ಆ್ಯಪ್ನಗರ

ಹುಬ್ಬಳ್ಳಿ ಹುಡುಗಿಯ ಪರ್ವತಾರೋಹಣ

ಹುಬ್ಬಳ್ಳಿಯ ಹುಡುಗಿಯೊಬ್ಬಳು ಓಷಿನಿಯಾ ಆಸ್ಪ್ರೇಲಿಯಾದ ಕಾರ್ಟೆನ್ಜ್‌ ಶಿಖರವನ್ನು ಯಶಸ್ವಿಯಾಗಿ ಏರಿ ರಾಷ್ಟ್ರ ಧ್ವಜ ಹಾರಿಸಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ವಿಕ ಸುದ್ದಿಲೋಕ 22 Jul 2017, 12:27 pm

ಹುಬ್ಬಳ್ಳಿಯ ಹುಡುಗಿಯೊಬ್ಬಳು ಒಷಿಯಾನಾ ಆಸ್ಪ್ರೇಲಿಯಾದ ಕಾರ್ಟೆನ್ಜ್‌ ಶಿಖರವನ್ನು ಹತ್ತಿ ದೇಶದ ಪತಾಕೆ ಹಾರಿಸಿದ ಕೀರ್ತಿಗೆ ಪಾತ್ರಳಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

-ಮಂಜುನಾಥ್‌ ಸೋಮರೆಡ್ಡಿ

ಹುಬ್ಬಳ್ಳಿಯ ಹುಡುಗಿಯೊಬ್ಬಳು ಓಷಿನಿಯಾ ಆಸ್ಪ್ರೇಲಿಯಾದ ಕಾರ್ಟೆನ್ಜ್‌ ಶಿಖರವನ್ನು ಯಶಸ್ವಿಯಾಗಿ ಏರಿ ರಾಷ್ಟ್ರ ಧ್ವಜ ಹಾರಿಸಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಹೌದು. ಹುಬ್ಬಳ್ಳಿಯ ಟೆಕ್ಕಿ ನಂದಿತಾ, ಓಷಿಯಾನಾ ಆಸ್ಪ್ರೇಲಿಯಾದಲ್ಲಿ ನಡೆದ ಹಾಗೂ ಅಸೋಸಿಯೇಷನ್‌ ಆಫ್‌ ಸೌತ್‌ ಈಸ್ಟ್‌ ಏಷಿಯನ್‌ ನೇಷನ್ಸ್‌ ಜಂಟಿ ಆಶ್ರಯದಲ್ಲಿ ನಡೆದ ಕಾರ್ಟೆನ್ಜ್‌ ಪಿರಮಿಡ್‌ ಮೌಂಟೇನ್‌(4884 ಮೀಟರ್ಸ್‌) ಶಿಖರ ಯಾತ್ರೆಯಲ್ಲಿ ಪಾಲ್ಗೊಂಡು ನಮ್ಮ ರಾಷ್ಟ್ರದ ಧ್ವಜವನ್ನು ತುತ್ತ ತುದಿಯಲ್ಲಿ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೆ, ನಂದಿತಾ ಕರ್ನಾಟಕದಿಂದ ಭಾಗವಹಿಸಿ ಪರ್ವತ ಆರೋಹಣ ಮಾಡಿ ಈ ಶಿಖರವನ್ನು ಏರಿದ ಮೊತ್ತ ಮೊದಲ ಕನ್ನಡತಿ ಎನ್ನಬಹುದು. ಮೇ 27 ರಂದು ನಮ್ಮ ರಾಷ್ಟ್ರದಿಂದ ಜರ್ನಿ ಆರಂಭಿಸಿದ ನಂದಿತಾ ಎಎಸ್‌ಇಎಎನ್‌ ಜಕಾರ್ತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು 12 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Vijaya Karnataka Web lavalavk/women/mountaineering
ಹುಬ್ಬಳ್ಳಿ ಹುಡುಗಿಯ ಪರ್ವತಾರೋಹಣ


' ಈ ಶಿಖರ ಆರೋಹಣ 12 ಸೌತ್‌ ಈಸ್ಟ್‌ ಏಷಿಯನ್‌ ನೇಷನ್‌ಗಳ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಭಾರತದ ಹಾಗೂ ಏಷಿಯಾನ್‌ ಧ್ವಜಗಳನ್ನು ಹಾರಿಸಲು ಪಡೆದೆವು. ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಕೂಡ ಮಾಡಿದ್ದು ಸಂತಸ ತಂದಿತು' ಎಂದಿದ್ದಾರೆ ನಂದಿತಾ.

'ನಬೈರ್‌ ಪ್ರಾಂತ್ಯದ ಪಪೌವಾ ದ್ವೀಪದಿಂದ ಆರೋಹಣ ಕಾರ್ಯಕ್ರಮ ಆರಂಭವಾಯಿತು. ಪ್ರಪಂಚದ 7 ಶಿಖರಗಳಲ್ಲಿ ಒಂದಾದ ಕಾರ್ಟೆನ್ಜ್‌ ಶಿಖರ ಟೆಕ್ನಿಕಲ್‌ ಕ್ಲೈಂಬ್‌ ಎಂದು ಹೆಸರು ಪಡೆದಿದೆ. ಮೊದಲ ಚಾಲೆಂಜ್‌ನಲ್ಲೆ, ಪರ್ವತ ಆರೋಹಣ ಆರಂಭವಾಗುವ ಮುನ್ನವೇ ದಟ್ಟ ವಾದ ಟ್ರಾಪಿಕಲ್‌ ಅರಣ್ಯದಲ್ಲಿ ನಡೆದು ಹೋದೆವು. ಇಲ್ಲಿ ಕಾಡುಪ್ರಾಣಿಗಳ ಭಯದೊಂದಿಗೆ ಉಗ್ರ ಕಾಡುಜನರು ಎದುರಾಗುವ ಆತಂಕವೂ ಇತ್ತು. ಅಷ್ಟು ಮಾತ್ರವಲ್ಲ, ಭಾರಿ ಮಳೆ, ಜತೆಗೆ ಆಗಾಗ್ಗೆ ಹವಮಾನ -5 ನಿಂದ -10 ಕ್ಕೆ ಏರುಪೇರಾಗುತ್ತಿತ್ತು. ಇಷ್ಟೆಲ್ಲಾ ಪಡಿಪಾಟಲು ಪಟ್ಟನಂತರ ದಾಟಿದ ನಂತರ ನಮ್ಮ ಪರ್ವತಾರೋಹಣ ಆರಂಭವಾಯಿತು. ಇಲ್ಲಿನ ರೋಪ್‌ ವಾಕ್‌ ಮೂಲಕ ಏರಲಾಗುವ ಇದಕ್ಕೆ ಮಂಕಿ ಬ್ರಿಡ್ಜ್‌ ಎನ್ನಲಾಗುತ್ತದೆ. ಇನ್ನು ಇಡೀ ಟೀಮ್‌ ಜೂನ್‌ 13 ರಂದು 3 ಗಂಟೆಗೆ ಗುರಿಯನ್ನು ತಲುಪಿತು. ನಾನು ಸೇರಿದಂತೆ ಟೀಮ್‌ನವರಿಬ್ಬರೂ ಭಾರತದವರು. ಜತೆಗೆ ಇಂಡೋನೇಷ್ಯಾದ ಗೈಡ್‌ ಕೂಡ ಇದ್ದರು. ಯಶಸ್ವಿಯಾಗಿ ಏರಿದ್ದಕ್ಕೆ ನಿಜಕ್ಕೂ ನನಗೆ ಹೆಮ್ಮೆ ಏನಿಸಿತ್ತು' ಎನ್ನುತ್ತಾರೆ ನಂದಿತಾ.

ಹವಾಮಾನ ವೈಪರಿತ್ಯ ಸೇರಿದಂತೆ ನಾನಾ ಪರಿಪಾಟಲನ್ನು ಎದುರಿಸಿ ಕೊನೆಗೂ ಶಿಖರದ ಮೇಲೆ ನಮ್ಮ ರಾಷ್ಟ್ರದ ಧ್ವಜ ಹಾರಿಸಲು ಸಾಧ್ಯವಾಗಿದ್ದು, ನಿಜಕ್ಕೂ ಖುಷಿಯ ವಿಚಾರ ಎನ್ನುತ್ತಾರೆ ನಂದಿತಾ. ಒಟ್ನಲ್ಲಿ, ಎಲ್ಲಾ ಸಂಕಷ್ಟಗಳ ನಡುವೆ ನಮ್ಮ ಕನ್ನಡತಿ ನಂದಿತಾ ಈ ಸಾಧನೆ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಲ್ಲದೇ ಮತ್ತೇನು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ