ಆ್ಯಪ್ನಗರ

ಖುಷಿ ಹೆಚ್ಚಿಸುತ್ತವಂತೆ ನಾಯಿಗಳು

ಇದಕ್ಕೆ ಕಾರಣ, ನೋಡಲು ಮನಮೋಹಕವಾಗಿರುವ ಶ್ವಾನಗಳ ಚಿತ್ರಗಳು ಪ್ರತಿಯೊಬ್ಬರಿಗೂ ಮನಸ್ಸಿಗೆ ಉಲ್ಲಾಸ ನೀಡುತ್ತದಂತೆ. ಇದಕ್ಕೆ ಪೂರಕ ಎಂಬಂತೆ, ಸೋಷಿಯಲ್‌ ಮೀಡಿಯಾದಲ್ಲಿ ಶ್ವಾನಗಳ ಚಿತ್ರ ಅಪ್‌ಲೋಡ್‌ ಮಾಡುವವರು ಹೆಚ್ಚಾಗಿದ್ದಾರಂತೆ.

Agencies 11 May 2019, 2:55 pm
ಶ್ವಾನಗಳನ್ನು ಸಾಕಿರುವ ವ್ಯಕ್ತಿಗಳು ಅತಿ ಹೆಚ್ಚು ಭಾವನೆಗಳನ್ನು ಹೊಂದಿರುತ್ತಾರಂತೆ. ಅಷ್ಟು ಮಾತ್ರವಲ್ಲ, ಅತಿ ಹೆಚ್ಚು ಖುಷಿಯಿಂದ ಇರುತ್ತಾರಂತೆ. ಸಮೀಕ್ಷೆಯೊಂದರ ಪ್ರಕಾರ, ಪ್ರಾಣಿಯನ್ನು ಪ್ರೀತಿಸುವವರಿಗೆ ಸಂಬಂಧಗಳ ಅರಿವು ಹೆಚ್ಚಾಗಿಯೇ ಇರುತ್ತದಂತೆ. ಎಲ್ಲರನ್ನು ಪ್ರೀತಿಯಿಂದ ನೋಡುತ್ತಾರಂತೆ.
Vijaya Karnataka Web Dog


ಇದಕ್ಕೆ ಕಾರಣ, ನೋಡಲು ಮನಮೋಹಕವಾಗಿರುವ ಶ್ವಾನಗಳ ಚಿತ್ರಗಳು ಪ್ರತಿಯೊಬ್ಬರಿಗೂ ಮನಸ್ಸಿಗೆ ಉಲ್ಲಾಸ ನೀಡುತ್ತದಂತೆ. ಇದಕ್ಕೆ ಪೂರಕ ಎಂಬಂತೆ, ಸೋಷಿಯಲ್‌ ಮೀಡಿಯಾದಲ್ಲಿ ಶ್ವಾನಗಳ ಚಿತ್ರ ಅಪ್‌ಲೋಡ್‌ ಮಾಡುವವರು ಹೆಚ್ಚಾಗಿದ್ದಾರಂತೆ. ಆನ್‌ಲೈನ್‌ನಲ್ಲಿ ಮುದ್ದು ಶ್ವಾನಗಳ ಫೋಟೋ ಹಾಕುವುದು, ಫೋಟೋ ಶೂಟ್‌ ಮಾಡಿಸಿ
ಹಾಕುವುದು, ವಿಡಿಯೋ ಕ್ಲಿಪ್‌ ಹಾಕುವುದು ಈ ಹಿಂದೆಗಿಂತ ಅಧಿಕಗೊಂಡಿದೆಯಂತೆ.

ಇನ್ನು ಪೆಟ್‌ ಪ್ರಿಯರಿಗೆಂದೆ ಸಾಕಷ್ಟು ಬ್ಲಾಗ್‌ಗಳಿವೆ. ಅವುಗಳಲ್ಲಿ ಕೆಲವು ಶ್ವಾನಗಳ ವಿಡಿಯೋ ಕ್ಲಿಪ್‌ಗಳು ವೈರಲ್‌ ಕೂಡ ಆಗುತ್ತಿವೆ.

ನಾಯಿ ಎಷ್ಟು ಚುರುಕಾಗಿರುತ್ತವೆ ಅಂದರೆ ತಮ್ಮ ಯಜಮಾನನ ಮನಸ್ಸು ಸರಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತವೆ ಹಾಗೂ ಅವರ ಮೂಡ್‌ ಸರಿ ಮಾಡಲು ತಮ್ಮಿಂದಾಗುವ ಎಲ್ಲ ಪ್ರಯತ್ನ ಮಾಡುತ್ತವೆ.ಬೇಗ ಟೆನ್ಸ್‌ ಆಗುವುದು, ಅತಿಯಾಗಿ ಚಿಂತೆ ಮಾಡುವ ವ್ಯಕ್ತಿಗಳು ಮನೆಯಲ್ಲಿ ನಾಯಿ ಸಾಕಿಕೊಂಡರೆ ಚಿಂತೆ ದೂರವಾಗುವುದರಲ್ಲಿ ಆಶ್ಚರ್ಯವಿಲ್ಲ.

ಮನೆಯಲ್ಲಿ ನಾಯಿ ಸೇರಿದಂತೆ ಸಾಕು ಪ್ರಾಣಿಗಳಿದ್ದರೆ ಅಲರ್ಜಿ ಆಗಬಹುದು, ಮಕ್ಕಳಿಗೆ ಸೋಂಕು ತಗುಲಬಹುದು ಎಂದು ಹೆದರಬೇಕಾಗಿಲ್ಲ. ಆದರೆ ಸಣ್ಣ ಮಕ್ಕಳ ಸುತ್ತ ಸಾಕು ಪ್ರಾಣಿಗಳು ಓಡಾಡುತ್ತಿದ್ದರೆ ಅವುಗಳ ಇಮ್ಯುನಿಟಿ ಪವರ್‌ ಹೆಚ್ಚುತ್ತದೆ. ಇದನ್ನು ಸಾಖಷ್ಟು ಅಧ್ಯಯನಗಳು ಸಾಬೀತು ಮಾಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ