Please enable javascript.ನಾನು ಓದಿದ ಕವಿತೆ - ನಾನು ಓದಿದ ಕವಿತೆ - Vijay Karnataka

ನಾನು ಓದಿದ ಕವಿತೆ

Vijaya Karnataka Web 14 Apr 2013, 4:30 am
Subscribe

ಒಂದು ಗಂಟೆ ಸರಿದಿದೆ, ನೀನು ಮಲಗಿರಬೇಕು. ಇರುಳ ಆಕಾಶಗಂಗೆ ಅನಾಯಾಸ ಹರಿಸಿದೆ, ಬೆಳ್ಳಿತೊರೆ. ಮಿಂಚುತಂತಿಗಳಿಂದ ನಾನು ನಿನ್ನನೆಚ್ಚರಿಸುವುದಿಲ್ಲ, ಕಾಡುವುದಿಲ್ಲ, ಕನಸೊಡೆಯುವುದಿಲ್ಲ - ಮಾತು ಕೊಡುತ್ತೇನೆ. ಆ ಕಾಲ ಮುಗಿದಿದೆ, ಅಷ್ಟೆ.

ನಾನು ಓದಿದ ಕವಿತೆ
* ಸುಗತ

ಒಂದು ಗಂಟೆ ಸರಿದಿದೆ
ಒಂದು ಗಂಟೆ ಸರಿದಿದೆ, ನೀನು ಮಲಗಿರಬೇಕು.
ಇರುಳ ಆಕಾಶಗಂಗೆ ಅನಾಯಾಸ ಹರಿಸಿದೆ, ಬೆಳ್ಳಿತೊರೆ.
ಮಿಂಚುತಂತಿಗಳಿಂದ ನಾನು ನಿನ್ನನೆಚ್ಚರಿಸುವುದಿಲ್ಲ,
ಕಾಡುವುದಿಲ್ಲ, ಕನಸೊಡೆಯುವುದಿಲ್ಲ - ಮಾತು ಕೊಡುತ್ತೇನೆ.
ಆ ಕಾಲ ಮುಗಿದಿದೆ, ಅಷ್ಟೆ.
ಪ್ರೀತಿ ಹರಿಗೋಲು ಬದುಕ ಬಂಡೆಗೆ ಬಡಿದು ನುಚ್ಚು ನೂರಾಗಿದೆ.
ನಮ್ಮೆಲ್ಲ ಲೆಕ್ಕ ಚುಕ್ತಾ.
ಹಿಂದೆ ಆತುರದಲ್ಲಿ ಚುಚ್ಚಿ ಆಡಿದ್ದನ್ನ, ಮಾಡಿದ್ದನ್ನ ಪಟ್ಟಿ ಮಾಡಿ ಸಾಧಿಸಬೇಕೆ?
ಜಗತ್ತು ಎಂಥ ನಿಶ್ಚಲ ನಿದ್ರೆಯಲ್ಲಿದೆ!
ನೋಡು, ಆಕಾಶ ರಾತ್ರಿಯಿಂದ ನಕ್ಷತ್ರ ಕಾಣಿಕೆಯ ಕೇಳಿಕೇಳಿ ಪಡೆಯುತ್ತಿದೆ.
ಇಂಥ ಹೊತ್ತಿನಲ್ಲೇ ಮೈದುಂಬಿ
ಕಾಲ, ಚರಿತ್ರೆ, ಸಮಸ್ತ ಸಷ್ಟಿಯನ್ನುದ್ದೇಶಿಸುವ ಬಯಕೆ ಬರುವುದು...

* ರಷ್ಯನ್ ಮೂಲ: ವ್ಲದಿಮೀರ್ ಮಾಯಾಕೊವೆಸ್ಕಿ

* ರಷ್ಯಾದ ಮಹಾಕವಿ ವ್ಲದಿಮೀರ್ ಮಾಯಾಕೊವೆಸ್ಕಿ 1930ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತಾಗ ಈ ಅಪೂರ್ಣ ಕವನ
ಅವನ ಜೇಬಿನಲ್ಲಿತ್ತು. ಇದು ಅವನ ಕೊನೆಯ ಕವನ ಇರಬಹುದು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ