ಆ್ಯಪ್ನಗರ

ಟಿಇಟಿಗೆ ತಯಾರಿ ಹೇಗಿರಬೇಕು?

ಪಿಯುಸಿಯಲ್ಲಿ ಯಾವ ಕಾಂಬೀನೇಷನ್‌ ಆಯ್ದುಕೊಂಡರೆ ಉದ್ಯೋಗಾವಕಾಶಗಳು ಹೆಚ್ಚಿವೆ ಮತ್ತು ಟಿಇಟಿ ಪ್ರಶ್ನೆಪತ್ರಿಕೆ ಮಾದರಿ ಹೇಗಿರುತ್ತದೆ ಎಂಬುದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

Vijaya Karnataka Web 2 Nov 2016, 4:00 am

ಪಿಯುಸಿಯಲ್ಲಿ ಯಾವ ಕಾಂಬೀನೇಷನ್‌ ಆಯ್ದುಕೊಂಡರೆ ಉದ್ಯೋಗಾವಕಾಶಗಳು ಹೆಚ್ಚಿವೆ ಮತ್ತು ಟಿಇಟಿ ಪ್ರಶ್ನೆಪತ್ರಿಕೆ ಮಾದರಿ ಹೇಗಿರುತ್ತದೆ ಎಂಬುದರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

1. ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿಯಲ್ಲಿ ವಿಜ್ಞ್ಞಾನ ಅಥವಾ ವಾಣಿಜ್ಯ ಕೋರ್ಸ್‌-ಇವೆರಡರಲ್ಲಿ ಯಾವುದು ಉತ್ತಮ? ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಯಾವ ಯಾವ ವಿಷಯದ ಕಾಂಬಿನೇಷನ್‌ಗಳು ಸೂಕ್ತವಾಗಿರುತ್ತವೆ ಮತ್ತು ಯಾವುದರಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ?

-10ನೇ ತರಗತಿಯ ವಿದ್ಯಾರ್ಥಿಗಳು, ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ

10ನೇ ತರಗತಿಯ ನಂತರ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಭಾಗಗಳಲ್ಲಿ ಹಲವು ಕಾಂಬೀನೇಷನ್‌ಗಳಿವೆ. ಪ್ರತಿಯೊಂದು ವಿಷಯವು ಕೂಡ ಅಷ್ಟೇ ಆಸಕ್ತಿದಾಯಕವಾಗಿವೆ. ನಿಮಗೆ ಯಾವ ವಿಷಯದಲ್ಲಿ ಹೆಚ್ಚಿನ ಒಲವಿದೆಯೋ ಆ ವಿಷಯದ ಕಾಂಬಿನೇಷನ್‌ ಅನ್ನು ಆಯ್ಕೆಮಾಡಿಕೊಳ್ಳಬಹುದು. ಕೆಲವು ಕಾಲೇಜುಗಳಲ್ಲಿ ಎಲ್ಲಾ ವಿಷಯದ ಕಾಂಬಿನೇಷನ್‌ಗಳು ಲಭ್ಯವಿರುವುದಿಲ್ಲ. ಹಾಗಾಗಿ ನೀವು ಅರ್ಜಿಯನ್ನು ಸಲ್ಲಿಸುತ್ತಿರುವ ಕಾಲೇಜಿನಲ್ಲಿ ಒಮ್ಮೆ ವಿಚಾರಿಸಿ ನಂತರ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು.

*ವಿಜ್ಞಾನ ವಿಭಾಗದಲ್ಲಿ ಲಭ್ಯವಿರುವ ಕೆಲವು ಪ್ರತಿಷ್ಠಿತ ವಿಷಯದ ಕಾಂಬಿನೇಷನ್‌ಗಳು ಇಂತಿವೆ; ಕೆಲವು ಮುಖ್ಯವಾದ ವಿಷಯಗಳೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಸ್ಟ್ಯಾಟಿಸ್ಟಿಕ್ಸ್‌ ಇತ್ಯಾದಿ.

*ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ, ಅಕೌಂಟೆನ್ಸಿ, ಬಿಸಿನೆಸ್‌ ಮ್ಯಾಥ್ಸ್‌, ಬಿಸಿನೆಸ್‌ ಸ್ಟಡೀಸ್‌, ಸ್ಟ್ಯಾಟಿಸ್ಟಿಕ್ಸ್‌ , ಇತಿಹಾಸ, ಭೂಗೋಳಶಾಸ್ತ್ರ ಇತ್ಯಾದಿ ವಿಷಯಗಳು ಲಭ್ಯವಿರುತ್ತವೆ.

*ಕಲಾ ವಿಭಾಗದಲ್ಲಿ ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಮನೋಜ್ಞಾನ, ರಾಜ್ಯಶಾಸ್ತ್ರ, ಸಮೂಹ ಮಾಧ್ಯಮ, ಕನ್ನಡ ಭಾಷೆ, ಇಂಗ್ಲಿಷ್‌ ಭಾಷೆ, ಭೂಗೋಳಶಾಸ್ತ್ರ ಇತ್ಯಾದಿ ವಿಷಯಗಳ ಕಾಂಬಿನೇಷನ್‌ ಲಭ್ಯವಿರುತ್ತವೆ.

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸ ಪಡೆಯಲು ಬೇಕಾಗಿರುವುದು ನಿಮ್ಮಲ್ಲಿರುವ ಕೌಶಲ. ನೀವು ಯಾವುದೇ ವಿಷಯವನ್ನು ಓದಿದರೂ ಆ ಕೆಲಸಕ್ಕೆ ಬೇಕಾಗಿರುವ ಕೌಶಲ ನಿಮ್ಮಲ್ಲಿದ್ದರೆ ಕೆಲಸ ಗ್ಯಾರಂಟಿ. ಪ್ರತಿಭಾವಂತ ಅಭ್ಯರ್ಥಿಗಳಿಗೆ ಅವಕಾಶಗಳು ಸದಾ ಕಾಯುತ್ತಿರುತ್ತವೆ. ಹಾಗಾಗಿ ನಿಮಗೆ ಇಷ್ಟರುವ ವಿಷಯವನ್ನು ಆಯ್ದುಕೊಂಡು ಅದರಲ್ಲಿ ಉತ್ತಮ ಸಾಧನೆಯನ್ನು ಮಾಡಿ.

2. ನಾನು 2007ರಲ್ಲಿ ಡಿಎಡ್‌ ಪೂರ್ಣಗೊಳಿಸಿದ್ದೇನೆ. ಈಗ ಟಿಇಟಿ ಬರೆಯಲು ನಿರ್ಧರಿಸಿದ್ದೇನೆ. ಈ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಸಲಹೆ ನೀಡಿ.

-ಶ್ರೀಹರ್ಷ.ಡಿ., ಗೌರಿಬಿದನೂರು

ಕೇಂದ್ರ ಅಥವಾ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ 1 ರಿಂದ 8ನೇ ತರಗತಿಯ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಅರ್ಹತೆ ಪಡೆದಿರಬೇಕು. ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಶನ್‌ ಮಾರ್ಗಸೂಚಿಯ ಪ್ರಕಾರ, ಈ ಪರೀಕ್ಷೆ ನಡೆಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಬೇರೆಬೇರೆಯಾಗಿ ಈ ಪರೀಕ್ಷೆ ನಡೆಸುತ್ತವೆ.

ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಶಾಲೆಗಳಲ್ಲಿ ಶಿಕ್ಷಕರಾಗಲು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ( CTET )ಬರೆಯಬೇಕು. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಶಾಲೆಗಳಲ್ಲಿ ಶಿಕ್ಷಕರಾಗಲು ರಾಜ್ಯ ಸರ್ಕಾರವು ನಡೆಸುವ ಟಿಇಯಲ್ಲಿ ಅರ್ಹತೆ ಪಡೆಯಬೇಕು. ಕೆಲವು ಖಾಸಗಿ ಶಾಲೆಗಳು ಕೂಡ ಈ ಪರೀಕ್ಷೆಯ ಅರ್ಹತೆಯನ್ನು ಶಿಕ್ಷಕರ ನಿಯುಕ್ತಿಯ ಸಮಯದಲ್ಲಿ ಪರಿಗಣಿಸುತ್ತವೆ. ಪ್ರಸ್ತುತ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ಇTಉT ನಡೆಸುತ್ತದೆ. ವರ್ಷದಲ್ಲಿ ಎರಡು ಬಾರಿ ಈ ಪರೀಕ್ಷೆ ನಡೆಸಲಾಗುತ್ತದೆ.

CTET ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆ-1 ಕೇವಲ 1 ರಿಂದ 5ನೇ ತರಗತಿಯ ಶಿಕ್ಷಕರಿಗೆ ಹಾಗೂ ಪತ್ರಿಕೆ-2 ಕೇವಲ 6 ರಿಂದ 8ನೇ ತರಗತಿಯ ಶಿಕ್ಷಕರಿಗೆ. ಒಂದು ವೇಳೆ 1 ರಿಂದ 8ನೇ ತರಗತಿಗಳಲ್ಲಿ ಪಾಠಮಾಡಲು ಅರ್ಹತೆಯನ್ನು ಪಡೆಯಬೇಕಾದರೆ ಪತ್ರಿಕೆ-1 ಮತ್ತು ಪತ್ರಿಕೆ-2 ಎರಡನ್ನು ಬರೆಯಬೇಕು. ಎರಡೂ ಪತ್ರಿಕೆಗಳು ವಸ್ತುನಿಷ್ಠ ಮಾದರಿಯ ಬಹುಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತವೆ.

Vijaya Karnataka Web tet question paper pattern
ಟಿಇಟಿಗೆ ತಯಾರಿ ಹೇಗಿರಬೇಕು?


ಕರ್ನಾಟಕ ರಾಜ್ಯ ಸರ್ಕಾರವು ನಡೆಸುವ TಉT ಕೇಂದ್ರದ ಮಾದರಿಯನ್ನೇ ಅನುಸರಿಸುತ್ತದೆ. TET ತೆಗೆದುಕೊಳ್ಳಲು ವಯಸ್ಸಿನ ಮಿತಿಯಿಲ್ಲ.ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದು. ಈ ಪರೀಕ್ಷೆಗಾಗಿ ನೀವು ಎನ್‌ಸಿಟಿಇ ಸಂಸ್ಥೆ ಶಿಫಾರಸು ಮಾಡಿರುವ ಪುಸ್ತಕಗಳನ್ನು ಓದಿದರೆ ಹೆಚ್ಚು ಅನುಕೂಲವಾಗುತ್ತದೆ. ಇನ್ನುಳಿದಂತೆ ಆಯಾ ವಿಷಯಕ್ಕೆ ಸಂಬಂಧಿಸಿದ ಪದವಿ ಮಟ್ಟದ ಪುಸ್ತಕಗಳನ್ನು ಅಭ್ಯಾಸಮಾಡಬಹುದು. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ: http://ctet.nic.in ಮತ್ತು http://kartet.caconline.in

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ