ಆ್ಯಪ್ನಗರ

ಮನೆಯಲ್ಲಿ ಮಕ್ಕಳ ಕೊಠಡಿ ಹೇಗಿರಬೇಕು?

ಮಕ್ಕಳ ಕೊಠಡಿಯನ್ನು ನಿರ್ವಹಿಸುವಾಗ ತುಂಬಾ ಕ್ರಿಯೇಟಿವಿಟಿ ತೋರಿಸಬೇಕಾಗುತ್ತದೆ. ಈ ಮೂಲಕ ಮಕ್ಕಳಿಗೆ ಕೋಣೆ ಸೆರೆಮನೆಯಾಗದೆ ಅವರ ಮನಸ್ಸಿಗೆ ಮುದ ನೀಡುವ ಜಾಗವಾಗಿ ಮಾರ್ಪಡುವಂತೆ ಮಾಡಲು ಸಾಧ್ಯವಿದೆ.

Agencies 12 May 2019, 3:36 pm
ಮನೆಯಲ್ಲಿರುವ ಮಕ್ಕಳ ಕೊಠಡಿ ಅವರ ಒಟ್ಟಾರೆ ಜೀವನೋತ್ಸಾಹವನ್ನು ಹೆಚ್ಚಿಸುವಂತಿರಬೇಕು. ಅದಕ್ಕೇನೂ ತುಂಬಾ ಕಷ್ಟಪಡಬೇಕಾಗಿಲ್ಲ. ಕೆಲವೊಂದು ಸರಳ ನಿಯಮಗಳನ್ನು ಅಳವಡಿಸುವ ಮೂಲಕ ಮಕ್ಕಳ ಮನಸ್ಸು ಖುಷಿ ಖುಷಿಯಾಗಿರುವಂತೆ ಮಾಡಬಹುದು.
Vijaya Karnataka Web Kids Home


ಮಕ್ಕಳ ಕೊಠಡಿಯನ್ನು ನಿರ್ವಹಿಸುವಾಗ ತುಂಬಾ ಕ್ರಿಯೇಟಿವಿಟಿ ತೋರಿಸಬೇಕಾಗುತ್ತದೆ. ಈ ಮೂಲಕ ಮಕ್ಕಳಿಗೆ ಕೋಣೆ ಸೆರೆಮನೆಯಾಗದೆ ಅವರ ಮನಸ್ಸಿಗೆ ಮುದ ನೀಡುವ ಜಾಗವಾಗಿ ಮಾರ್ಪಡುವಂತೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಸಲಹೆಗಳು.

ಆಟವೇ ಪಾಠ:
ಮಾರುಕಟ್ಟೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಭಿನ್ನ ರೀತಿಯ ಕ್ರಿಯೇಟಿವ್‌ ಪೋಸ್ಟರ್‌ಗಳು ಸಿಗುತ್ತವೆ. ಇದನ್ನು ಬಳಸಿಕೊಂಡು ವಿಶ್ವದ ನಕಾಶೆ ತಯಾರಿಸಬಹುದು. ಈ ಮೂಲಕ ಆಟದ ಮೂಲಕ ಕಲಿಕೆ ಮಕ್ಕಳಿಗೆ ಸಾಧ್ಯವಾಗುತ್ತದೆ. ಮಕ್ಕಳು ದೊಡ್ಡವರಾದಂತೆ ಅವರು ಬಳಸುತ್ತಿದ್ದ ಸಾಕ್ಸ್‌ಗಳು ನಿರುಪಯುಕ್ತವಾಗುತ್ತವೆ. ಇವುಗಳನ್ನು ಮಕ್ಕಳ ಕೋಣೆಯಲ್ಲಿರುವ ಚೇರ್‌ ಮತ್ತು ಟೇಬಲ್‌ನ ಕಾಲಿಗೆ ಕವರ್‌ ಆಗಿ ಮಾಡಬಹುದು. ಇದು ನೋಡಲು ಸುಂದರವಷ್ಟೇ ಅಲ್ಲ, ಹೆತ್ತವರಿಗೂ ಮಕ್ಕಳ ಬಾಲ್ಯದ ದಿನಗಳನ್ನು ನೆನಪಿಸುತ್ತವೆ.

ಕರ್ಟನ್‌ ಅಲಂಕಾರ: ಸಿಂಗಲ್‌ ಕಲರ್‌ ಕರ್ಟನ್‌ ಅಥವಾ ಕರ್ಟನ್‌ ರಾಡ್‌ಗಳಿದ್ದರೆ ಅವುಗಳಿಗೆ ಮಕ್ಕಳಿಗೆ ಇಷ್ಟವಾಗುವ ಬಣ್ಣಗಳನ್ನು ಹಚ್ಚಿ. ಇದು ಇಡೀ ಕೋಣೆಗೆ ಹೊಸ ಲುಕ್‌ ನೀಡಿ ಮಕ್ಕಳು ಕೊಠಡಿಯಲ್ಲಿ ಕಾಲ ಕಳೆಯಲು ಇಷ್ಟವಾಗುವಂತೆ ಮಾಡುತ್ತದೆ. ಇನ್ನು ಹೆಣ್ಣು ಮಗುವಿದ್ದರೆ ಸೈಡ್‌ ಟೇಬಲ್‌ಗೆ ಮಗುವಿನ ಹಳೆಯ ಅಥವಾ ಹೊಸದಾಗಿ ಖರೀದಿಸಿದ ಪ್ರಿನ್ಸೆಸ್‌ ಸ್ಕರ್ಟ್‌ ಹಾಕಬಹುದು. ಇದಕ್ಕೆ ಒಂದೆರಡು ಚಿಕ್ಕ ಮೊಳೆ, ರಿಬ್ಬನ್‌ ಮತ್ತು ಇಲ್ಯಾಸ್ಟಿಕ್‌ ಇದ್ದರೆ ಸಾಕಾಗುತ್ತದೆ.

ಸ್ಕೇಟ್‌ ಬೋರ್ಡ್‌:
ಮಕ್ಕಳು ಬಳಕೆ ಮಾಡದಿರುವ ಸ್ಕೇಟ್‌ ಬೋರ್ಡ್‌ ಕೂಡ ಕೋಣೆಯ ಅಲಂಕಾರದಲ್ಲಿ ನೆರವಿಗೆ ಬರುತ್ತದೆ. ಅವುಗಳನ್ನು ಗೋಡೆಗೆ ನೇತು ಹಾಕಿದರೆ ಅದು ಕೂಡ ಆಟಿಕೆ ವಸ್ತುವಿನ ಅನುಭವ ನೀಡುತ್ತದೆ. ಇನ್ನು ಮಕ್ಕಳ ನೆಚ್ಚಿನ ಕಾರ್ಟೂನ್‌ ಚಿತ್ರಗಳು ಅಥವಾ ಸೂಪರ್‌ ಹೀರೋ ಚಿತ್ರಗಳನ್ನು ಕೊಂಡು ಅವುಗಳನ್ನು ಗೋಡೆಗೆ ಅಂಟಿಸಿ. ಇವುಗಳನ್ನು ಬೇಕಾದಾಗ ಅಂಟಿಸಿ, ಬೇಸರ ಅನ್ನಿಸಿದರೆ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ.

ಸ್ಟಡಿ ಟೇಬಲ್‌, ವಾರ್ಡ್‌ರೋಬ್‌ನ ಅಕ್ಕಪಕ್ಕದಲ್ಲಿ ಇದನ್ನು ಅಂಟಿಸಬಹುದು. ಮಕ್ಕಳು ಬೆಳೆದಂತೆ ಇವುಗಳನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿದೆ. ಮಕ್ಕಳು ಬಳಕೆ ಮಾಡದ ಬೇಬಿ ಟವಲ್‌ ಇದ್ದರೆ ಅದನ್ನು ಪಿಲ್ಲೋ ಕವರ್‌ ಆಗಿ ಬದಲಾಯಿಸಬಹುದು. ಒಟ್ಟಿನಲ್ಲಿ ಮನೆಯಲ್ಲೇ ಇರುವ ನಿರುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು ಮಕ್ಕಳ ಕೊಠಡಿಯನ್ನು ಸಾಕಷ್ಟು ಆಕರ್ಷಕವಾಗುವಂತೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ