ಆ್ಯಪ್ನಗರ

ಜುಲೈ ಟ್ರಿಪ್‌ಗೆ ಈ ಸ್ಥಳಗಳು ಬೆಸ್ಟ್

ಜುಲೈನಲ್ಲಿ ಎಡೆಬಿಡದೆ ಮಳೆ ಸುರಿಯುವ ಹೊತ್ತು ಇದು. ಈ ಸಮಯದಲ್ಲಿ ನದಿಗಳು ತುಂಬಿ ಹರಿಯುತ್ತವೆ. ಜಲಪಾತಗಳು ಭೋರ್ಗರೆಯುತ್ತವೆ.

Vijaya Karnataka Web 1 Jul 2018, 4:29 pm
ಜುಲೈನಲ್ಲಿ ಎಡೆಬಿಡದೆ ಮಳೆ ಸುರಿಯುವ ಹೊತ್ತು ಇದು. ಈ ಸಮಯದಲ್ಲಿ ನದಿಗಳು ತುಂಬಿ ಹರಿಯುತ್ತವೆ. ಜಲಪಾತಗಳು ಭೋರ್ಗರೆಯುತ್ತವೆ. ಭೂರಮೆ ಹಸಿರಾಗಿ ಕಂಗೊಳಿಸುತ್ತದೆ. ಈ ಸಮಯದಲ್ಲಿ ಟ್ರಿಪ್‌ ಹೋಗುವುದಾದರೆ ಈ ಸ್ಥಳಗಳಿಗೆ ಹೋಗಲು ಪ್ಲಾನ್ ಮಾಡಿದರೆ ಒಳ್ಳೆಯದು.
Vijaya Karnataka Web jog


ಜುಲೈನಲ್ಲಿ ಟ್ರಿಪ್‌ ಹೋಗಬಹುದಾದ ಸೂಕ್ತ ತಾಣಗಳು

ಸ್ಥಳೀಯ: ಪ್ರಕೃತಿಯ ಸೌಂದರ‍್ಯ ಆರಾಧಕರು ಮಲೆನಾಡಿನತ್ತ ಪ್ರಯಾಣ ಬೆಳೆಸುವುದು ಸೂಕ್ತ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಸುತ್ತಮುತ್ತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಜೋಗ ಜಲಪಾತವನ್ನು ಮಿಸ್‌ ಮಾಡದೆ ನೋಡಿ. ನೀವು ಟ್ರೆಕ್ಕಿಂಗ್‌ ಪ್ರಿಯರಾಗಿದ್ದರೆ ಉತ್ತರ ಕನ್ನಡದ ಸುತ್ತಮುತ್ತಲ ಕಾಡುಗಳ ನಡುವೆ ಧುಮ್ಮಿಕ್ಕುವ ಜಲಪಾತಗಳಿಗೆ ಭೇಟಿ ನೀಡಿ. ಸಾಹಸಮಯ ಪ್ರವಾಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಮಾಗೋಡು, ಉಂಚಳ್ಳಿ, ಸಾತೊಡ್ಡಿ ಮತ್ತಿತರ ಫಾಲ್ಸ್‌ಗಳಿಗೆ ಭೇಟಿ ನೀಡಬಹುದು.

ರಾಷ್ಟ್ರೀಯ: ಅಸ್ಸಾಂನಲ್ಲಿರುವ ಟೀ ಎಸ್ಟೇಟ್‌ ನೋಡಲು ಜುಲೈ ಸೂಕ್ತ ತಿಂಗಳು. ಲೇಹ್‌, ಲಡಾಖ್‌, ಉತ್ತರಖಂಡ್‌ ಕಡೆ ಹೋಗಬೇಕೆಂದಿದ್ದರೆ ಇದು ಒಳ್ಳೆಯ ಸಮಯ.

ಅಂತಾರಾಷ್ಟ್ರೀಯ: ಪೋರ್ಟ್‌ಲ್ಯಾಂಡ್‌ನ ಸೌಂದರ‍್ಯ ಸವಿಯಬೇಕು ಅಂದರೆ ಇದು ಸುಸಮಯ. ಸ್ಥಳೀಯ ಆಹಾರ, ಸಂಗೀತ, ನೃತ್ಯ ಸೇರಿದಂತೆ ಇಡೀ ಸಂಸ್ಕೃತಿಯನ್ನು ಅರಿಯಬಹುದು. ಯುರೋಪ್‌, ಆಸ್ಪ್ರೇಲಿಯಾದಲ್ಲಿ ಇದೀಗ ಬೇಸಿಗೆ ಇರುವುದರಿಂದ ಇಲ್ಲಿನ ಮಳೆಗಾಲ ಬೇಸರವಾಗಿದ್ದರೆ ಅಲ್ಲಿಯ ಬೇಸಿಗೆಯನ್ನು ಆನಂದಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ