*ಗೀತಾ ನೆಲ್ಲೀಕಾಯಿ
ಒಂದೆಡೆ ಪ್ರಕೃತಿಯ ಸುಂದರ ವಾತಾವರಣ. ಇನ್ನೊಂದೆಡೆ ಕಲೆ, ಸಂಸ್ಕೃತಿಗಳಿಂದ ಸಮೃದ್ಧವಾದ ಮಾಂಟ್ರಿಯಲ್ಗೆ ಪ್ರವಾಸಿಗರನ್ನು ಮೋಡಿ ಮಾಡುವ ಮಾಂತ್ರಿಕ ಶಕ್ತಿ ಇದೆ.
ಕೆನಡಾದ ಹಳೆಯ ವಸಾಹತುಗಳಲ್ಲಿ ಒಂದಾದ ದ್ವೀಪನಗರಿ ಮಾಂಟ್ರಿಯಲ್ ಹಲವು ವೈಶಿಷ್ಟ್ಯಗಳೊಂದಿಗೆ ಪ್ರವಾಸಿಗರನ್ನು ವ್ಯಾಪಕವಾಗಿ ಸೆಳೆಯುತ್ತದೆ. ಇದು ಐತಿಹಾಸಿಕ ತಾಣವಾಗಿಯೂ ಖ್ಯಾತ. ಮೌಂಟ್ ರಿಯಲ್ ಎಂಬ ಬೆಟ್ಟದ ಸುತ್ತ ಹರಡಿರುವುದರಿಂದ ಈ ನಗರಕ್ಕೆ ಮಾಂಟ್ರಿಯಲ್ ಎಂಬ ಹೆಸರು ಬಂದಿದೆ.
ಯುರೋಪಿಯನ್ನರು ಬರುವ ಮುಂಚೆ ರೆಡ್ ಇಂಡಿಯನ್ ಜನಾಂಗ ಇಲ್ಲಿ ವಾಸವಿತ್ತು. 17ನೇ ಶತಮಾನದಲ್ಲಿ ಫ್ರೆಂಚರು ದ್ವೀಪದ ಮಧ್ಯೆ ಇದ್ದ ಈ ಸ್ಥಳವನ್ನು ಆಕ್ರಮಿಸಿದರು. ನಂತರ ಬ್ರಿಟಿಷರು ವಶಪಡಿಸಿಕೊಂಡರು. ಈಗ ಇದು ಕೆನಡಾದ ಪ್ರಮುಖ ನಗರಗಳಲ್ಲಿ ಒಂದು. ಮಾಂಟ್ರಿಯಲ್ ನಗರ ಹಳೆಯ ಹಾಗೂ ಹೊಸ ನಗರಗಳ ಸಮ್ಮಿಶ್ರಣ. ನಗರದ ಹಳೆಯ ಭಾಗದಲ್ಲಿ 17ನೇ ಶತಮಾನದ ಮನೆಗಳು, ಭವನಗಳಿಂದ ಕೂಡಿದೆ. ಅಲ್ಲಿನ ರಸ್ತೆಗಳಲ್ಲಿ ಹಳೆಯ ಕಾಲದ ವಿಕ್ಟೋರಿಯಾ ಕುದುರೆಗಾಡಿಗಳಲ್ಲಿ ಸುತ್ತುವ ಅನುಭವ ಅವಿಸ್ಮರಣೀಯ. ಇಲ್ಲಿ ಹಳೆಯಕಾಲದ ಜಾನಪದ ಕಲಾವಸ್ತುಗಳು, ಪೇಂಟಿಂಗ್ಗಳು ಲಭ್ಯ.
ಆಕರ್ಷಣೆ
ಇಲ್ಲಿ ನೋಡಲೇಬೇಕಾದ ಪ್ರೇಕ್ಷ ಣೀಯ ಸ್ಥಳಗಳೆಂದರೆ ಗೋಥಿಕ್ ಶೈಲಿಯಲ್ಲಿ ಕಟ್ಟಿರುವ ನಾಟಡ್ರ್ಯಾಮ್ ಬೆಸಲಿಕಾ, ಮಾಂಟ್ರಿಯಲ್ ಟವರ್ ಅಬ್ಸರ್ ವೇಟರಿ, ಬಯೋಡೋಂ ಎಂಬ ಜಲಚರಗಳು ಮತ್ತು ಪಕ್ಷಿಗಳ ಪ್ರಕೃತಿ ಸಹಜ ತಂಗುದಾಣ, ಹಳೆಯ ಬಂದರು, ಚೈನೀಸ್ ಬಟಾನಿಕಲ್ ಉದ್ಯಾನ ಮುಂತಾದವುಗಳು.
ಚಾರಣಕ್ಕೆ ಹೆಸರುವಾಸಿ
ಮಾಂಟ್ರಿಯಲ್ ಗಿರಿ ಅತ್ಯಂತ ಸುಂದರ. ಬೆಟ್ಟವನ್ನೇರುವಾಗ ಕಾಣುವ ಸುಂದರ ಮನೆಗಳು, ಚಾರಣ ದಾರಿಗಳು, ಸ್ಕೀಯಿಂಗ್ ಹಾಗೂ ಸ್ಕೇಟಿಂಗ್ ತಾಣಗಳು ವೀಕ್ಷ ಣೀಯ. ಬೆಟ್ಟದ ಮೇಲಿರುವ ವೀಕ್ಷ ಣಾ ತಾಣದಿಂದ ಕಾಣುವ ನಗರದ ವಿಹಂಗಮ ನೋಟ ಅತ್ಯಂತ ಸುಂದರ.
ಫ್ರೆಂಚ್ ಮತ್ತು ಬ್ರಿಟಿಷ್ ಕಲೆ
ಶಿಲ್ಪಕಲೆಗಳಿಂದ ಕೂಡಿದ ನಗರದ ಮ್ಯೂಸಿಯಂಗಳು ಕಲಾಕೇಂದ್ರಗಳ ವೀಕ್ಷ ಣೆಯ ಅನುಭವ ಮರೆಯಲಾಗದ್ದು. ಇಲ್ಲಿ ಅನೇಕ ಭಾರತೀಯ ಉಪಹಾರ ಮಂದಿರಗಳಿವೆ. ಇಲ್ಲಿನ ವಸ್ತ್ರ ಮಳಿಗೆಗಳಲ್ಲಿ ಕೈಗೆಟಕುವ ಬೆಲೆಗಳಲ್ಲಿ ಸುಂದರ ಉಡುಪುಗಳು ದೊರೆಯುತ್ತವೆ.
ಹೋಗುವುದು ಹೇಗೆ?
ಮುಂಬಯಿಯಿಂದ ಅಥವಾ ಬೆಂಗಳೂರಿನಿಂದ ಟೊರಾಂಟೋ ಅಥವಾ ಒಟ್ಟಾವಾಗೆ ವಿಮಾನ ಸೌಲಭ್ಯವಿದೆ. ಅಲ್ಲಿಂದ ಬೇರೆ ವಿಮಾನದಲ್ಲಿ ತಲುಪಬಹುದು. ಟೊರೊಂಟೋದಿಂದ ವಾಹನದಲ್ಲಿ ಐದಾರು ಗಂಟೆಯ ಹಾದಿ. ಬಸ್ ಹಾಗೂ ರೈಲಿನಲ್ಲೂ ಹೋಗಬಹುದು.