ಆ್ಯಪ್ನಗರ

ಸುಗಂಧದದಲ್ಲಿ ಸಂಬಂಧದ ಸೆಳೆತ

ಸುಗಂಧ ಎನ್ನುವುದೇ ಒಂದು ರೀತಿಯ ಸೆಳೆತ. ಮನಸ್ಸನ್ನು ಮುದಗೊಳಿಸುವ ಶಕ್ತಿ ಅದಕ್ಕಿದೆ. ಎಲ್ಲಿಂದಲೋ ತೇಲಿ ಬಂದ ಪರಿಮಳ ಮೋಹಕ್ಕೆ ಒಳಗಾಗುವಂತೆ ಮಾಡುತ್ತದೆ.

Vijaya Karnataka Web 1 Aug 2016, 4:12 pm
-ನಂದಿನಿ.ಕೆ.ಎಲ್‌
Vijaya Karnataka Web lavalavk/women/perfume
ಸುಗಂಧದದಲ್ಲಿ ಸಂಬಂಧದ ಸೆಳೆತ


ಸುಗಂಧ ಎನ್ನುವುದೇ ಒಂದು ರೀತಿಯ ಸೆಳೆತ. ಮನಸ್ಸನ್ನು ಮುದಗೊಳಿಸುವ ಶಕ್ತಿ ಅದಕ್ಕಿದೆ. ಎಲ್ಲಿಂದಲೋ ತೇಲಿ ಬಂದ ಪರಿಮಳ ಮೋಹಕ್ಕೆ ಒಳಗಾಗುವಂತೆ ಮಾಡುತ್ತದೆ.

ಪುರುಷರ ಸುಗಂಧ ಭರಿತ ವಸ್ತುಗಳ ಸುವಾಸನೆಗೆ ಮಹಿಳೆಯರು ಬಹುಬೇಗ ಆಕರ್ಷಣೆಯಾಗುತ್ತಾರಂತೆ. ಹಾಗಂತ ಇತ್ತೀಚಿನ ಅಧ್ಯಯನ ಹೇಳಿದೆ.

ಹೌದು. ಆತನಲ್ಲಿನ ಸುಗಂಧಭರಿತ ಸುವಾಸನೆಯು ಆಕೆಯನ್ನು ಪ್ರಚೋದಿಸುತ್ತಾ ತನ್ನತ್ತ ಸೆಳೆಯುತ್ತದೆ. ಇಬ್ಬರನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ. ಮಿಲನದ ಸಮಯದಲ್ಲಿ ಮಹಿಳೆಯರನ್ನು ಆಕರ್ಷಿಸಲು ಸುಗಂಧಭರಿತ ವಸ್ತುಗಳು ಉಪಯೋಗಕಾರಿ. ವಿವಿಧ ರೀತಿಯ ಫ್ಲೇವರ್‌ನ ಸೆಂಟ್‌ಗಳಿವೆ ಮತ್ತು ಸುವಾಸನೆಭರಿತ ವಸ್ತುಗಳಿಗೇನು ಕಮ್ಮಿ. ಮುಂದೆ ಇಬ್ಬರು ಒಬ್ಬರಾಗುವಾಗುವಾಗ ಈ ಫ್ಲೇವರ್‌ನ ಸೆಂಟ್‌ಗಳನ್ನು ಬಳಸಿದರೆ ಬೆಸ್ಟ್‌.

ವೆನಿಲ್ಲಾ:

ಚೀನಿಯರು ಸಾಂಪ್ರದಾಯಿಕವಾಗಿ ಇಂದಿಗೂ ವೆನಿಲ್ಲಾ ಫ್ಲೇವರ್‌ನ ಸೆಂಟನ್ನು ಮೊದಲ ರಾತ್ರಿಯಲ್ಲಿ ಬಳಸುತ್ತಾರೆ. ಇದು ಮಹಿಳೆಯರನ್ನು ರೊಮ್ಯಾಂಟಿಕ್‌ ಮೂಡಿಗೆ ಕೊಂಡೊಯುತ್ತದೆಂದು ಎಂಬುದು ಅನಾದಿಕಾಲದಿಂದಲೇ ಪ್ರತೀತಿ ಇದೆ. ಮಲಗುವುದಕ್ಕೂ ಮುನ್ನ ಕೊಠಡಿಯಲ್ಲಿ ವೆನಿಲ್ಲಾ ಫ್ಲೇವರ್‌ನ ಮುಂಬತ್ತಿಯನ್ನು ಹಚ್ಚಿ ನೋಡಿ ಆ ರಾತ್ರಿ ಸುಖಕರವಾಗಿರುತ್ತದೆ. ಆ ಸುವಾಸನೆಯು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಹಾರ್ಮೋನ್‌ಗಳಿಗೆ ಪ್ರಚೋದನೆ ನೀಡುತ್ತದೆ. ಸುವಾಸನೆಯು ಮೂಗಿಗೆ ಕಂಪಿಸಿದರೆ ಸಾಕು ಮಹಿಳೆಯರಲ್ಲಿ ಸೆಕ್ಸ್‌ ಹಾರ್ಮೋನ್‌ ಜಾಸ್ತಿಯಾಗುವುದು.

ಜಾಸ್ಮಿನ್‌:

ಹಿಂದು ಸಂಪ್ರದಾಯದಲ್ಲಿ ಮೊದಲ ರಾತ್ರಿಗೆ ಮಲ್ಲಿಗೆಯ ಮಂಚ ಸಿದ್ಧ ಮಾಡುತ್ತಾರೆ. ಮೊದಲ ರಾತ್ರಿಗೆ ಮಲ್ಲಿಗೆ ಹೂ ಬೇಕೇಬೇಕು. ಅದರ ಕಂಪು ಮನಕ್ಕೆ ಇಂಪು. ಮಿದುಳಿನ ಒಂದು ಭಾಗದಲ್ಲಿ ಮಲ್ಲಿಗೆ ಹೂವಿನ ಸುವಾಸನೆಯು ಮಹಿಳೆಯರನ್ನು ಪುರುಷರತ್ತ ಮನವೊಲಿಸಲು ಸಹಕರಿಸುತ್ತದೆ. ಆಕೆಯಲ್ಲಿ ಭಾವ ತೀವ್ರತೆಯನ್ನು ಹೆಚ್ಚಿಸುವುದಲ್ಲದೇ ಚಂದ್ರ ಮಂಚಕೆ ಬಾ ಚಕೋರಿ ಎಂದು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಮಲ್ಲಿಗೆಯ ಹೂ ಇದ್ದರೆ ನಿಮ್ಮ ಸಂಗಾತಿಯನ್ನು ತಮ್ಮತ್ತ ಸೆಳೆಯಲು ಕಷ್ಟವಾಗದು. ಮಲ್ಲಿಗೆ ಹೂ ದೊರೆಯದಿದ್ದರೆ ಜಾಸ್ಮಿನ್‌ ಫ್ಲೇವರ್‌ನ ಸೆಂಟ್‌ ಬಳಸುವುದನ್ನು ಮರೆಯಬೇಡಿ.

ದಾಲ್ಚಿನ್ನಿ:

ಅಮೆರಿಕದ ಆಕ್ಸ್‌ವರ್ಡ್‌ನ ಸ್ಮೆಲ್‌ ಸಂಶೋಧನೆಯು ದಾಲ್ಚಿನ್ನಿಯ ಸುವಾಸನೆಯು ಬಹು ಬೇಗ ಮಹಿಳೆಯರನ್ನು ಪುರಿಷರತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ಮಾಡಿದೆ. ಒಂದು ಕಪ್‌ ಕಾಫಿ ಅಥವಾ ಟೀ ಕುಡಿಯುವಾಗ ಈ ಸುವಾಸನೆಯ ಭರಿತ ಸೆಂಟನ್ನು ಹಾಕಿದರೆ ಸಾಕು. ನಿಮ್ಮಾಕೆಯೊಂದಿಗೆ ಆ ದಿನ ಹ್ಯಾಪಿಯಾಗಿ ಕಳೆಯಬಹುದು. ನೀವು ಹತ್ತಿರವಾಗದಂತೆ ಆಕೆಯಲ್ಲಿ ರೊಮ್ಯಾ ಂಟಿಕ್‌ ಮೂಡ್‌. ಆಕೆಯಲ್ಲಿ ಯಾವುದೋ ಭಾವುಕತೆಯಲ್ಲಿ ನಿಮ್ಮಿಂದ ಬಿಡಿಸಲಾಗದಷ್ಟು ಬೆಸೆದುಕೊಳ್ಳುತ್ತದೆ.

ಲ್ಯಾವೆಂಡರ್‌:

ಲ್ಯಾವೆಂಡರ್‌ ಸುವಾಸನೆಯು ಮಹಿಳೆಯರಲ್ಲಿನ ಸೆಕ್ಸ್‌ ಹಾರ್ಮೋನ್‌ ಹೆಚ್ಚಿಸುವುದಲ್ಲದೇ, ಶಿಶ್ನದ ರಕ್ತದ ಹರಿವನ್ನು ಕೂಡ ಪ್ರಭಾವಗೊಳಿಸುದತ್ತದೆ ಎಂಬುದನ್ನು ಸಂಶೋಧನೆ ಮೂಲಕ ನರ ವೈಜ್ಞಾನಿಕ ಸ್ಮೆಲ್‌ ಸಂಶೋಧನೆ ಮತ್ತು ಚಿಕಿತ್ಸೆ ಸಂಸ್ಥೆಯ ನರ ವೈಜ್ಞಾನಿಕ ನಿರ್ದೇಶಕ ಡಾ.ಅಲನ್‌ ಆರ್‌. ಹಿರ್ಷ್‌ ಅವರು ಪತ್ತೆಹಚ್ಚಿದ್ದಾರೆ. ಸಾಕಷ್ಟು ಅಮೆರಿಕನ್ನರು ಮಿಲನದ ಸಮಯದಲ್ಲಿ ಲ್ಯಾವೆಂಡರ್‌ ಫ್ಲೇವರ್‌ನ ಸೆಂಟ್‌ಗಳನ್ನು ಬಳಸುತ್ತಾರೆ.

ಸ್ಯಾಂಡಲ್‌:

ಪುರಾತನ ಗ್ರಂಥಗಳ ಪ್ರಕಾರ ಶ್ರೀಗಂಧದ ಪರಿಮಳವು ಸೆಕ್ಸ್‌ನ ಎರಡನೇ ಚಕ್ರ. ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಶ್ರೀಗಂಧದ ಪರಿಮಳವು ಭಾವೋದ್ರೇಕವನ್ನು ಹೆಚ್ಚಿಸುವುದಲ್ಲದೇ, ಇಬ್ಬರ ಆಲಿಂಗನಕ್ಕೆ ಸಹಕಾರಿ. ಅನಾದಿ ಕಾಲದಿಂದಲೂ ಶ್ರೀಗಂಧವನ್ನು ಸುವಾಸನೆಗಾಗಿ ಮೊದಲ ರಾತ್ರಿಯಲ್ಲಿ ಬಳಸುತ್ತಿದ್ದರು.

ಸಂಗಾತಿಯೊಂದಿಗೆ ಮಲಗುವಾಗ ಕೊಠಡಿಯಲ್ಲಿ ಸುವಾಸನೆ ಭರಿತ ವಸ್ತುಗಳು ಇದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಕೋಣೆಯಲ್ಲಿಯೂ ಫ್ರೆಶ್‌ನೆಸ್‌ ಇರುತ್ತದೆ. ಸುಗಂಧದ ಪರಿಮಳವು ಮೂಗಿಗೆ ನಾಟಿದರೆ ಮನದಲ್ಲೇನೋ ಪುಳಕ, ಹೃದಯದಲ್ಲೇನೋ ಸೆಳೆತ. ಇಬ್ಬರಲ್ಲಿಯೂ ಮೋಹಕ, ಮಾದಕ ಸೆಳೆತ. ರಾತ್ರಿಯ ವೇಳೆ ಪುರುಷರು ಸೆಂಟ್‌ ಬಳಸಿದರೆ ಆ ದಿನ ಸುಖಕರವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ