ಆ್ಯಪ್ನಗರ

ಶಿವಮೊಗ್ಗದ ಟಾಪ್ 5 ಪ್ರವಾಸಿ ತಾಣಗಳು

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ.

Vijaya Karnataka Web 10 Apr 2017, 5:35 pm
ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ.
Vijaya Karnataka Web top 5 places to visit in shimoga
ಶಿವಮೊಗ್ಗದ ಟಾಪ್ 5 ಪ್ರವಾಸಿ ತಾಣಗಳು


ಶಿವಮೊಗ್ಗ 'ಗೇಟ್‌ವೇ ಟು ಮಲ್ನಾಡ್‌' ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ಸುಂದರ ತಾಣದ ಪ್ರಮುಖ ಪ್ರವಾಸಿ ತಾಣಗಳು

1.ಕೊಡಚಾದ್ರಿ

ಕೊಡಚಾದ್ರಿ ಕರ್ನಾಟಕದ ಹತ್ತನೇ ಅತಿ ಎತ್ತರ ಶಿಖರ. ಇದೊಂದು ಟ್ರಕ್ಕಿಂಗ್‌ಗೆ ಫೇಮಸ್‌ ಆಗಿದೆ.

2. ಹೊನ್ನೆಮರಡು
ಇದು ಶಿವಮೊಗ್ಗದ ಒಂದು ಚಿಕ್ಕ ಹಳ್ಳಿ. ಇದರ ನಿಸರ್ಗ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಪಕ್ಷಿ ಪ್ರಿಯರ ಸ್ವರ್ಗ.

3. ಜೋಗ ಜಲಪಾತ
ಅತೀ ಎತ್ತರದಿಂದ ಧುಮ್ಮಿಕ್ಕುವ ಜೋಗ ಜಲಪಾತದ ಸೌಂದರ್ಯವನ್ನು ನೋಡುವುದೇ ಚೆಂದ. ರಾಜ, ರಾಣಿ, ರಾಕೆಟ್ ಮತ್ತು ರೋರರ್ ನಾಲ್ಕು ದಿಕ್ಕುಗಳಿಂದ ಧುಮ್ಮಿಕ್ಕುತ್ತಿರುವ ಆ ಚೆಲುವನ್ನು ನೋಡಲು ಪದಗಳೇ ಸಾಲದು.

4. ಕುಂದಾದ್ರಿ'
ಸಮುದ್ರ ತೀರದಿಂದ 3,200 ಅಡಿ ಎತ್ತರದಲ್ಲಿರುವ ಕಲ್ಲೇ ಇಲ್ಲಿಯ ಪ್ರಮುಖ ಆಕರ್ಷಣೆ. ಇಲ್ಲೊಂದು ಅತ್ಯಾಕರ್ಷಕ ಜೈನ್ ದೇವಾಲಯವಿದ್ದು ಇದನ್ನು 17ನೇ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ.

5. ಸಕ್ಕರೆಬೈಲು
ಇದೊಂದು ಆನೆ ಕ್ಯಾಂಪ್‌ ಆಗಿದ್ದು ಇಲ್ಲಿಗೆ ಭೇಟಿ ನೀಡಿದರೆ ಆನೆಗಳು ನೀರಿನಲ್ಲಿ ಆಡುವುದನ್ನು ಕಾಣಬಹುದು. ಈ ಕ್ಯಾಂಪ್‌ಗೆ ಹೋಗ ಬಯಸುವುದಾದರೆ ಬೆಳಗ್ಗೆ 9ರ ಮೊದಲು ತಲುಪಲು ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ