ಆ್ಯಪ್ನಗರ

ಪ್ರವಾಸಕ್ಕೆ ಸಾಮಾಜಿಕ ತಾಣವೇ ಮಾಧ್ಯಮ

ಯುವ ಜನತೆ ಕೂಡ ಇತ್ತೀಚೆಗೆ ಧಾರ್ಮಿಕ, ಸಾಂಸ್ಕೃತಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಸಕ್ತಿ ತೋರುತ್ತಿದ್ದು, ಈ ಮೂಲಕ ಧಾರ್ಮಿಕ ಪ್ರವಾಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

Vijaya Karnataka 2 Jun 2018, 5:00 am
ಯುವ ಜನತೆ ಕೂಡ ಇತ್ತೀಚೆಗೆ ಧಾರ್ಮಿಕ, ಸಾಂಸ್ಕೃತಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಸಕ್ತಿ ತೋರುತ್ತಿದ್ದು, ಈ ಮೂಲಕ ಧಾರ್ಮಿಕ ಪ್ರವಾಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಟ್ರಾವೆಲ್‌ ಮಾರುಕಟ್ಟೆ ವರದಿ ಪ್ರಕಾರ, ವಾರಣಸಿ, ಶಿರಡಿ, ತಿರುಪತಿ ಟಾಪ್‌ ಸ್ಥಾನದಲ್ಲಿದೆ. ತಮ್ಮ ಸಂಪ್ರದಾಯ, ಧಾರ್ಮಿಕ ನಂಬಿಕೆಗೆ ಭಾರತೀಯರು ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ವಾರಣಸಿ ಹಾಗೂ ಪುರಿಗೆ ಈ ಬೇಸಿಗೆಯಲ್ಲಿ ಹೆಚ್ಚಿನ ಜನ ಭೇಟಿ ನೀಡಿದ್ದು, ಇತರೇ ನಗರಗಳಿಗಿಂತ ಇಲ್ಲಿ ಹೆಚ್ಚು ಹೋಟೆಲ್‌ಗಳು ಬುಕ್‌ ಆಗಿವೆಯಂತೆ. ಶೇ.60ರಷ್ಟು ಪುರಿ, ಶೇ. 48ರಷ್ಟು ವಾರಣಸಿ, ಶೇ. 34ರಷ್ಟು ತಿರುಪತಿ, ಶೇ. 19ರಷ್ಟು ಶಿರಡಿ ಸುತ್ತಮುತ್ತ ಹೋಟೆಲ್‌ಗಳು ಬುಕ್‌ ಆಗಿವೆಯಂತೆ.
Vijaya Karnataka Web travel bit
ಪ್ರವಾಸಕ್ಕೆ ಸಾಮಾಜಿಕ ತಾಣವೇ ಮಾಧ್ಯಮ


ಸೆಲ್ಫ್‌ ಡ್ರೈವ್‌ ಟೂರಿಸಂಗೆ ಬೇಡಿಕೆ
ಈ ವರ್ಷ ಸೆಲ್ಫ್‌ ಡ್ರೈವ್‌ ಟೂರಿಸಂಗೆ ವಿಪರೀತ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ ಟೂರಿಸಂ ತಜ್ಞರು.
ಒಬ್ಬರೇ ಪ್ರವಾಸ ಮಾಡುವ ಸೋಲೋ ಟ್ರಾವೆಲ್‌ ಕೆಲವು ವರ್ಷಗಳಿಂದ ಗಮನ ಸೆಳೆಯುತ್ತಿದ್ದು, ಟ್ರಾವೆಲ್‌ ಕಂಪನಿಯೊಂದರ ವರದಿ ಪ್ರಕಾರ, ತಿಂಗಳಿಂದ ತಿಂಗಳಿಗೆ ಇದರ ಪ್ರಮಾಣ ಏರುತ್ತಿದೆ. ಸೋಲೋ ಪ್ರವಾಸದಲ್ಲಿ ಮಹಿಳಯರದ್ದೇ ಮೇಲಗೈ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಏಕಾಂಗಿಯಾಗಿ ಜಗತ್ತು ಸುತ್ತುತ್ತಿದ್ದಾರೆ. ಕಳೆದ ವರ್ಷ ಮಹಿಳೆಯರು ಶೇ.59.6ರಷ್ಟು ಹಾಗೂ ಪುರುಷರು 40.4ರಷ್ಟು ಮಂದಿ ಸೋಲೋ ಪ್ರವಾಸ ಮಾಡಿದ್ದಾರೆ. ಈ ವರ್ಷ ಕೂಡ ಇನ್ನಷ್ಟು ಹೆಚ್ಚುವ ಹಾಗೂ ಪ್ರಸಿದ್ಧವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಪ್ರವಾಸಕ್ಕೆ ಸಾಮಾಜಿಕ ತಾಣವೇ ಮಾಧ್ಯಮ
ಪ್ರವಾಸಕ್ಕೂ ಸಾಮಾಜಿಕ ತಾಣಗಳಿಗೂ ಒಂದಕ್ಕೊಂದು ಸಂಬಂಧವಿದೆ. ಪ್ರವಾಸಕ್ಕೆ ಹೋಗುವ ಪೂರ್ವ ತಯಾರಿ ಹಾಗೂ ಅನಂತರದ ಅನುಭವ ಶೇರ್‌ ಮಾಡಲು ಸಾಮಾಜಿಕ ತಾಣಗಳು ಇದೀಗ ಪ್ರಮುಖ ವೇದಿಕೆಗಳಾಗಿವೆ.
ಸಾಮಾಜಿಕ ತಾಣಗಳ ಮೂಲಕ ಪ್ರವಾಸ ಮಾಡುವವರು ಹೇಗೆಲ್ಲ ತಯಾರಿ ಮಾಡುತ್ತಾರೆ ಗೊತ್ತಾ? ಶೇ.87ರಷ್ಟು ಮಂದಿ ತಮ್ಮ ಮುಂದಿನ ಅಡ್ವೇಂಚರ್‌ ಪ್ರಯಾಣಕ್ಕೆ ಸಾಮಾಜಿಕ ತಾಣಗಳಿಂದ ಉತ್ತೇಜನ ಪಡೆಯುತ್ತಾರೆ. ಶೇ. 46ರಷ್ಟು ಮಂದಿ ಸ್ಮಾರ್ಟ್‌ ಫೋನ್‌ ಮೂಲಕ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಶೇ. 85ರಷ್ಟು ಮಂದಿ ತಮ್ಮ ಪ್ರಯಾಣದ ಪ್ಯಾಕೇಜ್‌ಗಾಗಿ ಹಲವು ವೆಬ್‌ಸೈಟ್‌ಗಳನ್ನು ನೋಡುತ್ತಾರೆ. ಶೇ. 97ರಷ್ಟು ಮಂದಿ ತಮ್ಮ ಪ್ರವಾಸದ ಅನುಭವವನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ