ಆ್ಯಪ್ನಗರ

ಥಾಯ್ಲೆಂಡ್‌ ಪ್ರವಾಸಕ್ಕೆ ಉಚಿತ ವೀಸಾ ವಿತರಣೆ ಅವಧಿ ವಿಸ್ತರಣೆ

ಮೋಜು ಮಸ್ತಿಗೆ ಅತ್ಯಂತ ಪ್ರಸಕ್ತ ತಾಣ ಥಾಯ್ಲೆಂಡ್‌ ವಿಶ್ವದ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಥಾಯ್ಲೆಂಡ್‌ ಒಂದಾಗಿದ್ದು, ಮನರಂಜನೆ ಜತೆಗೆ ಅತ್ಯದ್ಭುತ ಅನುಭವ ನೀಡುತ್ತದೆ. ಇದೀಗ ಅಲ್ಲಿಗೆ ಪ್ರವಾಸಕ್ಕೆ ತೆರಳುವವರಿಗೆ ನೀಡುವ ವಿಶೇಷ ಉಚಿತ ವೀಸಾ ವಿತರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

Vijaya Karnataka 20 Feb 2019, 10:56 am
ಹೊಸದಿಲ್ಲಿ: ಥಾಯ್ಲೆಂಡ್‌ಗೆ ಪ್ರವಾಸಕ್ಕೆ ತೆರಳುವವರಿಗೆ ಶುಭ ಸುದ್ದಿ. ಮೋಜು ಮಸ್ತಿಗೆ ಅತ್ಯಂತ ಪ್ರಸಕ್ತ ತಾಣ ಥಾಯ್ಲೆಂಡ್‌ ವಿಶ್ವದ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಥಾಯ್ಲೆಂಡ್‌ ಒಂದಾಗಿದ್ದು, ಮನರಂಜನೆ ಜತೆಗೆ ಅತ್ಯದ್ಭುತ ಅನುಭವ ನೀಡುತ್ತದೆ. ಇದೀಗ ಅಲ್ಲಿಗೆ ಪ್ರವಾಸಕ್ಕೆ ತೆರಳುವವರಿಗೆ ನೀಡುವ ವಿಶೇಷ ಉಚಿತ ವೀಸಾ ವಿತರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
Vijaya Karnataka Web Thailand Tourism


ಥಾಯ್ಲೆಂಡ್‌ಗೆ ಭೇಟಿ ನೀಡುತ್ತಿರುವ ಉಚಿತ ವೀಸಾ ವಿತರಣೆಯ ಅವಧಿಯನ್ನು ಏಪ್ರಿಲ್‌ 30ರ ತನಕ ವಿಸ್ತರಿಸಲಾಗಿದೆ. ಇದರಿಂದಾಗಿ ಥಾಯ್ಲೆಂಡ್‌ಗೆ ತೆರಳಲು ಬಯಸುವ ಪ್ರಯಾಣಿಕರು ಸಮಾರು 4,500 ರೂ. ಉಳಿತಾಯ ಮಾಡಬಹುದಾಗಿದೆ.

ಇದು ಥಾಯ್ಲೆಂಡ್‌ಗೆ ಸಿಂಗಲ್‌ ಎಂಟ್ರಿ ಟೂರಿಸ್ಚ್‌ ವೀಸಾ ಪಡೆಯುವ ಪ್ರವಾಸಿಗಳಿಗಷ್ಟೇ ಈ ವಿನಾಯಿತಿ ಅನ್ವಯವಾಗಲಿದೆ. ಇದರ ಅನ್ವಯ ಥಾಯ್ಲೆಂಡ್‌ನಲ್ಲಿ 15 ದಿನಗಳ ವರೆಗೆ ಮಾತ್ರ ತಂಗಲು ಅವಕಾಶ ಇರುತ್ತದೆ. ಉಚಿತ ವೀಸಾದೊಂದಿಗೆ ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವ ಅವಕಾಶ ಕೆಲವೇ ತಿಂಗಳು ಉಳಿದಿದೆ. ಗ್ರಾಹಕರನ್ನು ಸೆಳೆಯಲು ಇಂಡಿಗೋ ಸೇರಿದಂತೆ ನಾನಾ ಏರ್‌ಲೈನ್ಸ್‌ ಸೇವೆಗಳು ಆಕರ್ಷಕ ಆಫರ್‌ಗಳನ್ನು ನೀಡುತ್ತಿವೆ. ಥಾಯ್ಲೆಂಡ್‌ ಪ್ರಯಾಣ ಕೈಗೊಳ್ಳುವವರಿಗೆ ಇದು ಸುವರ್ಣ ಅವಕಾಶ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ