ಆ್ಯಪ್ನಗರ

ಸರಳ ವಿಜ್ಞಾನ: ಒಂದೇ ಹೊಳ್ಳೆಯ ಉಸಿರಾಟ

ಒಮ್ಮೆ ನಾನು ಕೇವಲ ಎಡ ಭಾಗದ ಮೂಗಿನ ಹೊಳ್ಳೆಯಲ್ಲಿ ಉಸಿರಾಡುತ್ತಿರುವುದು ನನ್ನ ಗಮನಕ್ಕೆ ಬಂತು...

Vijaya Karnataka 9 Dec 2018, 12:00 am
ಒಮ್ಮೆ ನಾನು ಕೇವಲ ಎಡ ಭಾಗದ ಮೂಗಿನ ಹೊಳ್ಳೆಯಲ್ಲಿ ಉಸಿರಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಸ್ವಲ್ಪ ಗಂಟೆಗಳ ಬಳಿಕ ನಾನು ಇನ್ನೊಂದು ಹೊಳ್ಳೆಯಲ್ಲಿ ಉಸಿರಾಡುತ್ತಿದ್ದೆ ಮತ್ತು ಎಡ ಹೊಳ್ಳೆ ತನ್ನ ಕೆಲಸ ನಿಲ್ಲಿಸಿತ್ತು. ನನಗೆ ಏನಾದರೂ ಆಗಿದೆಯೇ ಎಂದು ನನಗೆ ಆಗ ಅನಿಸಿತು? ಇದಕ್ಕೆ ಕಾರಣವೇನು?
Vijaya Karnataka Web Sse241One At A Time


ಬಹುತೇಕ ಸಮಯದಲ್ಲಿ ನಾವು ಮೂಗಿನ ಒಂದು ಹೊಳ್ಳೆಯಲ್ಲಿ ಮಾತ್ರ ಉಸಿರಾಡುತ್ತೇವೆ. ಪರ್ಯಾಯ ಊತ ಮತ್ತು ಪ್ರತಿ ಹೊಳ್ಳೆಯಲ್ಲೂ ಟರ್ಬಿನೇಟ್ಸ್‌ ಎಂಬ ಕವಾಟಿನಂಥ ರಚನೆಗಳ ದಟ್ಟಣೆಯಿಂದ ಹೀಗಾಗುತ್ತದೆ. ಒಂದು ಹೊಳ್ಳೆ ಊದಿಕೊಂಡಾಗ ಅಥವಾ ಹಿಗ್ಗಿದಾಗ ಇನ್ನೊಂದು ಹೊಳ್ಳೆಯ ಊತ ಕಡಿಮೆಯಾಗಿ ಗಾಳಿ ಹೋಗುವ ಮಾರ್ಗ ತೆರೆದುಕೊಳ್ಳುತ್ತದೆ. ಇದರಿಂದ ಪ್ರತಿ ಹೊಳ್ಳೆಗೂ ವಿಶ್ರಾಂತಿಯ ಸಮಯ ಸಿಗುತ್ತದೆ.

ನಾವು ವ್ಯಾಯಾಮ ಅಥವಾ ಬ್ರಿಸ್ಕ್‌ ವಾಕ್‌ ಮಾಡಿದಾಗ ನಮಗೆ ಅಗತ್ಯಕ್ಕಿಂತ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಎರಡೂ ಹೊಳ್ಳೆಗಳು ತೆರೆದುಕೊಳ್ಳುತ್ತವೆ. ಆಗ ನಾವು ಎರಡೂ ಹೊಳ್ಳೆಗಳಿಂದಲೂ ಉಸಿರಾಡುತ್ತಿರುತ್ತೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ