ಆ್ಯಪ್ನಗರ

ಮನೆಯನ್ನೇ ಆಫೀಸ್ ಮಾಡಿ

ಮನೆಯಿಂದಲೇ ಕೆಲಸ ಮಾಡಬೇಕೆಂದು ಹೆಚ್ಚಿನವರ ಕನಸಾಗಿರುತ್ತದೆ. ಕಚೇರಿಯ ಕಿರಿಕಿರಿ, ಟ್ರಾಫಿಕ್‌ನ ಜಂಜಾಟ, ಮನೆಯ ಕೆಲಸವನ್ನು ನಿಭಾಯಿಸಲು ಅಸಾಧ್ಯವಾಗುವುದರಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಆಸಕ್ತವಹಿಸುತ್ತಾರೆ.

Vijaya Karnataka Web 28 Jun 2016, 6:38 pm
ಮನೆಯಿಂದಲೇ ಕೆಲಸ ಮಾಡಬೇಕೆಂದು ಹೆಚ್ಚಿನವರ ಕನಸಾಗಿರುತ್ತದೆ. ಕಚೇರಿಯ ಕಿರಿಕಿರಿ, ಟ್ರಾಫಿಕ್‌ನ ಜಂಜಾಟ, ಮನೆಯ ಕೆಲಸವನ್ನು ನಿಭಾಯಿಸಲು ಅಸಾಧ್ಯವಾಗುವುದರಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಆಸಕ್ತವಹಿಸುತ್ತಾರೆ. ಆದರೆ ಮನೆಯಿಂದಲೇ ಕೆಲಸ ಮಾಡುವುದಕ್ಕೂ ಮುನ್ನ ಮನೆಯ ಒಂದು ಕೊಠಡಿಯನ್ನು ಕಾರ್ಯ ಕ್ಷೇತ್ರವನ್ನಾಗಿ ಬದಲಾವಣೆ ಮಾಡುವುದು ಕೂಡ ಅಗತ್ಯ.
Vijaya Karnataka Web work from home
ಮನೆಯನ್ನೇ ಆಫೀಸ್ ಮಾಡಿ


*ಸೂಕ್ತ ಜಾಗವನ್ನು ಆಯ್ಕೆ ಮಾಡಿ:

ಮನೆಯಲ್ಲಿ ನೀವೊಬ್ಬರೇ ಇದ್ದರೆ, ಮನೆಯ ಸಂಪೂರ್ಣ ಜಾಗ ನಿಮ್ಮದೇ ಎಂದು ನಿಮಗನಿಸುತ್ತಿರುತ್ತದೆ. ನಿಮ್ಮ ಬೆಡ್‌ನ ಮೇಲೆಯೇ ಎಲ್ಲ ಪೇಪರ್‌ಗಳನ್ನು, ಲ್ಯಾಪ್‌ಟಪ್‌ ಅನ್ನು ಹರಡಿಕೊಂಡು ಕೆಲಸ ಮಾಡಲು ಇಷ್ಟಪಡುವುದು ಸಹಜ. ಆದರೆ ವಾಸ ಮತ್ತು ಕೆಲಸದ ಜಾಗವನ್ನು ಮಿಶ್ರಣ ಮಾಡುವುದು ಸರಿಯಲ್ಲ. ನೀವು ಬೆಡ್‌ರೂಮ್‌ನಲ್ಲೇ ಕೆಲಸ ಮಾಡಲು ಇಷ್ಟಪಟ್ಟರೆ ಅಲ್ಲಿಯೇ ಒಂದು ಕಾರ್ನರ್‌ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಬೆಳಕು ಇರಲಿ:

ಕೆಲಸ ಮಾಡುವ ಸ್ಥಳದಲ್ಲಿ ಸಾಕಷ್ಟು ಬೆಳಕು ಇರಲಿ. ಇದು ನಿಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಫಂಕಿ ಲ್ಯಾಂಪ್‌ಗಳನ್ನು ಅಳವಡಿಸಿ ಅಥವಾ ಸಾಕಷ್ಟು ಸೂರ್ಯನ ಬೆಳಕು ಬೀಳುವ ಸ್ಥಳವನ್ನೇ ಆಯ್ಕೆ ಮಾಡಬೇಕು.

*ಕಲರ್‌ಫುಲ್‌ ಆಗಿರಲಿ:

ಕೆಲವು ಬಾರಿ ಕೆಲಸವು ಬೋರ್‌ ಅನಿಸುವುದು ಅಥವಾ ಟಿವಿ ಅಥವಾ ಸೋಷಿಯಲ್‌ ನೆಟ್‌ವರ್ಕ್‌ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಇದನ್ನು ತಪ್ಪಿಸುವುದಕ್ಕಾಗಿ ನಿಮಗೆ ಸೂಧಿರ್ತಿ ನೀಡುವಂಥ ಕಲರ್‌ಫುಲ್‌ ವಸ್ತುಗಳು ಸುತ್ತಮುತ್ತ ಇರಲಿ. ಉದಾಹರಣೆಗೆ ನಿಯಾನ್‌ ಬಣ್ಣದ ಕುರ್ಚಿ ಅಥವಾ ರೋಮಾಂಚಕ ಲೇಖನ ಸಾಮಗ್ರಿ ಇರಲಿ.

*ಹಿತಕರವಾಗಿರಲಿ:

ಮನೆಯಿಂದಲೇ ಕೆಲಸ ಮಾಡುವಾಗ ಕಾಲುಗಳನ್ನು ಕುರ್ಚಿ ಮೇಲೆ ಇಟ್ಟು ವಿಚಿತ್ರವಾಗಿ ಕುಳಿತುಕೊಳ್ಳಬಹುದು. ಆದರೆ ಅದನ್ನು ತಪ್ಪಿಸುವುದಕ್ಕಾಗಿ ಕಾಲಿನ ಕೆಳಗೆ ಸಣ್ಣದಾದ ದಿಂಬು ಅಥವಾ ರಗ್‌ ಇರಿಸಿಕೊಳ್ಳುವುದು ಒಳ್ಳೆಯದು.

*ವೈಯಕ್ತಿಕ ಟಚ್‌ ಇರಲಿ:

ಕೆಲಸದ ಸ್ಥಳದಲ್ಲಿ ನಿಮ್ಮ ಸ್ನೇಹಿತರ ಮತ್ತು ಕುಟುಂಬದ ಫೋಟೋಗಳನ್ನು ಅಳವಡಿಸಿಕೊಳ್ಳಿ. ಕೆಲವರಿಗೆ ಹಸಿರು ಬಣ್ಣ ಇಷ್ಟವಾಗುತ್ತದೆ. ಅಂಥವರು ಕೆಲವು ಇಂಡೋರ್‌ ಪ್ಲಾಂಟ್‌ಗಳನ್ನು ಇರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ