುಂಬೈನ ಸೆಂಟ್ರಲ್ ರಿಕ್ರುಟ್‌ಮೆಂಟ್ ಆ್ಯಂಡ್ ಪ್ರಮೋಷನ್ ಡಿಪಾರ್ಟ್‌ಮೆಂಟ್(ಸಿಆರ್‌ಪಿಡಿ)ಯು ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ.

Vijaya Karnataka Web 21 Mar 2016, 4:30 am
ಒಟ್ಟು ಹುದ್ದೆಗಳು: 151
Vijaya Karnataka Web sbi chance manager
ಎಸ್‌ಬಿಐನಲ್ಲಿ ಮ್ಯಾನೇಜರ್ ಆಗಲು ಅವಕಾಶ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಬ್ಯಾಂಕ್‌ನ ಮುಂಬೈನ ಸೆಂಟ್ರಲ್ ರಿಕ್ರುಟ್‌ಮೆಂಟ್ ಆ್ಯಂಡ್ ಪ್ರಮೋಷನ್ ಡಿಪಾರ್ಟ್‌ಮೆಂಟ್(ಸಿಆರ್‌ಪಿಡಿ)ಯು ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಅಕ್ವಿಷನ್ ರಿಲೇಷನ್‌ಶಿಪ್ ಮ್ಯಾನೇಜರ್, ರಿಲೇಷನ್‌ಶಿಪ್ ಮ್ಯಾನೇಜರ್, ವಲಯವಾರು ಮುಖ್ಯಸ್ಥರು, ರಿಸ್ಕ್ ಆಫೀಶರ್, ಇನ್ವೆಸ್ಟ್‌ಮೆಂಟ್ ಕೌನ್ಸೆಲರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ಖಾಲಿ ಇದೆ. ಅರ್ಜಿ ಶುಲ್ಕ 600 ರೂಪಾಯಿ.

ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31, 2016 ಕೊನೆಯ ದಿನಾಂಕವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಪ್ರಿಂಟ್ ತೆಗೆದು ಏಪ್ರಿಲ್ 7ರ ಮೊದಲು ಅಂಚೆ ಮೂಲಕ ಸಲ್ಲಿಸಬೇಕು. ವಿಳಾಸ: ಸೆಂಟ್ರಲ್ ರಿಕ್ರುಟ್‌ಮೆಂಟ್ ಆ್ಯಂಡ್ ಪ್ರಮೋಷನ್ ಡಿಪಾರ್ಟ್‌ಮೆಂಟ್, ಕಾರ್ಪೊರೇಟ್ ಸೆಂಟರ್, ಅಟ್ಲಾಂಟಾ ಬಿಲ್ಡಿಂಗ್, ನಾರಿಮಾನ್ ಪಾಯಿಂಟ್. ಮುಂಬೈ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್: www.sbi.co.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ