ಆ್ಯಪ್ನಗರ

ಒಟ್ಟಿಗೆ ಕುಳಿತು ಊಟ ಮಾಡುವುದರಿಂದೇನು ಲಾಭ?

ಎಲ್ಲರೂ ಸೇರಿ ಊಟ ಮಾಡುವಾಗ ಆ ದಿನದಲ್ಲಿ ಆದ ಸಿಹಿ ಕಹಿ ಘಟನೆಗಳನ್ನು ಎಲ್ಲರೊಡನೆ ಹಂಚಿಕೊಳ್ಳಬಹುದು. ಮಕ್ಕಳು ಆ ಸಮಯದಲ್ಲಿ ಮನ ಬಿಚ್ಚಿ ಮಾತನಾಡುತ್ತಾರೆ. ಇದರಿಂದ ಮನೆಯಲ್ಲಿ ಪ್ರತಿಯೊಬ್ಬರಲ್ಲೂ ಪ್ರೀತಿ ವಿಶ್ವಾಸ ಹೆಚ್ಚಿ ಕುಟುಂಬದಲ್ಲಿ ನೆಮ್ಮದಿ ಇರುವುದು.

Vijaya Karnataka Web 17 Mar 2019, 12:01 pm
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಇತ್ತು. ಅಜ್ಜ, ಅಜ್ಜಿ, ಅಪ್ಪ, ಅಮ್ಮ, ತಂಗಿ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಕುಳಿತು ಊಟ ಮಾಡುತ್ತಿದ್ದರು. ಬೆಳದಿಂಗಳ ಊಟ ಮಾಡುತ್ತಿದ್ದರು. ಏನೇ ವಿಷಯ ಇದ್ದರು ಹಂಚಿಕೊಳ್ಳುತ್ತ ಖುಷಿಯಿಂದ ಹೊಟ್ಟೆ ತುಂಬ ತಿನ್ನುತ್ತಿದ್ದರು. ಈ ಖುಷಿಯಲ್ಲಿ ಮಾನಸಿಕ ತೊಳಲಾಟಗಳನ್ನೆಲ್ಲ ಮರೆಯುತ್ತಿದ್ದರು. ಏನೇ ವಿಷಯ ಇದ್ದರು ಈ ಸಮಯದಲ್ಲಿ ಚರ್ಚೆಯಾಗಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುತ್ತಿದ್ದರು.
Vijaya Karnataka Web Dinner


ಆದರೆ ಈಗೆಲ್ಲ ಕುಟುಂಬಗಳು ಹರಿದು ಹಂಚಿ ಹೋಗಿವೆ. ಮನೆಯಲ್ಲಿ ಇರುವವರೆ ಮೂರು, ನಾಲ್ಕು ಐದು ಜನ. ಆದರೂ ಒಬ್ಬರ ಮುಖ ಒಬ್ಬರಿಗೆ ನೋಡಲು ಸಮಯವಿಲ್ಲ. ಅದರಲ್ಲೂ ಈ ಟಿವಿ, ಮೊಬೈಲ್‌ಗಳು ಬಂದ ಮೇಲಂತೂ ಟಿವಿ ಮುಂದೆ ಕುಳಿತು ಊಟ ಮಾಡುವುದು ಸಾಮಾನ್ಯವಾಗಿದೆ. ಸಂಬಂಧಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಕಾಲದಲ್ಲಿ ಒಟ್ಟಿಗೆ ಕೂತು ಊಟ ಮಾಡುವುದು ಅವಶ್ಯ. ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಅನೇಕ ಲಾಭಗಳಿವೆ.

  • ಎಲ್ಲರೂ ಸೇರಿ ಊಟ ಮಾಡುವಾಗ ಆ ದಿನದಲ್ಲಿ ಆದ ಸಿಹಿ ಕಹಿ ಘಟನೆಗಳನ್ನು ಎಲ್ಲರೊಡನೆ ಹಂಚಿಕೊಳ್ಳಬಹುದು. ಮಕ್ಕಳು ಆ ಸಮಯದಲ್ಲಿ ಮನ ಬಿಚ್ಚಿ ಮಾತನಾಡುತ್ತಾರೆ. ಇದರಿಂದ ಮನೆಯಲ್ಲಿ ಪ್ರತಿಯೊಬ್ಬರಲ್ಲೂ ಪ್ರೀತಿ ವಿಶ್ವಾಸ ಹೆಚ್ಚಿ ಕುಟುಂಬದಲ್ಲಿ ನೆಮ್ಮದಿ ಇರುವುದು.

  • ಎಲ್ಲರು ಒಟ್ಟಿಗೆ ಕುಳಿತು ಅನ್ನಪೂರ್ಣೇಶ್ವರಿ ಎಂದು ಪೂಜಿಸಲ್ಪಡುವ ಆಹಾರಕ್ಕೆ ವಂದಿಸಿ ದೇವರಿಗೆ ಪ್ರಾರ್ಥಿಸಿ ಊಟ ಮಾಡಬೇಕು. ಈ ಪ್ರಾರ್ಥನೆಯಲ್ಲಿ ವಿಶೇಷವಾದ ಶಕ್ತಿ ಇರುತ್ತದೆ.

  • ಊಟ ಮಾಡುವ ಮೊದಲು ಶಾಂತಿಗಳನ್ನು ಪಠಿಸಬೇಕು. ಇದರಿಂದ ಆಹಾರವೂ ಶುದ್ಧವಾಗುವುದು ಹಾಗೂ ಮಕ್ಕಳಲ್ಲಿ ಭಾವಾನಾತ್ಮಕ ಬೆಳವಣಿಗೆ ಉಂಟಾಗುತ್ತದೆ.

  • ಒಟ್ಟಿಗೆ ಊಟ ಮಾಡುವಾಗ ಮನೆ ಮಂದಿಯೆಲ್ಲಾ ಸೇರಿ ಮಾತುಕತೆಯಾಡಲು ಸುಲಭವಾಗುತ್ತದೆ. ಆ ಸಮಯದಲ್ಲಿ ಮನಸ್ಸಿನಲ್ಲಾದ ದುಗುಡವನ್ನು ಹೊರ ಹಾಕಲು ಅನುಕೂಲವಾಗುತ್ತದೆ. ಮಕ್ಕಳಿಗೆ ತಮ್ಮ ಆತಂಕವನ್ನು ಅಭಿವ್ಯಕ್ತಗೊಳಿಸಲು ಇದೊಂದು ಉತ್ತಮ ವೇದಿಕೆ.

  • ಆಕಸ್ಮಾತ್‌ ಪದಾರ್ಥಗಳು ಕಡಿಮೆ ಇದ್ದರೆ ಅದನ್ನು ಸಮಪಾಲು ಮಾಡಿ ಹಂಚಿ ತಿನ್ನಬಹುದು. ಇದರಿಂದ ಮಕ್ಕಳಲ್ಲಿ ಹಂಚಿ ತಿನ್ನುವ ಸ್ವಭಾವ ಬರುತ್ತದೆ. ಹಾಗೂ ಪದಾರ್ಥಗಳ ಮಹತ್ವ ಅರ್ಥವಾಗುತ್ತದೆ.

  • ಮಾಡಿದ ಪದಾರ್ಥ ವೇಸ್ಟ್‌ ಆಗುವುದಿಲ್ಲ ಮತ್ತು ಅಡುಗೆಯ ರುಚಿಯೂ ಹೆಚ್ಚುವುದು.

  • ಒಟ್ಟಿಗೆ ಕುಳಿತು ಊಟ ಮಾಡುವಾಗ ಟಿವಿ ನೋಡುವುದು, ಮೊಬೈಲ್‌ನಲ್ಲಿ ಮಾತನಾಡುವುದು ಕಡಿಮೆ ಆಗುವುದು. ಇದರಿಂದ ಆಹಾರ ರುಚಿ ತಿಳಿಯುತ್ತದೆ.

  • ನೆಲದ ಮೇಲೆ ಕುಳಿತು ಊಟ ಮಾಡಿದರೆ ಆಹಾರವು ಚೆನ್ನಾಗಿ ಜೀರ್ಣವಾಗುವುದು, ಮನಸ್ಸಿಗೆ ಸಂತೋಷವುಂಟಾಗುವುದು ಮತ್ತು ದೇಹಕ್ಕೆ ವ್ಯಾಯಾಮ ಸಿಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ