ಆ್ಯಪ್ನಗರ

ವಿಂಟರ್‌ನಲ್ಲಿ ಅದಿತಿ ಇನ್‌ಡೋರ್‌ ವರ್ಕೌಟ್‌

ಆಯಾ ಸೀಸನ್‌ಗೆ ತಕ್ಕಂತೆ ನಾವು ಬದಲಾಗಬೇಕು.

Vijaya Karnataka 17 Dec 2018, 11:03 am
ಆಯಾ ಸೀಸನ್‌ಗೆ ತಕ್ಕಂತೆ ನಾವು ಬದಲಾಗಬೇಕು. ನಮ್ಮ ಐಡೆಂಟಿಟಿಗೆ ತಕ್ಕಂತೆ ನಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಬದಲಾಗುತ್ತವೆ ಎನ್ನುತ್ತಾರೆ ನಟಿ ಅದಿತಿ ರಾವ್‌ ಹೈದರಿ. ತಮ್ಮ ಡಯಟ್‌, ವರ್ಕೌಟ್‌ ಹಾಗೂ ಸೌಂದರ್ಯಗಳ ಬಗ್ಗೆ ಒಂದಿಷ್ಟು ಟಿಫ್ಸ್‌ ಹಂಚಿಕೊಂಡಿದ್ದಾರೆ.
Vijaya Karnataka Web Aditi-Rao-Hydari-2014-photoshoot-Wallpaper-HD


ನಾನು ನ್ಯಾಚುರಲ್‌ ಸೌಂದರ್ಯಕ್ಕೆ ಆದ್ಯತೆ ನೀಡುತ್ತೇನೆ. ಫ್ರೀ ಟೈಮ್‌ನಲ್ಲಿ ಬ್ಯೂಟಿ ಥೆರಪಿಗೆ ಸೈ ಎನ್ನುತ್ತೇನೆ. ಸ್ಪಾ ಹಾಗೂ ಬ್ಯೂಟಿ ಟ್ರೀಟ್‌ಮೆಂಟ್‌ಗಳನ್ನು ಪಡೆಯುತ್ತೇನೆ ಎಂದು ಹೇಳುವ ಅದಿತಿ ಸಿಂಪಲ್‌ ಕೇರ್‌ ತೆಗೆದುಕೊಳ್ಳುತ್ತಾರಂತೆ.

ಸಲಾಡ್‌ ಪ್ರಿಯೆ

ತರಕಾರಿ-ಹಣ್ಣುಗಳು ಡಯಟ್‌ಗೆ ಸಾಥ್‌ ನೀಡುತ್ತವೆ ಎನ್ನುವ ಅದಿತಿ, ತಮ್ಮ ಡಯಟ್‌ ಲಿಸ್ಟ್‌ನಲ್ಲಿ ಹಣ್ಣುಗಳನ್ನು ಸೇರಿಸಿಕೊಂಡಿದ್ದಾರೆ. ಪ್ರತಿಯೊಂದು ಆರೋಗ್ಯಕರ ಆಹಾರವನ್ನು ಸೇವಿಸುತ್ತೇನೆ. ಜಿಡ್ಡಿನಂಶ ಇರುವ ಆಹಾರ ಸೇವಿಸುವುದಿಲ್ಲ. ಎಲ್ಲರೂ ಆರೋಗ್ಯಕರ ಹಣ್ಣು-ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಅವರು.

ವಿಂಟರ್‌ ವರ್ಕೌಟ್‌

ಪ್ರತಿದಿನ ನಾನು ಕೂಡ ಅಷ್ಟೇ, ವರ್ಕೌಟ್‌ ಮಾಡುತ್ತೇನೆ. ಇದು ನನ್ನ ಫಿಟ್ನೆಸ್‌ಗೆ ಸಹಕಾರಿಯಾಗಿದೆ. ಇದಕ್ಕೆಂದು ಪಕ್ಕಾ ಟೈಮ್‌ ಅಳವಡಿಸಿಕೊಂಡಿಲ್ಲ ಎನ್ನುತ್ತಾರೆ.

ವಿಂಟರ್‌ ಬೆಳಿಗ್ಗಿನ ಜಾವ ಆದಲ್ಲಿ ವರ್ಕೌಟ್‌ ಆದಷ್ಟೂ ಇನ್‌ಡೋರ್‌ ಆಗಿದ್ದರೇ ಉತ್ತಮ. ಯಾಕೆಂದರೆ, ಹೊರಗಿನ ವಾತಾವಾರಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ಆದಷ್ಟೂ ಎಲ್ಲರೂ ವರ್ಕೌಟ್‌ ಮಾಡಬೇಕಾದಲ್ಲಿ ಜಿಮ್‌ ಅಥವಾ ಮನೆಯೊಳಗೆ ರೂಢಿಸಿಕೊಂಡರೇ ಉತ್ತಮ ಎನ್ನುತ್ತಾರೆ ಅದಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ