ಆ್ಯಪ್ನಗರ

ಹಾಯಾಗಿ ಕುಳಿತಿರುವೆ ನಾನು. .

ಲೇಖಕಿ, ಪ್ರಾಧ್ಯಾಪಕಿಯೂ ಆಗಿರುವ ಡಾ.ಸಹನಾ ಪ್ರಸಾದ್ ಅವರು ನೂರಾರು ಲೇಖನ, ಕಥೆ, ಕವನಗಳನ್ನು ಬರೆದಿದ್ದಾರೆ. ಕಾದಂಬರಿಗಾರ್ತಿಯೂ ಆಗಿರುವ ಇವರು 'ಇಂದೇಕೆ ಅವಳ ನೆನಪು' ಎಂಬ ಧಾರಾವಾಹಿಯನ್ನು ಬರೆದಿದ್ದರು. ಇದು ವಿಜಯ ಕರ್ನಾಟಕದಲ್ಲಿ 50 ಕಂತುಗಳನ್ನು ಪೂರೈಸಿ ಇತ್ತೀಚೆಗಷ್ಟೇ ಮುಕ್ತಾಯ ಕಂಡಿದೆ. ಇದೀಗ ‘ಮತ್ತೆ ಬಂದಳೇಕೆ ಅವಳು..?’ ಎಂಬ ಧಾರಾವಾಹಿಯನ್ನು ಬರೆಯುತ್ತಿದ್ದು, ಈಗಾಗಲೇ ಇದು 16 ಕಂತುಗಳನ್ನು ಪೂರೈಸಿದೆ. ಪ್ರತಿಭಾನ್ವಿತ ಕವಿಯಿತ್ರಿಯೂ ಆಗಿರುವರು. ಡಾ.ಸಹನಾ ಪ್ರಸಾದ್ ಅವರು ಇದೀಗ ಹಾಯಾಗಿ ಕುಳಿತಿರುವೆ ನಾನು.. ಎಂಬ ಲೇಖನ ಬರೆದಿದ್ದಾರೆ.

Vijaya Karnataka Web 29 Nov 2022, 2:27 pm
ಮಕ್ಕಳೆಲ್ಲಾ ದೊಡ್ಡವರಾಗಿ ಅಮೆರಿಕಾಗೆ ಹಾರಿದಾಗ, ಉಳಿದಿದ್ದು ನಾವಿಬ್ಬರು , ಗಂಡ ಹೆಂಡತಿ. ತೀರಾ ವಯಸ್ಸಾಗದೇ ಇದ್ದರೂ ಮೊದಲಿನ ತರಹ ಲವಲವಿಕೆ ಇಲ್ಲ. ಇಬ್ಬರೂ ಕೆಲಸಕ್ಕೆ ಹೋಗುತ್ತಾ ಇದ್ದಿದ್ದರಿಂದ ಮನೆಯಲ್ಲಿ ಇರಲು ಆಸೆ. ಇಷ್ಟು ದೊಡ್ಡ ಮನೆ ಸಾಲ ಮಾಡಿ ಕಟ್ಟಿಸಿ, ಕಷ್ಟ ಪಟ್ಟು ಸಾಲಗಳನ್ನು ತೀರಿಸಲು ಬೆಳಗ್ಗೆ ಓಡುತ್ತಾ ಇದ್ದ ಒತ್ತಡದ ಛಾಯೆ ಇನ್ನೂ ಮನದಲ್ಲಿ ಇದೆ.
Vijaya Karnataka Web cartoon


ಆದುದರಿಂದ ಈಗ ಆದಷ್ಟು ಮನೆಯಲ್ಲಿ ಇರುವ ಬಯಕೆ. ಬಾಲ್ಕನಿಯಲ್ಲಿ ಕೆಲವು ಹೂ ಕುಂಡಗಳನ್ನು ಇಡುವ ಆಸೆ, ಮನೆಯಲ್ಲಿ ಪ್ರತಿಯೊಂದು ವಸ್ತುವೂ ಅದರದರ ಜಾಗದಲ್ಲಿ ಇಟ್ಟು, ಮನೆಯನ್ನು ನೀಟಾಗಿ ಇಟ್ಟುಕೊಳ್ಳುವ ಇಚ್ಛೆ.

ಬೆಳಗ್ಗೆ ಎದ್ದು ನಿಧಾನವಾಗಿ ಪೇಪರ್ ಓದುತ್ತಾ ಚಹಾ ಹೀರುವುದು, ಅಕ್ಕಪಕ್ಕದ ಮನೆಯ ಹೆಂಗಸರು ಲಗುಬಗೆಯಿಂದ ಕೆಲಸಕ್ಕೆ ಓಡುವುದನ್ನು ನೋಡಿ, ಅಯ್ಯೋ ಪಾಪ ಎನ್ನುವುದು , ಕೆಲವೇ ವರುಷಗಳ ಹಿಂದೆ ನನ್ನ ಪಾಡು ಹೀಗಿತ್ತಲ್ಲಾ ಎಂದು ಕಾಣದ ದೈವಕ್ಕೆ ಕೈ ಮುಗಿಯುವುದು ಇವೆಲ್ಲವೂ ನಡೆದು, ತಿಂಡಿ ತಿಂದ ಮೇಲೆ ಹಾಯಾಗಿ ಕುಳಿತಾಗ ಸಮಸ್ಯೆ ಶುರುವಾಗುತ್ತದೆ.

ಹೆಂಡತಿ ಸಣ್ಣಗೆ ಇದ್ದರೆ….
ಒಂಚೂರು ಸಾಮಾಜಿಕ ಜಾಲತಾಣದಲ್ಲಿ ಇಣುಕಿ ನೋಡೋಣ ಅಂತಾ ತೆಗೆದರೆ ಅಲ್ಲಿಗೆ ಮನಸ್ಸಿನ ಶಾಂತಿ ಹಾಳು. ಯಾಕೆ ಇಷ್ಟು ರೊಚ್ಚು, ದ್ವೇಷ, ಕೋಪ ಬಹುತೇಕ ಜನರ ಮನಸ್ಸಿನಲ್ಲಿ? ಇಷ್ಟು ದ್ವೇಷ ಖಂಡಿತ ವೃತ್ತಿ ಅಥವಾ ವೈಯಕ್ತಿಕ ಬದುಕಿನಲ್ಲಿ ಕಂಡಿಲ್ಲ. ಧರ್ಮ, ಜಾತಿ, ಮತ, ಲಿಂಗ ಅಷ್ಟೇಕೆ ರಾಷ್ಟ್ರೀಯತೆ ಕೂಡ ಬೇರೆ ಇರುವ ಜನರ ಜತೆ ಕೆಲಸ, ವಾದ ವಿವಾದಗಳು, ಸಣ್ಣ ಪ್ರಮಾಣದ ಜಗಳ, ಮುನಿಸು ಎಲ್ಲವನ್ನೂ ಕಂಡಿದ್ದೇನೆ. ಆದರೆ ಈ ರೀತಿಯಲ್ಲಿ ಪ್ರತಿಕ್ರಿಯೆ ತೋರುವುದು ಅಲ್ಲ.

ಯಾವುದೋ ಸಿನಿಮಾ ತಾರೆ, ಧಾರ್ಮಿಕ ಮುಖ್ಯಸ್ಥರು, ವಾಣಿಜ್ಯೋದ್ಯಮಿ ಹೀಗೆ ನಮ್ಮಿಂದ ದೂರ ಇರುವವರ ಹೇಳಿಕೆ, ವರ್ತನೆಯನ್ನು ಸ್ಟೇಟಸ್ ರೂಪದಲ್ಲಿ ಹಾಕಿ ಕಿತ್ತಾಡುವ ಪರಿ ಬಹಳ ಹಿಂಸೆ.

ಧಾರವಾಹಿ: ಬಂದಳೇಕೆ ಮತ್ತೆ ಇವಳು- ಭಾಗ ೧೬, "ಮತ್ತೊಂದು ಬಿರುಗಾಳಿ"
ನನಗೆ ಮೊದಲಿನಿಂದ ಜಗಳ, ಮುನಿಸು, ವಿರಸ ಆಗೋಲ್ಲ. ಟೀವಿಯಲ್ಲಿ ಬರುತ್ತಿರುವ ಪ್ಯಾನೆಲ್ ಚರ್ಚೆಗಳು ನನಗೆ ಆಗಿಬರೋದೇ ಇಲ್ಲ. ಪಕ್ಕದ ಮನೆಯವರು ಜಗಳವಾಡುತ್ತಿದ್ದರೆ ನನಗೆ ಒಂಥರಾ ಸಂಕಟ. ಯಾರ ಜತೆ ವಿರಸವಾದರೂ , ಅವರಿಗಿಂತ ಹೆಚ್ಚು ನಾನೇ ನೊಂದುಕೊಳ್ಳುವುದು. ಅಷ್ಟೇಕೆ ನನ್ನ ವಿದ್ಯಾರ್ಥಿಗಳಿಗೆ ಬೈದರೆ ಅವರು ನಕ್ಕು ಸುಮ್ಮನೆ ಆಗುತ್ತಾರೆ. ನಾನು ಕುದ್ದು, ಅಯ್ಯೋ, ಹೀಗಂದೆನಲ್ಲ ಎಂದು ಕೊರಗಿ, ಸಾರಿ ಕೇಳುವುದು ಬಾಕಿ!

ನೀ ಯಾವುದಾದರೂ ಆಶ್ರಮ ಸೇರಿಕೋ, ಪ್ರಪಂಚದ ಗೊಡವೆ ಇಲ್ಲದೆ ಹಾಯಾಗಿ ಇರು, ಬರೀ ಒಳ್ಳೆಯದೇ ಯೋಚಿಸುತ್ತಾ, ಮಾಡುತ್ತಾ, ಸಿದ್ಧಾರ್ಥನ ರೀತಿ ಇದ್ದು ಬಿಡು ಎಂದು ಇವರು ರೇಗಿಸುತ್ತ ಇರುತ್ತಾರೆ. ಹೌದಲ್ಲ, ಇಷ್ಟು ಸಮಯ ಇರದೇ ಇದ್ದ, ದೇವರ ದಯೆಯಿಂದ ನಮಗೆ ಇರದ ವಿರಸ ಈಗೇಕೆ? ಒಂದೆರಡು ಬಾರಿ, ನಾನು ಹಾಕಿದ ನಿಲುಮೆಯಿಂದ , ಹಲವಾರು ನನ್ನನ್ನು ಗೆಳೆಯರ ಲಿಸ್ಟಿನಿಂದ ತೆಗೆದು ಹಾಕಿದ್ದೂ ಉಂಟು.

ಆಗೆಲ್ಲಾ ಕೊರಗಿ " ಅಯ್ಯೋ, ಅವರನ್ನೇನು ಜತೆಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾ , ಇಷ್ಟೊಂದು ಬೇಸರ ಮಾಡಿಕೊಳ್ಳುವುದಕ್ಕೆ" ಎಂದು ಬೈಸಿಕೊಂಡು ಈಗ ನಾ ಬರೆದ ಲೇಖನ ಇತ್ಯಾದಿ ಬಗ್ಗೆ ಹಾಕಲು ಶುರು ಮಾಡಿದೆ. ಆದರೆ ಅದಕ್ಕೆ ಬರುವ ಕಾಮೆಂಟು, ಲೈಕುಗಳು ನೆಮ್ಮದಿ ಕದಡಿವೆ ಕೂಡ. ಆದುದರಿಂದ , ಸಧ್ಯಕ್ಕೆ ನನ್ನ ಮನಸ್ಸಿನ ನೆಮ್ಮದಿಗಾಗಿ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುವುದು ಕಡಿಮೆ ಮಾಡಿ, ಹಾಯಾಗಿ ಒಳ್ಳೊಳ್ಳೆ ಹಾಡುಗಳ ವಿಡಿಯೋ ನೋಡುತ್ತಾ ಕಾಲ ಕಳೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ