ಆ್ಯಪ್ನಗರ

ಗೋವಾ ಟ್ರಿಪ್‌ನಲ್ಲಿ ಇರಲೇಬೇಕು ಸೇಫ್ಟಿ ಪ್ಲಾನ್‌

ಮಸ್ತಿ-ಮೋಜಿಗಾಗಿ ಗೋವಾಕ್ಕೆ ಹೋಗುವವರು ಟ್ರಿಪ್‌ ಪ್ಲಾನ್‌ನಲ್ಲಿ ಸ್ವಲ್ಪ ಸುರಕ್ಷತೆಗೂ ಒತ್ತು ನೀಡಿದರೆ ಗೋವಾ ಟ್ರಿಪ್‌ ಯಾವುದೇ ಕಹಿ ಘಟನೆ ನಡೆಯದೆ, ಟ್ರಿಪ್‌ ಅನ್ನು ಮತ್ತಷ್ಟು ಎಂಜಾಯ್ ಮಾಡಬಹುದಾಗಿದೆ.

Vijaya Karnataka Web 26 Jun 2018, 1:18 pm
ಗೋವಾ ಟ್ರಿಪ್‌ ಯಾರು ತಾನೆ ಇಷ್ಟಪಡಲ್ಲ ಹೇಳಿ? ಎಂಥ ಅರಸಿಕನನ್ನೂ ಸೆಳೆಯುವಂಥ ರಸಿಕತೆಯ ರಾಜ್ಯ ಗೋವಾ. ಮಸ್ತಿ-ಮೋಜಿಗಾಗಿ ಗೋವಾಕ್ಕೆ ಹೋಗುವವರು ಟ್ರಿಪ್‌ ಪ್ಲಾನ್‌ನಲ್ಲಿ ಸ್ವಲ್ಪ ಸುರಕ್ಷತೆಗೂ ಒತ್ತು ನೀಡಿದರೆ ಗೋವಾ ಟ್ರಿಪ್‌ ಯಾವುದೇ ಕಹಿ ಘಟನೆ ನಡೆಯದೆ, ಟ್ರಿಪ್‌ ಅನ್ನು ಮತ್ತಷ್ಟು ಎಂಜಾಯ್ ಮಾಡಬಹುದಾಗಿದೆ.
Vijaya Karnataka Web goa


ಗೋವಾ ಟ್ರಿಪ್‌ ಹೋಗುವಾಗ ಈ ಅಂಶಗಳಿಗೂ ಹೆಚ್ಚು ಒತ್ತು ನೀಡಿ:

ನೋ ಸೆಲ್ಫಿ ಝೋನ್‌

ಬಾಗಾ ನದಿ, ಅಂದುನಾ, ವಾಗಾಟರ್, ಮೋರ್ಜಿಮ್, ಅಶ್ವೇಮ್, ಜಪಾನೀಸ್ ಗಾರ್ಡನ್, ಬೆತುಲ್, ಕೆನಾಜಿನಿಮ್, ಪಾಲೋಲೆಮ್, ಖೋಲಾ, ಕ್ಯಾಬೊ ಡೆ ರಾಮಾ, ಪೋಲಮ್, ಗಾಲ್ಗಿಬಾಘ್ ಹೀಗೆ ಗೋವಾದ ಎಲ್ಲಾ ಬೀಚ್‌ಗಳಲ್ಲಿ ನೋ ಸೆಲ್ಫಿ ಝೋನ್ ಬೋರ್ಡ್ ಹಾಕಲಾಗಿದೆ. ಜತೆಗೆ ಬೀಚ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಮಾಹಿತಿ ಇರುವ ಬೋರ್ಡ್‌ಗಳು ಹಾಗೂ ಅವಶ್ಯಕತೆ ಬಿದ್ದಾಗ ಎಮರ್ಜೆನ್ಸಿ ಟೋಲ್ ಫ್ರೀ ಸಂಖ್ಯೆ ಕೂಡ ನೀಡಿ ಪ್ರವಾಸಿಗರ ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಿದೆ.

ಗೋವಾ ಪ್ರವಾಸೋದ್ಯಮ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಜತೆಗೆ ಪ್ರವಾಸಿಗರು ಈ ರೀತಿ ಮುನ್ನೆಚ್ಚರಿಕೆ ಕ್ರಮವಹಿಸುವುದು ಒಳ್ಳೆಯದು:

1. ನಿಮ್ಮಲ್ಲಿರುವ ಬೆಲೆ ಬಾಳುವ ವಸ್ತುಗಳು ಹಾಗೂ ಪರ್ಸ್‌, ದಾಖಲೆಗಳು ಜೋಪಾನ

ನೀರಿನಲ್ಲಿ ಆಡುವಾಗ ಅವುಗಳು ಕಳೆದು ಹೋಗುವ ಸಾಧ್ಯತೆ ಇರುವುದರಿಂದ ಅವುಗಳ ಕುರಿತು ಜೋಪಾನ.

2. ಗೋವಾಕ್ಕೆ ಹೋಗುವ ಮುನ್ನ ಆ ಸ್ಥಳ ಬಗ್ಗೆ ಮಾಹಿತಿ ಸಂಗ್ರಹಿಸಿ
ಅಲ್ಲಿಗೆ ಹೋಗಿ ಟ್ರಾವೆಲ್ ಗೈಡ್‌ ಹುಡುಕುವ ಬದಲು ಗೋವಾ ಕುರಿತು ಸ್ವಲ್ಪ ಮಾಹಿತಿ ಸಂಗ್ರಹಿಸಿದರೆ ಸೋಲೋ ಟ್ರಿಪ್ ಕೂಡ ಮಾಡಬಹುದು.

3. ವಾಟರ್‌ ಸ್ಪೋರ್ಟ್ಸ್‌
ವಾಟರ್‌ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸುವಾಗ ಗೈಡ್‌ ನೀಡುವ ಮಾರ್ಗದರ್ಶನವನ್ನು ಪಾಲಿಸಿ. ಇನ್ನು ಸ್ವಿಮ್ಮಿಂಗ್‌ ಮಾಡುವುದಾದರೆ ಅಪಾಯ ಅಂತ ಬೋರ್ಡ್ ಹಾಕಿದ ಕಡೆ ಹೋಗಬೇಡಿ, ಯಾರೂ ಇಲ್ಲದ ಕಡೆ ಹೋಗಿ ಈಜುವುದು ಮಾಡಬೇಡಿ. ಹೊಟ್ಟೆ ತುಂಬಿದ ಬಳಿಕ ಕೂಡ ಈಜಾಡಲು ಹೋಗಬೇಡಿ.

4. ನೋ ಡ್ರಗ್ಸ್‌

ಗೋವಾದಲ್ಲಿ ಹೋಗಿ ಮೋಜಿಗಾಗಿ ಡ್ರಗ್ಸ್‌ ತೆಗೆಯುವುದು ಮಾಡಬೇಡಿ. ಗೋವಾ ಪಾರ್ಟಿ ಸ್ಥಳವಾದರೂ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಿ.

5. ಜನನಿಬಿಡ ಪ್ರದೇಶದಲ್ಲಿ ತಿರುಗಾಡಿ
ಗೋವಾಕ್ಕೆ ನಾನಾ ರೀತಿಯ ಜನರು ಭೇಟಿ ನೀಡುತ್ತಾರೆ, ಸುಮ್ಮನೆ ಕಿರಿಕಿರಿ ಅನುಭವಿಸುವುದಕ್ಕಿಂತ ಗುಂಪಿನಲ್ಲಿರುವುದು ಸೇಫ್‌. ಸೋಲೋ ಟ್ರಿಪ್‌ ಹೋದವರು ಕೂಡ ಜನರು ಹೆಚ್ಚಿರುವ ಕಡೆ ಓಡಾಡುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ