ಆ್ಯಪ್ನಗರ

ಕಾಲಿಗೆ ಚಕ್ರ ಕಟ್ಟಿಕೊಂಡು ಜಗತ್ತನ್ನೇ ಸುತ್ತುವಾಸೆ

ಅಮ್ಮ, ಅಣ್ಣ ಎಲ್ಲಾದ್ರೂ ಸುತ್ತೋಕೆ ಹೋಗೋಣ್ವಾ? ಶೂಟಿಂಗ್‌ಗೆ ಬ್ರೇಕ್ ಇದ್ದಾಗ ನಾನು ಮನೆಯಲ್ಲಿ ಕೇಳುವ ಮೊದಲ ಪ್ರಶ್ನೆ.

Vijaya Karnataka Web 20 Mar 2016, 4:16 am
ಅಮ್ಮ, ಅಣ್ಣ ಎಲ್ಲಾದ್ರೂ ಸುತ್ತೋಕೆ ಹೋಗೋಣ್ವಾ? ಶೂಟಿಂಗ್‌ಗೆ ಬ್ರೇಕ್ ಇದ್ದಾಗ ನಾನು ಮನೆಯಲ್ಲಿ ಕೇಳುವ ಮೊದಲ ಪ್ರಶ್ನೆ. ಆ ಮಟ್ಟಕ್ಕೆ ನನಗೆ ಟ್ರಾವೆಲಿಂಗ್ ಕ್ರೇಝ್ ಇದೆ. ಎಲ್ಲೂ ಹೋಗೋಕೆ ಇಲ್ಲ ಅಂದರೆ ಕೊನೆಪಕ್ಷ ಸುಮ್ಮನೆ ಕಾರಲ್ಲಿ ಲಾಂಗ್ ಡ್ರೈವ್ ಹೋಗುತ್ತೇವೆ. ನಾನು ಮನೆಯಲ್ಲಿ ಇರುವುದೇ ಕಡಿಮೆ. ಶೂಟಿಂಗ್ ಇದ್ದಾಗಲೂ ಓಡಾಡುತ್ತೇನೆ. ಶೂಟಿಂಗ್ ಇಲ್ಲಾಂದ್ರೂ ಮನೆಯ ಹೊರಗೆ ಇರುತ್ತೇನೆ. ಯಾಕೆಂದರೆ ನಾನು ಇಡೀ ಜಗತ್ತನ್ನು ಇಂಚಿಂಚೂ ನೋಡಲು ಬಯಸುತ್ತೇನೆ.
Vijaya Karnataka Web celebrity travel haripriya
ಕಾಲಿಗೆ ಚಕ್ರ ಕಟ್ಟಿಕೊಂಡು ಜಗತ್ತನ್ನೇ ಸುತ್ತುವಾಸೆ


ನನ್ನ ಮೊದಲ ಫಾರಿನ್ ಟ್ರಿಪ್ ಬ್ಯಾಂಕಾಕ್. ಅಲ್ಲಿನ ಫ್ಲೋಟಿಂಗ್ ಮಾರ್ಕೆಟ್ ಪದ್ಧತಿ ನನಗೆ ಬಹಳ ಹಿಡಿಸಿತು. ನೀರಿನಲ್ಲಿ ತೇಲುವ ಬೋಟ್‌ಗಳೇ ಅಂಗಡಿಗಳಾಗಿರುತ್ತವೆ. ಜಾರ್ಡನ್‌ಗೆ ಹೋಗಿದ್ದೇನೆ. ಇಟಲಿಗೆ ಹೋದಾಗ ಒಂದು ರಾಶಿ ಪರ್ಫ್ಯೂಮ್ ತಂದೆ. ಮಾರಿಷಿಯಸ್‌ಗೂ ಭೇಟಿ ನೀಡಿದ್ದೇನೆ. ಉಡುಪು ಹಾಗೂ ಆಕ್ಸೆಸರೀಸ್ ಕೊಳ್ಳಲು ಅದು ಬೆಸ್ಟ್ ಜಾಗ. ಅಲ್ಲದೆ ಅದೊಂದು ಸಣ್ಣ ದ್ವೀಪ, ಕಪ್ಪೆ ಚಿಪ್ಪಿಗೆ ಸಂಬಂಧಿಸಿದ ವಸ್ತುಗಳನ್ನು ಕೊಳ್ಳಲು ಇದು ಬೆಸ್ಟ್ ಜಾಗ. ಸೀ ಫುಡ್ ಅಂತೂ ಅಮೇಝಿಂಗ್. ಮಲೇಷ್ಯಾ ಹಾಗೂ ದುಬೈಗೆ ಕೆಲವು ಸಲ ಹೋಗಿ ಬಂದಿದ್ದೇನೆ. ಶಾಪಿಂಗ್ ಕ್ರೇಝ್ ಇರುವವರಿಗೆ ಒಳ್ಳೆಯ ಮಾಲ್‌ಗಳು ಇಲ್ಲಿವೆ.

ಭಾರತದ ಒಳಗೆ ನನಗೆ ಗೋವಾ ಫೇವರಿಟ್. ಕಾಶ್ಮೀರಕ್ಕೆ ಕೆಲವು ಸಾರಿ ಭೇಟಿ ನೀಡಿದ್ದೇನೆ. ಕರ್ನಾಟಕದಲ್ಲಿ ಮುಳ್ಳಯ್ಯನಗಿರಿ, ಸಕಲೇಶಪುರ, ಬೇಲೂರು, ಹಳೆಬೀಡು ನನ್ನ ಮೆಚ್ಚಿನ ತಾಣಗಳು. ಬೆಂಗಳೂರಿನ ಎಂತಹ ಗಲ್ಲಿಯಲ್ಲಿಯೂ ನಾನು ಸಲೀಸಾಗಿ ಡ್ರೈವ್ ಮಾಡಬಲ್ಲೆ. ಆದರೆ ಯಾವತ್ತೂ ಹೊರಗಡೆ ಹೋದಾಗ ಡ್ರೈವ್ ಮಾಡಿರಲಿಲ್ಲ. ಮೊನ್ನೆ ಚೆನ್ನೈಗೆ ಹೋಗಿದ್ವಿ, ಆಗ ನಾನೇ ಡ್ರೈವ್ ಮಾಡಿದೆ. 800 ಕಿ.ಮೀ.ಗೂ ಜಾಸ್ತಿ ಡ್ರೈವ್ ಮಾಡಿದ್ದೆ. ಹೈವೆ ಬೇರೆ ಸೂಪರ್ ಆಗಿತ್ತು, ಮಳೆ ಬರ್ತಾ ಇತ್ತು.. ವಾವ್! ತುಂಬ ಎಂಜಾಯ್ ಮಾಡಿದೆ ಅದನ್ನು. ನನ್ನ ಕಾರ್‌ನ ರೂಫ್ ಟಾಪ್ ಓಪನ್ ಆಗುತ್ತದೆ. ಕಾಡಿನಲ್ಲಿ ಹೋಗುವಾಗ, ಮಳೆ ಬರುವಾಗ ತಲೆ ಹೊರಗೆ ಹಾಕಿ ನಿಲ್ಲುತ್ತೇನೆ, ಹೆವನ್ಲಿ ಫೀಲ್ ಅದು.

ನನ್ನ ಅತ್ಯಂತ ಕೆಟ್ಟ ಅನುಭವ ಅಂದ್ರೆ, ಮುಳ್ಳಯ್ಯನಗಿರಿಯಲ್ಲಿ ನಡೆದ ಒಂದು ಘಟನೆ. ವಾಪಾಸ್ ಮನೆಗೆ ಬರುವಾಗ ನನ್ನ ಕಾರನ್ನು ಏಳೆಂಟು ಬೈಕಲ್ಲಿ ಬಂದ ಹುಡುಗರು ಅಡ್ಡ ಹಾಕಿ, ಫಾಲೋ ಮಾಡುತ್ತಾ ಬಂದಿದ್ದರು. ನಾವು ಪೆಪ್ಪರ್ ಸ್ಪ್ರೇ ಹಿಡ್ಕೊಂಡು ರೆಡಿ ಆಗಿದ್ವಿ. ಹೇಗೋ ತಪ್ಪಿಸಿಕೊಂಡು ಪೊಲೀಸ್ ಚೆಕ್ ಪೋಸ್ಟ್‌ಗೆ ಬಂದ್ವಿ. ಆದರೆ ಅಲ್ಲಿಗೆ ಬಂದಾಗ ಗೊತ್ತಾಯಿತು ಅವರು ನನ್ನ ಜತೆ ಪೋಟೋ ತೆಗಿಸಿಕೊಳ್ಳಲು ಅಷ್ಟೆಲ್ಲ ಕಸರತ್ತು ಮಾಡಿದ್ದಂತೆ. ಆದರೂ ಆ ರೀತಿ ಮಾಡಬಾರದಿತ್ತು ಅವರು, ನಾನಂತೂ ಏನಾಗುತ್ತದೋ ಎಂದು ಹೆದರಿ ಕಂಗಾಲಾಗಿದ್ದೆ. ಆಫ್ರಿಕಾದಲ್ಲಿ ಪ್ರಾಣಿಗಳು ವಲಸೆ ಹೋಗುತ್ತವೆ. ಅದಕ್ಕೆ ಒಂದು ನಿರ್ಧಿಷ್ಟ ಸಮಯ ಇದೆ. ಆ ಸಮಯದಲ್ಲಿ ಪ್ರಾಣಿಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿರುತ್ತವೆ. ಅದನ್ನು ನೊಡಬೇಕೆಂಬ ಆಸೆ ಇದೆ. ಆದಷ್ಟು ಬೇಗ ಅಲ್ಲಿಗೆ ಹೋಗುತ್ತೇನೆ. ಟೋಟಲಿ ನಾನು ಶೂಟಿಂಗ್ ಇಲ್ಲದ ದಿನಗಳನ್ನು ಮನೆಯಲ್ಲಂತೂ ಕಳೆಯಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವಳ ಹಾಗೆ ಓಡಾಡುತ್ತಿದ್ದರೆ ಖುಷಿ.

- ಹರಿಪ್ರಿಯಾ/ ನಟಿ

ನಿರೂಪಣೆ : ಪದ್ಮಿನಿ ಜೈನ್ ಎಸ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ