ಆ್ಯಪ್ನಗರ

ನವರಾತ್ರಿಯ ಪ್ರತಿ ದಿನವೂ ಸಂಭ್ರಮ

ಸಿಲೆಬ್ರಿಟಿ ಟಿಫ್ಸ್‌ ದಸರಾ ಹಬ್ಬ ನಾಡಿನಾದ್ಯಂತ ಸಂಭ್ರಮ ಹೆಚ್ಚಿಸುತ್ತದೆ ಪ್ರತಿ ಮನೆಯಲ್ಲೂ ಹಬ್ಬದ ಸಡಗರ ತುಂಬುತ್ತದೆ...

Vijaya Karnataka 17 Oct 2018, 5:00 am
ದಸರಾ ಹಬ್ಬ ನಾಡಿನಾದ್ಯಂತ ಸಂಭ್ರಮ ಹೆಚ್ಚಿಸುತ್ತದೆ. ಪ್ರತಿ ಮನೆಯಲ್ಲೂ ಹಬ್ಬದ ಸಡಗರ ತುಂಬುತ್ತದೆ. ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಭಾಗಿಯಾಗಬೇಕು ಎನ್ನುತ್ತಾರೆ ನಟಿ ಅರ್ಚನಾ ಮೊಸಳೆ.
Vijaya Karnataka Web IMG_20180409_5 (2)


ನೇತ್ರಾ ಕೃಷ್ಣಮೂರ್ತಿ

ಹಬ್ಬಗಳಲ್ಲಿ ದಸರಾ ಹಬ್ಬ ನನ್ನ ಫೇವರಿಟ್‌. ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತೇವೆ. ಅಕ್ಕ ಪಕ್ಕದ ಮಕ್ಕಳನ್ನು ಮನೆಗೆ ಕರೆದು ಬೊಂಬೆ ಆರತಿ ಮಾಡುತ್ತೇವೆ. ಪ್ರತಿ ದಿನವೂ ದುರ್ಗಾ ದೇವಿಗೆ ಪೂಜೆ ಮಾಡುತ್ತೇವೆ. ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡುತ್ತೇವೆ ಎನ್ನುತ್ತಾರೆ ಅವರು.

ಸಂಸ್ಕೃತಿಯ ವಿಜೃಂಭಣೆ

ದಸರಾ ಹಬ್ಬ ನಮ್ಮ ಕರ್ನಾಟಕ ಮಾತ್ರವಲ್ಲದೇ ಭಾರತದಾದ್ಯಂತ ಆಚರಿಸುತ್ತೇವೆ. ಆದರೆ ಮೈಸೂರಿನ ದಸರಾ ಹಾಗೂ ಜಂಬೂ ಸವಾರಿ ವಿಶ್ವವಿಖ್ಯಾತವಾದದ್ದು. ಇದನ್ನು ನೋಡಲು ವಿದೇಶದಿಂದ ಜನರು ಬರುತ್ತಾರೆ. ನಮ್ಮ ಸಂಸ್ಕೃತಿ ಅಷ್ಟೊಂದು ಹೆಸರುವಾಸಿಯಾಗಿದೆ. ಇಂಥ ಸಂಭ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಲೇ ಬೇಕು. ವಿಜೃಂಭಣೆಯಿಂದ ನಡೆಯುವ ದಸರಾ ಉತ್ಸವವನ್ನು ನೋಡಬೇಕು ಎನ್ನುತ್ತಾರೆ ಅರ್ಚನಾ.

ಹೆಣ್ಣುಮಕ್ಕಳ ಹಬ್ಬ

ಪ್ರತಿ ಹಬ್ಬಕ್ಕೂ ನಾನು ಲೆಹೆಂಗಾ ಧರಿಸಲು ಇಷ್ಟಪಡುತ್ತೇನೆ. ವಿಜಯದಶಮಿಗೆ ಲೆಹೆಂಗಾ ಧರಿಸಬೇಕೆಂದು ಕೊಂಡಿದ್ದೇನೆ. ಹಬ್ಬಗಳಲ್ಲಿ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಉಡುಗೆ ಸುಂದರವಾಗಿ ಕಾಣುತ್ತದೆ. ಅಲ್ಲದೇ ಅಂತಹ ಉಡುಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಹಾಗೆಯೇ ಅದಕ್ಕೆ ಒಪ್ಪುವಂಥ ಟ್ರಡಿಷನ್‌ನಲ್‌ ಜ್ಯುವಲರಿ ಧರಿಸಿದರೆ ಇನ್ನು ಸುಂದರವಾಗಿ ಕಾಣಬಹುದು. ಪ್ರತಿಯೊಂದು ಹೆಣ್ಣುಮಗಳು ಹಬ್ಬದ ದಿನ ಕೇವಲ ಅಡುಗೆ, ಮನೆ ಕೆಲಸ ಎಂದು ಕೂರದೆ ಸಾಂಪ್ರದಾಯಿಕ ಉಡುಪು ಹಾಗೂ ಆಭರಣ ಧರಿಸಿ ಸುಂದರವಾಗಿ ಶೃಂಗಾರ ಮಾಡಿಕೊಂಡು ಹಬ್ಬ ಆಚರಿಸಬೇಕು ಎಂದು ಸಲಹೆ ನೀಡುತ್ತಾರೆ ಅವರು.

ಆಚರಿಸಿಕೊಂಡು ಬಂದಂತಹ ಹಬ್ಬ ಆಚರಣೆಗಳನ್ನು ಮರೆಯಬಾರದು. ಎಷ್ಟೇ ಬಿಝಿ ಇದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು. ಇಂಥ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಳ್ಳಬೇಕು.

ಅರ್ಚನಾ ಮೊಸಳೆ| ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ