ಆ್ಯಪ್ನಗರ

ಟೆಕ್‌ ಟಿಪ್ಸ್‌ : ಬ್ಲಾಗ್‌ಗಳ ಬಳಕೆ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಬ್ಲಾಗ್‌ಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.

Vijaya Karnataka Web 3 Nov 2016, 4:19 am
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಬ್ಲಾಗ್‌ಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬ ಕುರಿತ ಮಾಹಿತಿ ಇಲ್ಲಿದೆ.
Vijaya Karnataka Web tech tips
ಟೆಕ್‌ ಟಿಪ್ಸ್‌ : ಬ್ಲಾಗ್‌ಗಳ ಬಳಕೆ


* ಬ್ಯಾಂಕ್‌, ಯುಪಿಎಸ್‌ಸಿ ಮತ್ತು ಎಸ್‌ಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಉಪಯುಕ್ತವಾದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಹಲವಾರು ಬ್ಲಾಗ್‌ಗಳಿದ್ದು, ಅವುಗಳನ್ನು ಹುಡುಕಿಕೊಂಡು ಬುಕ್‌ ಮಾರ್ಕ್‌ ಮಾಡಿಕೊಳ್ಳಿ.

* ಬ್ಲಾಗ್‌ನಲ್ಲಿನ ಅಧ್ಯಯನ ಸಾಮಗ್ರಿಗಳನ್ನು ಓದುವ ಮೊದಲು ಇದನ್ನು ಪೋಸ್ಟ್‌ ಮಾಡಿದವರು ಯಾರು, ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

* ನಿರ್ಧಿಷ್ಟ ಪರೀಕ್ಷೆಗೆ ಸಂಬಂಧಿಸಿದ ಹತ್ತಾರು ಬ್ಲಾಗ್‌ಗಳಿರುತ್ತವೆ. ಇದರಲ್ಲಿನ ಮಾದರಿ ಪ್ರಶ್ನೆ ಪತ್ರಿಕೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳ ಪಟ್ಟಿಯನ್ನು ಅಧ್ಯಯನ ಮಾಡಿ, ಇದರಿಂದ ವಿಷಯ ಹುಡುಕಲು ಸಮಯ ವ್ಯರ್ಥಮಾಡುವುದು ತಪ್ಪುತ್ತದೆ.

*ಕೆಲ ಬ್ಲಾಗ್‌ಗಳು ಅಧ್ಯಯನಕ್ಕೆ ಸಂಬಂಧಿಸಿದ ಸಾಮಗ್ರಿ ಒದಗಿಸುವುದರ ಜತೆಗೆ ಗೊಂದಲಗಳನ್ನು ಬಗೆಹರಿಸುವ ವೇದಿಕೆಯೂ ಆಗಿ ಕಾರ್ಯನಿರ್ವಹಿಸುತ್ತವೆ. ನೀವು ಇಲ್ಲಿ ತಜ್ಞರೊಂದಿಗೆ ಚರ್ಚೆ ಕೂಡ ನಡೆಸಬಹುದು.

* ಪರೀಕ್ಷೆಯ ಮಾಹಿತಿ ನೀಡುವ ನೆಪದಲ್ಲಿ ಪರೀಕ್ಷಾರ್ಥಿಗಳನ್ನು, ಉದ್ಯೋಗಾಕಾಂಕ್ಷಿಗಳನ್ನು ವಂಚಿಸುವ ಬ್ಲಾಗ್‌ಗಳು ಕೂಡ ಇವೆ. ಈ ಬಗ್ಗೆ ಎಚ್ಚರವಿರಲಿದೆ. ಯಾವುದೇ ಬ್ಲಾಗ್‌ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.

*ಪರೀಕ್ಷೆಗೆ ನೀವು ನಡೆಸುತ್ತಿರುವ ಸಿದ್ಧತೆಯ ಪ್ರಯೋಜನವನ್ನು ಬೇರೆಯವರೂ ಪಡೆದುಕೊಳ್ಳಲಿ ಎಂಬ ಮನಸ್ಸಿದ್ದರೆ, ಬಿಡುವಿದ್ದರೆ ನೀವೂ ಒಂದು ಬ್ಲಾಗ್‌ ಆರಂಭಿಸಬಹುದು. ನೀವು ಓದಿ ಟಿಪ್ಪಣಿ ಮಾಡಿಕೊಂಡ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಇದು ಬೇರೆಯವರಿಗೂ ಉಪಯೋಗಕ್ಕೆ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ