ಆ್ಯಪ್ನಗರ

ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ

ಕಲಬುರಗಿ ಜಿಲ್ಲಾ ಪಂಚಾಯತ್‌ ಕಾರ್ಯಾಲಯವು ತೆರಿಗೆ ವಸೂಲಿಗಾರರು, ಲೆಕ್ಕಿಗ, ಬೆರಳ್ಚುಗಾರ ವೃಂದದ ಕೋಟದಡಿಯಲ್ಲಿ ಸ್ಥಳೀಯ ಮತ್ತು ಸ್ಥಳೀಯೇತರ ವೃಂದದಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್‌ ಕಾರ್ಯದರ್ಶಿ (ಗ್ರೇಡ್‌-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.

Vijaya Karnataka 25 Feb 2019, 1:46 pm
ಕಲಬುರಗಿ ಜಿಲ್ಲಾ ಪಂಚಾಯತ್‌ ಕಾರ್ಯಾಲಯವು ತೆರಿಗೆ ವಸೂಲಿಗಾರರು, ಲೆಕ್ಕಿಗ, ಬೆರಳ್ಚುಗಾರ ವೃಂದದ ಕೋಟದಡಿಯಲ್ಲಿ ಸ್ಥಳೀಯ ಮತ್ತು ಸ್ಥಳೀಯೇತರ ವೃಂದದಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್‌ ಕಾರ್ಯದರ್ಶಿ (ಗ್ರೇಡ್‌-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಆಸಕ್ತರು ಮಾರ್ಚ್‌ 2ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
Vijaya Karnataka Web jobs


ಖಾಲಿ ಇರುವ ಒಟ್ಟು ಹುದ್ದೆಗಳು 44

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 2, 2019

ಅರ್ಜಿ ಸಲ್ಲಿಸುವುದು ಎಲ್ಲಿ?: ಜಿಲ್ಲಾ ಪಂಚಾಯತ್‌, ಕಲಬುರಗಿ

ಹುದ್ದೆಗಳ ವಿವರ

ಹೈದರಾಬಾದ್‌ -ಕರ್ನಾಟಕ ಗ್ರೇಡ್‌ -2 ಕಾರ್ಯದರ್ಶಿ -15 ಹುದ್ದೆಗಳು , ಸ್ಥಳೀಯೇತರ ವೃಂದ (ಗ್ರೇಡ್‌ -2 ಕಾರ್ಯದರ್ಶಿ) -23 ಹಾಗೂ ಸ್ಥಳೀಯೇತರ ವೃಂದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ-6 ಹುದ್ದೆಗಳು ಸೇರಿ ಒಟ್ಟು 44 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಅರ್ಹತೆಗಳೇನು?

* ಬಿಲ್‌ ಕಲೆಕ್ಟರ್‌ ಆಗಿ 8 ವರ್ಷ ಹಾಗೂ 10 ವರ್ಷ ಸೇವೆ ಪೂರೈಸಿರುವ ಹಾಗೂ ಜಿಲ್ಲಾ ಪಂಚಾಯತ್‌ನಿಂದ ಪ್ರಕಟಿಸಿರುವ ಅನುಮೋದಿತ ಜೇಷ್ಠತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

* ಅಭ್ಯರ್ಥಿಗಳು ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.

*ಬಿಲ್‌ ಕಲೆಕ್ಟರ್‌ ಆಗಿ ಸೇವೆಗೆ ಸೇರಿದ ದಿನದಂದು ಇಂದಿನವರೆಗೆ ಸತತವಾಗಿ ನಿರಂತರ ಸೇವೆಯಲ್ಲಿರುವ ಬಗ್ಗೆ ಪಿಡಿಒನಿಂದ ಪ್ರಮಾಣ ಪತ್ರ ಸಲ್ಲಿಸಬೇಕು.

*ಕಂಪ್ಯೂಟರ್‌ ಜ್ಞಾನದ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು.

*ಸ್ಥಳೀಯ ವೃಂದದಲ್ಲಿ ಅರ್ಜಿ ಸಲ್ಲಿಸುವವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಬೇಕು.

ಅರ್ಜಿ ಶುಲ್ಕ ಎಷ್ಟು?

ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ 250 ರೂ. ಹಾಗೂ ಸಾಮಾನ್ಯ ಮತ್ತು ಇತರೆ ಪ್ರವರ್ಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು 'ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಕಲಬುರಗಿ' ಹೆಸರಿನಲ್ಲಿ ಪಡೆದ ಪೋಸ್ಟಲ್‌ ಆರ್ಡರ್‌ ಸಲ್ಲಿಸಿ ಜಿಲ್ಲಾಪಂಚಾಯತ್‌ ಕಚೇರಿಯ ಆಡಳಿತ ಶಾಖೆಯಲ್ಲಿ ಪಾವತಿಸಿ ಅರ್ಜಿಗಳನ್ನು ಪಡೆಯಲು ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ