ಆ್ಯಪ್ನಗರ

ಆಲಿಯಾ ಭಟ್‌ ಡೇಟಿಂಗ್‌ ಟಿಪ್ಸ್

ವರ್ಚುಯಲ್‌ ಜಗತ್ತಿನಲ್ಲಾದ ಪರಿಚಯ ನಿಜ ಬದುಕಿನಲ್ಲಿ ಪ್ರೀತಿಯಾಗಿ ಅರಳಬೇಕು. ಆದರೆ ಆದು ಸುಲಭವಲ್ಲ. ಅದಕ್ಕೊಂದಿಷ್ಟು ವಿಧಾನಗಳಿವೆ.

Vijaya Karnataka Web 10 May 2017, 11:01 am

ಲವ್‌ ಗುರು

ವರ್ಚುಯಲ್‌ ಜಗತ್ತಿನಲ್ಲಾದ ಪರಿಚಯ ನಿಜ ಬದುಕಿನಲ್ಲಿ ಪ್ರೀತಿಯಾಗಿ ಅರಳಬೇಕು. ಆದರೆ ಆದು ಸುಲಭವಲ್ಲ. ಅದಕ್ಕೊಂದಿಷ್ಟು ವಿಧಾನಗಳಿವೆ. ಭಾವನೆಗಳು ಅವುಗಳ ಜತೆ ಸೇರಿಕೊಂಡಿರುತ್ತವೆ. ಕೆಲವು ಸಂಗತಿಗಳು ಭಾವನೆಗಳನ್ನು ಉದ್ದೀಪನಗೊಳಿಸುವ ಕೆಲಸ ಮಾಡುತ್ತವೆ. ಹಾಗೆ ಭೇಟಿಗಾಗಿ ಒಂದಿಷ್ಟು ಸಂದರ್ಭಗಳು ಸೃಷ್ಟಿಯಾಗಬೇಕು. ಅದಕ್ಕಾಗಿ ಏನೆಲ್ಲ ಮಾಡಬೇಕು ಎಂಬುದಕ್ಕೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಡೇಟಿಂಗ್‌ ಟಿಪ್ಸ್ ನೀಡಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಎದುರಾದವರು ಮೊದಲ ಭೇಟಿಗೆ ಅವಕಾಶ ಕಲ್ಪಿಸುವುದೇ ಒಂದು ಸುಂದರ ಕಾಫಿ ಅಥವಾ ಜ್ಯೂಸ್‌ ಆಗಿರಬಹುದು. ಅಂದರೆ ಮೊದಲ ಭೇಟಿಗೆ ಅವಕಾಶ ಕೊಡುವುದು ಹೋಟೆಲ್‌ ಇರಬಹುದು. ಇನ್ನೂ ಕೆಲವರಿಗೆ ಪಾರ್ಟಿಯೇ ಇರಬಹುದು. ಅದು ಪಾರ್ಟಿಯೇ ಅಂತಾದರೆ ಆಯೋಜಿಸುವುದರಿಂದ ಹಿಡಿದು ಮುಗಿಯವರೆಗೂ ನೀವು ಒಂದಿಷ್ಟು ಯೋಜನೆ ರೂಪಿಸಿಕೊಳ್ಳಬೇಕು.

Vijaya Karnataka Web dating tips from alia bhat
ಆಲಿಯಾ ಭಟ್‌ ಡೇಟಿಂಗ್‌ ಟಿಪ್ಸ್


ಪಾರ್ಟಿಯ ವಾತಾವರಣ ಭಾವನೆಗಳನ್ನು ಕಲಕುತ್ತದೆ. ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿ. ಒಬ್ಬರನ್ನೊಬ್ಬರು ಅರಿಯಲು ವೇದಿಕೆ. ಅಂಥದ್ದೊಂದು ಪಾರ್ಟಿಯಲ್ಲಿ ನೀವು ನಿಮ್ಮ ಸಂಬಂಧ ರೂಪಿಸಿಕೊಳ್ಳಬೇಕು ಅಂದರೆ ಒಂದಿಷ್ಟು ಸಿದ್ಧತೆ ಬೇಕು. ಪಾರ್ಟಿ ಆಯೋಜಿಸುವುದು. ಅದು ಪರಸ್ಪರ ಬೆರೆಯಲು, ಮಾತನಾಡಲು ಸಹಕಾರಿ.

ನಿಮ್ಮ ಕಾಮನ್‌ ಫ್ರೆಂಡ್ಸ್‌ ಜತೆ ಊಟ ಮಾಡಿ. ಅತ್ಯುತ್ತಮ ಆಹಾರ, ವೈನ್‌ ಹಾಗೂ ಸಂಗೀತ ಒಳಗೊಂಡ ಪಾರ್ಟಿ ನಿಮ್ಮನ್ನು ರಂಜಿಸುತ್ತದೆ. ಹೊಸ ಪರಿಚಯದಲ್ಲಿ ಒಬ್ಬರಿಗೊಬ್ಬರು ಆಸಕ್ತರಾದರೆ ನಿಮ್ಮ ಆಸಕ್ತಿ, ಅಭಿರುಚಿಗಳನ್ನು ವಿನಿಮಯ ಮಾಡಿಕೊಂಡು ಮುಂದುವರಿಯಿರಿ ಎಂದು ಸಲಹೆ ಕೊಟ್ಟಿರುವ ಅವರು ಇನ್ನಷ್ಟು ಸಲಹೆಗಳನ್ನೂ ಕೊಟ್ಟಿದ್ದಾರೆ ಲವ್‌ ಗುರು ಆಲಿಯಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ