ಆ್ಯಪ್ನಗರ

ಕೂರ್ಗ್‌ ಟ್ರಿಪ್‌ನಲ್ಲಿ ಸೂರ್ಲಬ್ಬಿ ಜಲಪಾತ ಕಣ್ತುಂಬಿಕೊಳ್ಳಲು ಮಿಸ್‌ ಮಾಡದಿರಿ

ಮಾದಾಪುರ-ಸೂರ್ಲಬ್ಬಿ ನಡುವಿನ ರಸ್ತೆ ಬದಿಯಲ್ಲೇ ಈ ಜಲಪಾತವಿದ್ದು, ಇದು ಸೂರ್ಲಬ್ಬಿ ಜಲಪಾತವೆಂದೇ ಪ್ರಸಿದ್ಧಿ ಪಡೆದಿದೆ.

Vijaya Karnataka Web 19 Jun 2018, 4:06 pm
ಕೊಡಗಿನಲ್ಲಿ ಬಿರುಸಿನ ಮುಂಗಾರಿನಿಂದಾಗಿ ಹಳ್ಳ-ಕೊಳ್ಳಗಳು ತುಂಬಿವೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಕೊಡಗಿನ ಜಲಪಾತಗಳೆಂದರೆ ತಕ್ಷಣ ನೆನಪಿಗೆ ಬರುವುದು ಅಬ್ಬಿ ಜಲಪಾತ, ಮಲ್ಲಳ್ಳಿ ಜಲಪಾತ. ಆದರೆ ಇವುಗಳಷ್ಟೇ ಆಕರ್ಷಕವಾದ ಜಲಪಾತವೊಂದು ಮಳೆಗಾಲದಲ್ಲಿ ನಿಮಗೆ ಕಾಣ ಸಿಗುತ್ತದೆ.

ಮಾದಾಪುರ-ಸೂರ್ಲಬ್ಬಿ ನಡುವಿನ ರಸ್ತೆ ಬದಿಯಲ್ಲೇ ಈ ಜಲಪಾತವಿದ್ದು, ಇದು ಸೂರ್ಲಬ್ಬಿ ಜಲಪಾತವೆಂದೇ ಪ್ರಸಿದ್ಧಿ ಪಡೆದಿದೆ. ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ದಾರಿಯಲ್ಲಿ ಮಾದಾಪುರದಿಂದ ಎಡಕ್ಕೆ ಹೋದರೆ ಸೂರ್ಲಬ್ಬಿ ಗ್ರಾಮಕ್ಕೆ ಹೋಗುವ ದಾರಿ ಸಿಗುತ್ತದೆ. ಮಡಿಕೇರಿಯಿಂದ 40 ಕಿ.ಮೀ, ಮಾದಾಪುರದಿಂದ 18 ಕಿ,ಮೀ ದೂರವಿರುವ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.

ಜನಜಂಗುಳಿ ಕಡಿಮೆ ಇರುವ ಕಡೆ ಜಲಪಾತವನ್ನು ಕಣ್ತುಂಬಿಕೊಳ್ಳಬೇಕು ಎಂದು ಬಯಸುವುದಾದರೆ ಸೂರ್ಲಬ್ಬಿ ಜಲಪಾತ ನೋಡಲು ಹೋಗಬಹುದು.

ಹೋಗುವುದು ಹೇಗೆ?
ಇಲ್ಲಿಗೆ ಬಸ್‌ ವ್ಯವಸ್ಥೆ ತುಂಬಾ ವಿರಳ. ಗಾಡಿಯಲ್ಲಿ ಹೋಗುವುದು ತುಂಬಾ ಸೂಕ್ತ. ಇಲ್ಲಿಗೆ ಹೋಗಲು ಬಾಡಿಗೆಗೆ ಕೂಡ ಗಾಡಿಗಳು ದೊರೆಯುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ