ಆ್ಯಪ್ನಗರ

ಶಿಶುಗೀತೆ: ಸಾಲು ಮರಗಳ ತಿಮ್ಮಕ್ಕ

ಮರಗಳೇ ನನ್ನ ಮಕ್ಕಳು ಎಂದರು ಮಹಾ ಮಾತೆ ತಿಮ್ಮಕ್ಕ

Vijaya Karnataka 3 Feb 2019, 12:00 am
ಮೌಲಾಲಿ ಕೆ. ಆಲಗೂರ
Vijaya Karnataka Web shishugeethe-timmakka 1


ಮರಗಳೇ ನನ್ನ ಮಕ್ಕಳು ಎಂದರು

ಮಹಾ ಮಾತೆ ತಿಮ್ಮಕ್ಕ

ಹಸಿರಲ್ಲಿ ಬೆರೆತು ನೀರು ಹೊತ್ತು

ಸಸಿ ನೆಟ್ಟರು ರಸ್ತೆ ಪಕ್ಕ

ಬರಡು ಭೂಮಿ ಹುಡುಕಿ ಮರ

ಬೆಳೆಸಿದರು ಸಿಗದಷ್ಟು ಲೆಕ್ಕ

ಪರಿಸರ ಪ್ರೀತಿ ತಿಮ್ಮಕ್ಕ ಜೀವನ ರೀತಿ

ನೋಡಿ ಆ ಭಾಸ್ಕರ ನಕ್ಕ

ಬೆವರು ಸುರಿಸಿ ಮಮತೆಯ ಬೆರೆಸಿ

ನಿರ್ಮಿಸಿಹರು ದಟ್ಟ ಕಾಡು

ಪ್ರಾಣಿ ಪಕ್ಷಿಗಳು ಮಾತೆಗೆ ಶುಭ

ಕೋರುತ ಕಟ್ಟಿದವು ಗೂಡು

ಸಾಲು ಸಾಲಿನ ಗಿಡ ಮರಗಳಿಂದ

ಸ್ವರ್ಗವಾಯಿತು ನಾಡು

ತಿಮ್ಮಕ್ಕನ ಪರಿಸರ ಕ್ರಾಂತಿಯ ಫಲದಿ

ಈ ನೆಲ ಹಸುರಿನ ಬೀಡು

ಪಡೆದಿಲ್ಲ ಶಿಕ್ಷ ಣ ಪರಿಸರ ಜ್ಞಾನ

ನಿತ್ಯ ನೂತನ ಹೊಸತನ

ಪರಿಸರ ಉಳಿವಿಗೆ ತೊಟ್ಟರು ಪಣ

ವೃಕ್ಷ ರಕ್ಷ ಣೆಯ ಗುಣ

ನೀವು ನೆಟ್ಟ ಮರಗಳ ನೆರಳಲಿ

ವಿಶ್ರಮಿಸಿದರು ಕೋಟಿ ಜನ

ಅಮ್ಮ ನಿಮ್ಮ ನಿಸ್ವಾರ್ಥ ಸೇವೆಗೆ

ಪದ್ಮಶ್ರೀ ಗೌರವ ಪ್ರದಾನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ