ಆ್ಯಪ್ನಗರ

ಹಂಪಿಯಲ್ಲಿ ಮಿಸ್ ಮಾಡದೆ ನೋಡಬೇಕಾದ ಸ್ಮಾರಕಗಳಿವು

ಹಂಪಿ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಪರಂಪರೆಯಿಂದ ಮಹತ್ವವನ್ನು ಪಡೆದಿದ್ದು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ಇಲ್ಲಿಯ ಅದ್ಭುತ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳುತ್ತಾರೆ.

Vijaya Karnataka Web 2 Jul 2018, 3:49 pm
ಹಕ್ಕ-ಬುಕ್ಕರ ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ ಕೇಳಿರುತ್ತೀರಿ, ಆದರೆ ಆ ವೈಭವ ಹೇಗಿದ್ದಿರಬಹುದು? ಎಂಬುವುದರ ಒಂದು ಸ್ಪಷ್ಟ ಕಲ್ಪನೆ ಮೂಡಬೇಕೆಂದರೆ ನೀವು ಹಂಪಿಗೆ ಭೇಟಿ ನೀಡಲೇಬೇಕು.
Vijaya Karnataka Web hampi 2


ಹಂಪಿ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಪರಂಪರೆಯಿಂದ ಮಹತ್ವವನ್ನು ಪಡೆದಿದ್ದು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ಇಲ್ಲಿಯ ಅದ್ಭುತ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳುತ್ತಾರೆ.

ಹಂಪಿಯಲ್ಲಿ ನೀವು ನೋಡಲೇಬೇಕಾದ ಪ್ರಮುಖ ಸ್ಮಾರಕಗಳೆಂದರೆ

ಅಚ್ಯುತಾರಾಯ ದೇವಾಲಯ
ಈ ದೇವಾಲಯದ ಕಂಬಗಳಲ್ಲಿ ಆಕರ್ಷಕ ಕೆತ್ತನೆಯ ವಾಸ್ತುಶಿಲ್ಪಗಳನ್ನು ಕಾಣಬಹುದು. ಕೋದಂಡರಾಮ ದೇವಾಲಯದ ಬದಿಯಿಂದ ಈ ದೇವಾಲಯಕ್ಕೆ ಭೇಟಿ ನೀಡಬಹುದು.

ಕೋದಂಡರಾಮ ದೇವಾಲಯ
ಹಂಪಿಯ ಪೂರ್ವಕ್ಕೆ ಇರುವ ಈ ದೇವಾಲಯ ತುಂಗಭದ್ರೆ ನದಿಯ ತಟದಲ್ಲಿದೆ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ನಂಬಿಕೆ ಇದೆ.

ವಿಠ್ಠಲ ದೇವಾಲಯ
ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂಡಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊಂದಾದ ವಿಜಯವಿಠ್ಠಲ ದೇಗುಲವಿದೆ. ಈ ದೇವಾಲಯದ ಎದುರು ಒಂದು ಪ್ರಸಿದ್ಧ ರಥವಿದ್ದು, ಈ ರಥವನ್ನು ಒಂದೇ ಕಲ್ಲಿನಿಂದ ಕಡೆದು ತಯಾರಿಸಲಾಗಿದೆ.

ರಾಮಚಂದ್ರ ದೇವಾಲಯ
ಇಲ್ಲಿ ರಾಮನ ಅನೇಕ ಪ್ರತಿಮೆಗಳಿವೆ, ಆದ್ದರಿಂದ ಇದನ್ನು ಹಜಾರ ರಾಮ ದೇವಸ್ಥಾನ (ಸಾವಿರ ರಾಮನ ದೇವಸ್ಥಾನ) ಎಂದು ಕೂಡ ಕರೆಯುತ್ತಾರೆ.

ವಿರೂಪಾಕ್ಷ ದೇವಾಲಯ
ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಮಣ್ಣಿನ ಗೋಡೆಗಳಿಂದ ರಚಿಸಲ್ಪಟ್ಟಿದೆ. ಇದನ್ನು ಭೂಗತ ದೇವಸ್ಥಾನ, ಪಂಪಾವತಿ ದೇವಾಲಯ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಲೋಟಸ್‌ ಮಹಲ್‌
ಮಹಾರಾಣಿಯ ಈ ಅರಮನೆ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿದ್ದು, ಮಹಾರಾಣಿಗಾಗಿ ವಿಶೇಷ ಕೊಳ ನಿರ್ಮಿಸಲಾಗಿತ್ತು.

ಆನೆ ಲಾಯಗಳು ಹಾಗೂ ಕುದುರೆ ಲಾಯಗಳುವಿಶಾಲವಾದ ಜಾಗದಲ್ಲಿ ನಿರ್ಮಿತವಾದ ಆನೆ ಹಾಗೂ ಕುದುರೆ ಲಾಯಗಳನ್ನು ನೋಡಿ ಆ ಕಾಲದಲ್ಲಿ ಸೈನ್ಯ ಎಷ್ಟು ಬಲಿಷ್ಠವಾಗಿತ್ತು ಎಂದು ಊಹಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ