ಆ್ಯಪ್ನಗರ

ಜ್ಞಾನ loka: ಭಾರತದ ನದಿ ವ್ಯವಸ್ಥೆ

ಭಾರತದ ನದಿ ವ್ಯವಸ್ಥೆಯನ್ನು ಹಿಮಾಲಯದ ನದಿಗಳು ಮತ್ತು ದಕ್ಷಿಣದ ನದಿಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಹಿಮಾಲಯದ ನದಿಗಳು ಹಿಮಾಲಯದಲ್ಲಿ ಹುಟ್ಟುತ್ತದೆ. ಈ ನದಿಗಳು ಮಳೆ ನೀರನ್ನು ಅವಲಂಬಿಸಿರುವುದಿಲ್ಲ.

Vijaya Karnataka Web 15 Nov 2016, 4:00 am
ಭಾರತದ ನದಿ ವ್ಯವಸ್ಥೆಯನ್ನು ಹಿಮಾಲಯದ ನದಿಗಳು ಮತ್ತು ದಕ್ಷಿಣದ ನದಿಗಳು ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಹಿಮಾಲಯದ ನದಿಗಳು ಹಿಮಾಲಯದಲ್ಲಿ ಹುಟ್ಟುತ್ತದೆ. ಈ ನದಿಗಳು ಮಳೆ ನೀರನ್ನು ಅವಲಂಬಿಸಿರುವುದಿಲ್ಲ. ಹಿಮಾಲಯದ ಮಂಜು ಕರಗುವುದರಿಂದ ಇವುಗಳು ವರ್ಷಪೂರ್ತಿ ತುಂಬಿ ಹರಿಯುತ್ತವೆ. ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಹಿಮಾಲಯದ ನದಿಗಳಾಗಿವೆ. ಸಿಂಧೂ ನದಿಗೆ ಜೀಲಂ, ಚಿನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ಎಂಬ ಉಪ ನದಿಗಳಿದ್ದರೆ ಗಂಗಾನದಿಗೆ ಉತ್ತರ ಭಾಗದಿಂದ ಯಮುನಾ, ರಾಮಗಂಗಾ, ಗಂಡಕ್‌, ಕೋಸಿ ಎಂಬ ಉಪನದಿಗಳು ಹಾಗೂ ದಕ್ಷಿಣ ಭಾಗದಿಂದ ಚಂಬಲ್‌, ದಾಮೋದರ ಮೊದಲಾದ ಉಪನದಿಗಳು ಸೇರುತ್ತವೆ. ಬ್ರಹ್ಮಪುತ್ರ ನದಿಯು ಟಿಬೆಟ್‌ನ ಮಾನಸ ಸರೋವರದಲ್ಲಿ ಉಗಮವಾಗುತ್ತದೆ. ಇದಕ್ಕೆ ತೀಸ್ತಾ, ದಿಬೂ ಹಾಗೂ ಕೊಪಿಲಿ, ಕಾಮೆಂಗ್‌ ಎಂಬ ಉಪನದಿಗಳು ಸೇರುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ