ಆ್ಯಪ್ನಗರ

ವರ್ಣಮಯ ಬದುಕಿಗೆ ವಿವಿಧ ಆಸಕ್ತಿ

ಸ್ವಲ್ಪ ಬಿಡುವಾದರೂ ಪುಸ್ತಕ ಹಿಡಿದುಕೊಂಡು ಕೂರುವಷ್ಟು ಪುಸ್ತಕಗಳೆಂದರೆ ನನಗೆ ಇಷ್ಟ. ಇಂಗ್ಲಿಷ್‌ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿರುತ್ತೇನೆ. ಫಿಕ್ಷನ್‌ ಹಾಗೂ ನಾನ್‌ ಫಿಕ್ಷನ್‌ ಕೃತಿಗಳೆರಡೂ ನನಗಿಷ್ಟ

Vijaya Karnataka 16 Dec 2018, 9:46 am
ನನಗೆ ಬಿಡುವಿನ ವೇಳೆಯೆಂದು ಸಿಗುವುದೇ ಬಲು ಕಡಿಮೆ. ಒಂದು ವೇಳೆ ಹಾಗೆ ಸಿಕ್ಕಲ್ಲಿ ನನ್ನ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಓದುವುದು, ವಾಕಿಂಗ್‌ ಮತ್ತು ಸೈಕ್ಲಿಂಗ್‌ ನನಗಿಷ್ಟದ ಬಿಡುವಿನ ಸಮಯದ ಚಟುವಟಿಕೆಗಳು.
Vijaya Karnataka Web randeep


ಸ್ವಲ್ಪ ಬಿಡುವಾದರೂ ಪುಸ್ತಕ ಹಿಡಿದುಕೊಂಡು ಕೂರುವಷ್ಟು ಪುಸ್ತಕಗಳೆಂದರೆ ನನಗೆ ಇಷ್ಟ. ಇಂಗ್ಲಿಷ್‌ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿರುತ್ತೇನೆ. ಫಿಕ್ಷನ್‌ ಹಾಗೂ ನಾನ್‌ ಫಿಕ್ಷನ್‌ ಕೃತಿಗಳೆರಡೂ ನನಗಿಷ್ಟ. ಫಿಕ್ಷನ್‌ ವಿಭಾಗದಲ್ಲಿ ಅಗಾಥಾ ಕ್ರಿಸ್ಟಿ ಅವರ ಕೃತಿಗಳನ್ನು ಓದುತ್ತಿರುತ್ತೇನೆ. ನಾನ್‌ ಫಿಕ್ಷನ್‌ ವಿಭಾಗದಲ್ಲಿ ಭಾರತೀಯ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳು ನನ್ನ ಓದಿನ ಆಯ್ಕೆಯಾಗಿರುತ್ತವೆ. ಖಲೀದ್‌ ಹೊಸೈನಿ ಬರೆದ 'ಆ್ಯಂಡ್‌ ದ ಮೌಂಟನ್ಸ್‌ ಇಖೋಡ್‌' ಕೃತಿಯನ್ನು ಈಚೆಗಷ್ಟೇ ಓದಿ ಮುಗಿಸಿದೆ. ಕೃತಿಗಳು ಓದಿದ ಬಳಿಕವೂ ನಮ್ಮ ಮನಸ್ಸಿನಲ್ಲಿ ವಿವಿಧ ತರಂಗಗಳನ್ನೆಬ್ಬಿಸುವಷ್ಟು ಪರಿಣಾಮಕಾರಿಯಾಗಿರುತ್ತವೆ, ಅಂತಹ ಪ್ರಭಾವಶಾಲಿ ಕೃತಿಗಳು ನನಗಿಷ್ಟವಾಗುತ್ತವೆ.

ಇವಲ್ಲದೆ ನಾನು ಪ್ರವಾಸ ಹೋಗುವುದನ್ನು ಬಹುವಾಗಿ ಇಷ್ಟಪಡುತ್ತೇನೆ. ನನ್ನ ಪಾಲಿಗೆ ಅದು ಬಲುದೊಡ್ಡ ಸ್ಟ್ರೆಸ್‌ ಬಸ್ಟರ್‌. ಈಗಾಗಲೇ ನಾನು ಸಾಕಷ್ಟು ಸ್ಥಳಗಳನ್ನು ನೋಡಿದ್ದೇನೆ. ಭಾರತದಲ್ಲೇ ಸುಮಾರು 15 ರಾಜ್ಯಗಳಲ್ಲಿ ಪ್ರಯಾಣ ಮಾಡಿದ್ದೇನೆ. ಐಎಎಸ್‌ ತರಬೇತಿಯಿಂದಾದ ಲಾಭಗಳಲ್ಲಿ ಇದೂ ಒಂದು. ಯೂರೋಪ್‌ ಹಾಗೂ ಆಗ್ನೇಯ ಏಷ್ಯಾದಲ್ಲಿಯೂ ಕೆಲವು ದೇಶಗಳನ್ನು ನೋಡಿದ್ದೇನೆ.

ಹೀಗೆ ವಿವಿಧ ದೇಶ, ರಾಜ್ಯಗಳಿಗೆ ಹೋದಾಗ ಅಲ್ಲಿನ ವಿಶಿಷ್ಟವಾದ ಸಂಸ್ಕೃತಿ, ಕಲೆಯನ್ನು ನೋಡಲು ಬಯಸುತ್ತೇನೆ. ಈಚೆಗೆ ನಾನು ಥೈಲ್ಯಾಂಡ್‌ಗೆ ಹೋದಾಗ ಬುದ್ಧ ಪ್ರತಿಮೆಗಳನ್ನು ವೀಕ್ಷಿಸಲೆಂದೇ ಆಯುತಾಯಕ್ಕೆ ಹೋದೆ. ಅವು ನನ್ನನ್ನು ಮೂಕವಿಸ್ಮಿತನನ್ನಾಗಿಸಿದವು. ವಿವಿಧ ದೇಶಗಳ ಅನನ್ಯ ಆಹಾರ ಪದ್ಧತಿಯನ್ನೂ ಪರಿಚಯಿಸಿಕೊಳ್ಳುವುದೆಂದರೆ ನನಗಿಷ್ಟ. ಹೀಗೆ ನನ್ನ ಪ್ರವಾಸದ ಬಹುಮುಖ ಪ್ರಯೋಜನ ನನಗಾಗುವಂತೆ ನೋಡಿಕೊಳ್ಳುತ್ತೇನೆ.

ಸಂಗೀತವೆಂದರೂ ನನಗೆ ಅಚ್ಚುಮೆಚ್ಚು. ರಾಕ್‌ ಮ್ಯೂಸಿಕ್‌ ಮತ್ತು ಭಾರತೀಯವಾದ ಶಾಸ್ತ್ರೀಯ ಸಂಗೀತವೂ ನನಗಿಷ್ಟ. ಪ್ರಯಾಣ ಮಾಡುವಾಗ ಸಂಗೀತ ಕೇಳುತ್ತಿರುತ್ತೇನೆ. ಈ ಎಲ್ಲ ಪ್ಯಾಷನ್‌ಗಳೂ ನನ್ನನ್ನು ಕ್ರಿಯಾಶೀಲನನ್ನಾಗಿಸಿವೆ-
ರಂದೀಪ್‌ ಡಿ, ಹೆಚ್ಚುವರಿ ಆಯುಕ್ತರು, ಬಿಬಿಎಂಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ