ಆ್ಯಪ್ನಗರ

ಸೂಪರ್‌ ಮ್ಯಾಜಿಕ್‌: ತಂತಿಯಲ್ಲಿ ತೂಗಾಡುವ ಮಂಜುಗಡ್ಡೆ

ತಣ್ಣನೆಯ ಮಂಜುಗಡ್ಡೆಯನ್ನು ತಂತಿಯಲ್ಲಿ ತೂಗು ಹಾಕಲು ಸಾಧ್ಯವೇ? ಅಂದರೆ ಐಸ್‌ಕ್ಯೂಬ್‌ ಸುತ್ತ ತಂತಿ ಸುತ್ತುವುದಲ್ಲ...

Vijaya Karnataka 29 Jul 2018, 12:00 am
ತಣ್ಣನೆಯ ಮಂಜುಗಡ್ಡೆಯನ್ನು ತಂತಿಯಲ್ಲಿ ತೂಗು ಹಾಕಲು ಸಾಧ್ಯವೇ? ಅಂದರೆ ಐಸ್‌ಕ್ಯೂಬ್‌ ಸುತ್ತ ತಂತಿ ಸುತ್ತುವುದಲ್ಲ. ಐಸ್‌ನೊಳಗೆಯೇ ತಂತಿಯನ್ನು ಬೆಸುಗೆ ಹಾಕುವ ಈ ಪ್ರಯೋಗ ಮಾಡಿ ಅದರ ಫಲಿತಾಂಶ ತಿಳಿದುಕೊಳ್ಳಿ.
Vijaya Karnataka Web String-along_Ice


ಬೇಕಾಗುವ ಸಾಮಗ್ರಿ

ಐಸ್‌ಕ್ಯೂಬ್‌ಗಳು, ತಂತಿ, ಉಪ್ಪು, ಪ್ಲೇಟ್‌, ಕತ್ತರಿ, ನೀರು.

ಮಾಡುವ ವಿಧಾನ

1. ತಂತಿಯನ್ನು 20 ಸೆಂ.ಮೀ ಅಳತೆಗೆ ಕತ್ತರಿಸಿ. ಪ್ಲೇಟ್‌ಗೆ ಎರಡು ಐಸ್‌ಕ್ಯೂಬ್‌ಗಳನ್ನು ಹಾಕಿ.

2. ತಂತಿಯನ್ನು ನೀರಿನಿಂದ ಒದ್ದೆ ಮಾಡಿ. ಐಸ್‌ಕ್ಯೂಬ್‌ಗಳ ಮೇಲೆ ಈ ತಂತಿಯನ್ನು ಇಡಿ.

3. ಈಗ ಈ ತಂತಿಯನ್ನು ಮೇಲೆ ಎತ್ತಲು ಯತ್ನಿಸಿ. ಐಸ್‌ಗೆ ಅಂಟಿಕೊಂಡಿರುವ ತಂತಿ ಮೇಲೆ ಬರುವುದಿಲ್ಲ. ಈ ಸ್ಥಿತಿಯಲ್ಲಿ ಮಂಜುಗಡ್ಡೆ ತಂತಿಯಲ್ಲಿ ತೂಗುತ್ತಿರುವಂತೆ ಕಾಣುತ್ತದೆ.

4. ಐಸ್‌ಗೆ ತಾಗಿಕೊಂಡಿರುವ ತಂತಿಗೆ ಸ್ವಲ್ಪ ಉಪ್ಪು ಉದುರಿಸಿ. ಒಂದು ನಿಮಿಷ ಬಿಟ್ಟು ತಂತಿ ಎಳೆದರೆ ತಂತಿ ಸುಲಭವಾಗಿ ಬರುತ್ತದೆ!

ಕಾರಣ ಇಲ್ಲಿದೆ

ನೀರು ಸಾಮಾನ್ಯವಾಗಿ 0 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೆಪ್ಪುಗಟ್ಟುತ್ತದೆ. ಅದೇ ಉಷ್ಣಾಂಶದಲ್ಲಿ ಕರಗುತ್ತದೆ ಕೂಡಾ. ಆದ್ದರಿಂದ ನೀರು ಹೆಪ್ಪುಗಟ್ಟುವ ಮತ್ತು ಕರಗುವ ಬಿಂದು ಒಂದೇ ಆಗಿರುತ್ತದೆ.ಇದರರ್ಥ 0 ಡಿಗ್ರಿ ಸೆಲ್ಸಿಯಸ್‌ನಲ್ಲಿ ಐಸ್‌ಕ್ಯೂಬ್‌ನ ಕೆಲವು ಭಾಗಗಳು ನೀರಾಗುತ್ತವೆ ಮತ್ತು ನೀರಿನ ಕೆಲವು ಭಾಗಗಳು ಐಸ್‌ ಆಗಿರುತ್ತವೆ. ಆದರೆ ಇದರಲ್ಲಿ ಒಂದು ರೀತಿಯ ಸಮತೋಲನವಿರುತ್ತದೆ. ಆದ್ದರಿಂದ ಮಂಜುಗಡ್ಡೆ ಮತ್ತು ನೀರು ಸಮ ಪ್ರಮಾಣದಲ್ಲಿರುತ್ತವೆ. ಉಷ್ಣತೆ ಶೂನ್ಯಕ್ಕಿಂತ ಕೆಳಗಿಳಿದರೆ ಹೆಚ್ಚಿನ ಪ್ರಮಾಣದ ನೀರು ಮಂಜುಗಡ್ಡೆಯಾಗುತ್ತದೆ. ಉಷ್ಣತೆ ಜಾಸ್ತಿಯಾದರೆ ಹೆಚ್ಚಿನ ಪ್ರಮಾಣದ ಐಸ್‌ ಕರಗಿ ನೀರಾಗುತ್ತದೆ.

ಮಂಜುಗಡ್ಡೆಯ ಬೆಸುಗೆಯನ್ನು ಉಪ್ಪು ಸಡಿಲಗೊಳಿಸುತ್ತದೆ. ಮೂಲತಃ ಉಪ್ಪು ನೀರಿನಲ್ಲಿ ಕರಗುತ್ತದೆ. ಆದ್ದರಿಂದ ಕರಗಿದ ನೀರು ಉಪ್ಪನ್ನು ಕೂಡಾ ತನ್ನೊಳಗೆ ಕರಗಿಸಿಕೊಳ್ಳುತ್ತದೆ. ನೀರಿಗೆ ಸೇರಿದ ಉಪ್ಪಿನ ಅಣುಗಳು ಐಸ್‌ನಲ್ಲಿ ಹೆಪ್ಪುಗಟ್ಟಲು ಯತ್ನಿಸುತ್ತಿರುವ ಇತರ ನೀರಿನ ಅಣುಗಳಲ್ಲಿ ಮಧ್ಯ ಪ್ರವೇಶಿಸಲು ಶುರು ಮಾಡುತ್ತವೆ. ಆದ್ದರಿಂದ ಐಸ್‌ ಜೊತೆ ಸಂಪರ್ಕದಲ್ಲಿರುವ ನೀರಿಗೆ 0 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೆಪ್ಪುಗಟ್ಟಲು ಆಗುವುದಿಲ್ಲ. ನೀರು ಮರು ಹೆಪ್ಪುಗಟ್ಟಲು ತುಂಬಾ ತಂಪಾದ ವಾತಾವರಣ (ಉಪ್ಪಿನ ತೀಕ್ಷ ್ಣತೆಯನ್ನು ಅವಲಂಬಿಸಿ ಮೈನಸ್‌ ಐದು ಅಥವಾ ಮೈನಸ್‌ ಹತ್ತು ಅಥವಾ ಅದಕ್ಕಿಂತಲೂ ಕಡಿಮೆ) ಬೇಕಾಗಿರುತ್ತದೆ. ನೀರಿನ ಹೆಪ್ಪುಗಟ್ಟಿಸುವ ಮತ್ತು ಕರಗುವ ಬಿಂದುವನ್ನು ಉಪ್ಪು ಕಡಿಮೆಗೊಳಿಸುತ್ತದೆ.

ಈ ಮೇಲಿನ ಪ್ರಯೋಗದಲ್ಲಿ ತಂತಿಯ ಸುತ್ತಮುತ್ತ ಸ್ವಲ್ಪ ಉಪ್ಪನ್ನು ಮಾತ್ರ ಚಿಮುಕಿಸಲಾಗಿದೆ. ಆದ್ದರಿಂದ ತಂತಿಯ ಸಂಪರ್ಕದಲ್ಲಿರುವ ಮಂಜುಗಡ್ಡೆಯ ಹೆಪ್ಪುಗಟ್ಟುವ ಬಿಂದು ಮಾತ್ರ ಕಡಿಮೆಯಾಗಿ ಕರಗುತ್ತದೆ. ಆದ್ದರಿಂದ ತಂತಿ ಐಸ್‌ನೊಳಗೆ ಕುಗ್ಗುತ್ತದೆ. ಆದರೆ ಕರಗಿದ ನೀರು ತಕ್ಷ ಣ ಉಳಿದ ಮಂಜುಗಡ್ಡೆಯ ಸಂಪರ್ಕಕ್ಕೆ ಬಂದು ತಂತಿಯ ಸುತ್ತ ಮರುಹೆಪ್ಪುಗಟ್ಟುತ್ತದೆ. ಇದರಿಂದ ನಿಮಗೆ ಈ ತಂತಿಯ ಮೂಲಕ ಐಸ್‌ಕ್ಯೂಬ್‌ ಎತ್ತಲು ಸಾಧ್ಯವಾಗುತ್ತದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ