ಆ್ಯಪ್ನಗರ

ಮಾನ್ಸೂನ್‌ನಲ್ಲಿ ಮುನ್ನಾರ್‌ಗೊಂದು ರೊಮ್ಯಾಂಟಿಕ್‌ ಟ್ರಿಪ್

ನೀವು ಕೊಚ್ಚಿಯಿಂದ ಮುನ್ನಾರ್ ಕಡೆ ಪ್ರಯಾಣ ಬೆಳೆಸಿದರೆ ಹಾವಿನಂತೆ ಬಳಸಿಕೊಂಡು ಹೋಗುವ ರಸ್ತೆಯಿಂದಾಗಿ ಈ ರೋಡ್‌ ಯಾವಾಗಪ್ಪಾ...ಕೊನೆಯಾಗುವುದು ಎಂದು ಅನಿಸಲಾರಂಭಿಸುತ್ತದೆ.

Vijaya Karnataka Web 18 Jun 2018, 3:39 pm
ನೀವು ಕೊಚ್ಚಿಯಿಂದ ಮುನ್ನಾರ್ ಕಡೆ ಪ್ರಯಾಣ ಬೆಳೆಸಿದರೆ ಹಾವಿನಂತೆ ಬಳಸಿಕೊಂಡು ಹೋಗುವ ರಸ್ತೆಯಿಂದಾಗಿ ಈ ರೋಡ್‌ ಯಾವಾಗಪ್ಪಾ...ಕೊನೆಯಾಗುವುದು ಎಂದು ಅನಿಸಲಾರಂಭಿಸುತ್ತದೆ.
Vijaya Karnataka Web munnar


ಕೊಚ್ಚಿಯಿಂದ 140 ಕಿ.ಮೀ ದೂರದಲ್ಲಿರುವ 6000 ಅಡಿ ಎತ್ತರದ ಆ ಗುಡ್ಡವನ್ನು ಏರುತ್ತಾ ಹೋದಂತೆ ದೇವರ ನಾಡಿಗೆ 'ಮುನ್ನಾರ್‌' ಒಂದು ವರ ಎಂದನಿಸದೆ ಇರಲ್ಲ ನೋಡಿ... ಅಷ್ಟೊಂದು ಮನಮೋಹಕವಾಗಿದೆ ಈ ಮುನ್ನಾರ್‌. ಹೊಸ ಜೋಡಿಗೆ ಹನಿಮೂನ್‌ ಟ್ರಿಪ್‌ಗೆ ಸೂಕ್ತ ತಾಣ ಇದಾಗಿದೆ.

ಕೊಚ್ಚಿಯ ವಾತಾವರಣಕ್ಕೂ ಮುನ್ನಾರ್‌ ವಾತಾವರಣಕ್ಕೂ ತುಂಬಾ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ. ಮುನ್ನಾರ್‌ನಲ್ಲಿ ಬೀಸುವ ಆ ತಣ್ಣನೆಯ ಗಾಳಿಗೆ ಮೈಯೊಡ್ಡಿ ನಿಲ್ಲುವುದೆಂದರೆ ಏನೋ ಹಿತಾನುಭವ. ಅಲ್ಲಿರುವ ಟೀ ತೋಟ ನಿಮ್ಮ ಕಣ್ಣಗಳನ್ನು ತಂಪಾಗಿಸುತ್ತವೆ.
ಮಾನ್ಸೂನ್‌ನಲ್ಲಿ ಇಲ್ಲಿಗೆ ಹೋಗುವುದಾದರೆ ಜಿಟಿಜಿಟಿ ಮಳೆ ಇರುವುದರಿಂದ ತುಂಬಾ ಚಳಿ ಇರುತ್ತದೆ. ಆದ್ದರಿಂದ ನಿಮ್ಮನ್ನು ಬೆಚ್ಚಗಿಡುವ ಕೋಟ್‌ ಅಥವಾ ಸ್ಟೆಟರ್‌ ಕೊಂಡೊಯ್ಯಲು ಮರೆಯದಿರಿ. ಸೈಟ್‌ ಸೀಯಿಂಗ್‌ ಅಂತ ಅಲ್ಲಿಗೆ ಹೋದ ನೀವು ಅಲ್ಲಿ ತಲುಪಿದ ಬಳಿಕ ಅಲ್ಲಿರುವ ಹೂ, ಪ್ರಾಣಿ-ಪಕ್ಷಿಗಳನ್ನು ನೋಡುತ್ತಾ ಕಾಲ ಕಳೆಯುತ್ತೀರ.



ಟ್ರೆಕ್ಕಿಂಗ್‌ ಹಾಗೂ ಪ್ರಾಣಿ ವೀಕ್ಷಣೆ ಇಷ್ಟಪಡುವವರು ಅಲ್ಲಿಂದ 15 ಕಿ. ಮೀ ದೂರವಿರುವ ಇರವಿಕುಳಂ ನ್ಯಾಷನಲ್‌ ಪಾರ್ಕ್‌ಗೆ ಭೇಟಿ ನೀಡಬಹುದು.

ಮುನ್ನಾರ್‌ಗೆ ಭೇಟಿ ನೀಡಿದರೆ ನೀವು ಅಲ್ಲಿಯ ಟೀ ಸವಿಯಲು ಮಿಸ್‌ ಮಾಡದಿರಿ. ಕೇರಳ ಸ್ಪೆಷಲ್ ಉಣ್ಣಿಪ್ಪನ್ ಹಾಗೂ ಹೋಂಮೇಡ್ ಚಾಕಲೇಟ್‌ ಇಲ್ಲಿಯ ಬೇಕರಿಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಆಹಾರ ವಸ್ತುಗಳಾಗಿವೆ.
ಮುನ್ನಾರ್‌ನಲ್ಲಿ ತಂಗಲು ಹೋಟೆಲ್ ವ್ಯವಸ್ಥೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ