ಆ್ಯಪ್ನಗರ

ಸರಳ ವಿಜ್ಞಾನ: ಕಡಿದಾದ ತಿರುವು

ನಾನು ಡಬಲ್‌ ಡೆಕ್ಕರ್‌ ಬಸ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದೆ...

Vijaya Karnataka 5 Aug 2018, 12:00 am
ನಾನು ಡಬಲ್‌ ಡೆಕ್ಕರ್‌ ಬಸ್‌ವೊಂದರಲ್ಲಿ ಪ್ರಯಾಣಿಸುತ್ತಿದ್ದೆ. ಒಂದು ಕಡಿದಾದ ಜಾಗದಲ್ಲಿ ಅದು ಹೇಗೆ ತಿರುವು ತೆಗೆದುಕೊಂಡಿತೆಂದರೆ ಆ ಬಸ್‌ ತಲೆಕೆಳಗಾಗಿ ಉರುಳುತ್ತದೆಂದೇ ನನಗೆ ಅನಿಸಿತು. ಆದರೆ ಹಾಗಾಗಲಿಲ್ಲ. ಇದಕ್ಕೆ ಕಾರಣವೇನು?
Vijaya Karnataka Web Sse209The Sharp Turn


ಬಸ್‌ ಕಡಿದಾದ ತಿರುವು ತೆಗೆದುಕೊಳ್ಳುವಾಗ ಬೀಳುವುದಿಲ್ಲ. ಯಾಕೆಂದರೆ ವಾಹನದ ಗುರುತ್ವಾಕರ್ಷಣೆ ಕೇಂದ್ರಕ್ಕೆ ಸೇರಿರುವ ರೇಖೆ ಮತ್ತು ಭೂಮಿಯ ಕೇಂದ್ರ ವಾಹನದ ಅಡಿಪಾಯದೊಳಗೇ ಇರುತ್ತವೆ. ಒಂದು ವಸ್ತುವಿನ ಗುರುತ್ವಾಕರ್ಷಣೆ ಕೇಂದ್ರ ಅಥವಾ ಬಿಂದು ಆ ವಸ್ತುವಿನ ಒಟ್ಟು ಸಮೂಹವೇ ಆ ಕೇಂದ್ರದಲ್ಲಿ ಕೇಂದ್ರೀಕರಿಸಿದಂತೆ ವರ್ತಿಸುತ್ತದೆ. ಬಸ್‌ನ ಗುರುತ್ವಾಕರ್ಷಣೆ ಕೇಂದ್ರಕ್ಕೆ ಸೇರಿರುವ ಕಾಲ್ಪನಿಕ ರೇಖೆಯು ಭೂಮಿಯ ಕೇಂದ್ರಕ್ಕೆ ಬಸ್‌ನ ಅಡಿಪಾಯದ ಹೊರಗೆ ಸೇರಿದರೆ ಮಾತ್ರ ಬಸ್‌ ತಲೆಕೆಳಗಾಗಿ ಉರುಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ