ಆ್ಯಪ್ನಗರ

ಸರಳ ವಿಜ್ಞಾನ: ಒದ್ದೆಯಾಗುವ ಗ್ಲಾಸ್‌

ಗಾಜಿನ ಹಲಗೆಯ ಮೇಲೆ ನೀರು ಹಾಕಿದರೆ ಗಾಜು ಒದ್ದೆಯಾಗುತ್ತದೆ. ಆದರೆ ಗಾಜಿನ ಮೇಲೆ ಪಾದರಸ ಹಾಕಿದರೆ ಅದು ಒದ್ದೆಯಾಗುವುದಿಲ್ಲ. ಇದಕ್ಕೆ ಕಾರಣವೇನು?

Vijaya Karnataka Web 13 Nov 2016, 4:23 am
ಗಾಜಿನ ಹಲಗೆಯ ಮೇಲೆ ನೀರು ಹಾಕಿದರೆ ಗಾಜು ಒದ್ದೆಯಾಗುತ್ತದೆ. ಆದರೆ ಗಾಜಿನ ಮೇಲೆ ಪಾದರಸ ಹಾಕಿದರೆ ಅದು ಒದ್ದೆಯಾಗುವುದಿಲ್ಲ. ಇದಕ್ಕೆ ಕಾರಣವೇನು?
Vijaya Karnataka Web simple science
ಸರಳ ವಿಜ್ಞಾನ: ಒದ್ದೆಯಾಗುವ ಗ್ಲಾಸ್‌


ಹಲಗೆಯ ಮೇಲ್ಮೈ ಒದ್ದೆಯಾಗುವುದು ಅಥವಾ ಒದ್ದೆಯಾಗದಿರುವುದು ಈ ಕೆಳಗಿನ ಅಂಶವನ್ನು ಅವಲಂಬಿಸಿದೆ. ಅವು ಯಾವುದೆಂದರೆ, ದ್ರವದ ಅಣುಗಳು ಮತ್ತು ಅದರ ಸಂಪರ್ಕಕ್ಕೆ ಬರುವ ಮೇಲ್ಮೈ ಅಣುಗಳ ನಡುವಿನ ಆಕರ್ಷಣೆಯ ಬಲ ಮತ್ತು ದ್ರವದ ಅಣುಗಳ ನಡುವಿನ ಸಂಸಕ್ತಿ ಬಲ.

ಪಾದರಸದ ವಿಷಯದಲ್ಲಿ ಹೇಳುವುದಾದರೆ ಅದರ ಅಣುಗಳು ಒಂದಕ್ಕೊಂದು ಬಲವಾಗಿ ಅಂಟಿಕೊಂಡಿರುತ್ತದೆ. ಗಾಜಿನ ಹಲಗೆಯ ಮೇಲ್ಮೈಗೆ ಅವುಗಳನ್ನು ಎಳೆಯಲು ಆಗುವುದಿಲ್ಲ. ಆದ್ದರಿಂದ ಪಾದರಸ ಬಿದ್ದಾಗ ಗಾಜು ಒದ್ದೆಯಾಗುವುದಿಲ್ಲ.

ಅದೇ ಗಾಜಿಗೆ ನೀರು ಹಾಕಿದಾಗ ನೀರಿನ ಅಣುಗಳ ನಡುವಿನ ಅಂಟಿನ ಬಲವು ಸಂಸಕ್ತಿ ಬಲಕ್ಕಿಂತ ಜಾಸ್ತಿಯಿರುತ್ತದೆ. ಆದ್ದ ರಿಂದ ನೀರು ಗಾಜಿನ ಮೇಲ್ಮೈಯನ್ನು ಕಚ್ಚಿಕೊಂಡು ಅದನ್ನು ಒದ್ದೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ