ಆ್ಯಪ್ನಗರ

Valentines Day WhatsApp Status: ಮಲ್ಲಿಗೆ ಮೇಲಣ ಮಂಜಿನ ಹನಿ ಪ್ರೀತಿ!

ಪ್ರೇಮಿಗಳ ದಿನ ಬಂದರೆ ಸಾಮಾಜಿಕ ತಾಣಗಳಲ್ಲಿ ಹಬ್ಬದ ವಾತಾವರಣ. ವರ್ಣರಂಚಿತ ಚಿತ್ರಗಳು, ಕಲಾತ್ಮಕ ಬರಹಗಳು, ಸಂದೇಶಗಳು, ನಾನಾರ್ಥಗಳು, ಕಲ್ಪನೆಗಳು ಓಡಾಡುತ್ತ ಸಂಚಲನ ಸೃಷ್ಟಿಸುತ್ತವೆ. ಮನಸ್ಸು ಮನಸ್ಸುಗಳ ನಡುವೆ ಮಾಯಾವಿಯಾಗಿ ಹರಿದಾಡುತ್ತಿದ್ದ ಪ್ರೀತಿಯ ವೈರಸ್‌ ಸಾಮಾಜಿಕ ತಾಣಗಳಲ್ಲಿ ವೈರಲ್‌ಆಗಿ ಹರಿದಾಡುತ್ತವೆ.

Vijaya Karnataka Web 14 Feb 2019, 8:34 am
ಮುಂಜಾನೆಯಲ್ಲಿ ಮಂಜು ಹನಿಗಳಿಂದ ಆವರಿಸಿದ್ದ ಮಲ್ಲಿಗೆ ತೋಟದೊಳಗೆ ಕಾಲಿಟ್ಟಾಗ ಘಂ ಎನ್ನುವ ಅಹ್ಲಾದಕರ ಸುವಾಸನೆ ಇದೆಯಲ್ಲಾ ಬಹುಶಃ ಪ್ರೀತಿಗೆ ಸಮಾನವಾದುದು ಎಂದರೇ ಅದೇ ಎಂದೆನಿಸುತ್ತದೆ!
Vijaya Karnataka Web Love


ಶುಭ್ರ ಶ್ವೇತ ಬಣ್ಣದ ತಾಜಾ ಮಲ್ಲಿಗೆ ಮೇಲೆ ಕುಳಿತ ಮಂಜಿನ ಹನಿ ಪ್ರೀತಿ! ಸೂರ್ಯನ ಎಳೆಬಿಸಿಲಿಗೆ ಹೊಳೆಯುವ ಮುತ್ತಿನಂತೆ ಕಾಣುವ ಮಂಜಿನ ಹನಿಗಳನ್ನು ಮುಟ್ಟದೆ, ಕರಗಿ ಹೋಗುವುದನ್ನು ನೋಡುತ್ತ ಅನುಭವಿಸುವುದೇ ಪ್ರೀತಿ. ಪ್ರೀತಿ ಅದಾಗೆ ಮೂಡಬೇಕು, ಅದಾಗೆ ಕರಗಿ ಹೋಗಬೇಕು. ಒತ್ತಾಯದಿಂದ ಧಕ್ಕಿಸಿಕೊಳ್ಳುವ ಪ್ರೀತಿ ಮಂಜಿನ ಹನಿಗೆ ಸ್ಪರ್ಶಿಸಿದಾಗ ಒಡೆದು ಹೋಗುವಂತೆ ಕಣ್ಮರೆಯಾಗುತ್ತದೆ. ಮತ್ತೆಂದೂ ಸೃಷ್ಟಿಯಾಗದಂತೆ.

ಪ್ರೀತಿ ಎಂದರೆ ಆಕರ್ಷಣೆ ಎಂಬ ಮಾತಿದೆ. ಪ್ರೀತಿ ಆಕರ್ಷಣೆಯಲ್ಲ, ಪ್ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ ಅಷ್ಟೆ. ಪ್ರೀತಿಸಿ ಎಂದು ಕೂಗಿ ಹೇಳುತ್ತದೆ. ಗಂಡು-ಹೆಣ್ಣಿನ ನಡುವೆ ಮೂಡುವ ಅನುರಾಗವೇ ಪ್ರೀತಿ ಎಂದು ವ್ಯಾಖ್ಯಾನಿಸುತ್ತಾರೆ. ಅದೂ ಪ್ರೀತಿಯೇ ಒಂದು ರೀತಿಯಲ್ಲಿ ಉನ್ಮತ್ತ, ಮನೋಕಾಮನೆಗಳನ್ನು ಹೊತ್ತ ಪ್ರೀತಿಯಾಗಿರುತ್ತದೆ.

ಪ್ರೀತಿ ಎಂದರೆ ಸಂಮೋಹನವಲ್ಲ, ಪ್ರೀತಿ ಎಂದರೆ ಬುದ್ಧನ ಕಾರುಣ್ಯ ಎಂಬ ಮಾತಿದೆ. ಬಾಹುಬಲಿಯ ತ್ಯಾಗ ವೈರಾಗ್ಯವನ್ನು ಪ್ರೀತಿ ಎಂದು ಕರೆಯುವವರಿದ್ದಾರೆ. ಬಸವಣ್ಣನವರ ದಯೆ ಸರಳ ಭಕ್ತಿಯನ್ನು ಪ್ರೀತಿ ಎನ್ನುವವರಿದ್ದಾರೆ. ಮದರ್‌ ತೆರೆಸಾ, ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳು ಎಲ್ಲರಲ್ಲೂ ಮನೆ ಮಾಡಿದ್ದು ಪ್ರೀತಿ. ಅದೊಂದು ಶ್ರೇಷ್ಠ ಗುಣಮಟ್ಟದ ಪ್ರೀತಿ ಎಂದು ಮಾರ್ಕೆಟಿಂಗ್‌ ಭಾಷೆಯಲ್ಲಿ ಹೇಳಬಹುದು.

ಅಸ್ತಿತ್ವವನ್ನು ಇಂಚಿಂಚು ಹಾಳುಮಾಡುತ್ತಿರುವ ಮನುಷ್ಯರನ್ನು ಸಲಹುತ್ತಿರುವ ಭೂಮಿಯೇ ನಿಜವಾದ ಪ್ರೀತಿ. ಪ್ರಾಣಿ-ಪಕ್ಷಿಗಳು, ಹಸಿರು, ಸೂಕ್ಷ್ಮಜೀವಿಗಳು, ಅಲ್ಲೆಲ್ಲೋ ಕೇಳಿಬರುವ, ಕಂಡುವರುವ ಏಲಿಯನ್‌ಗಳು ಎಲ್ಲವೂ ಅಖಂಡ ಪ್ರೀತಿಯೆಂದ ಭೂಗೋಳದಲ್ಲಿ ಅಡಕವಾಗಿವೆ. ಪ್ರೀತಿಯನ್ನು ಅನುಭವಿಸುತ್ತ ಭೂಗರ್ಭದೊಳಗೆ ಕಳೆದು ಹೋಗುವುದೇ ನಮಗೆ ಸ್ವರ್ಗ.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ಟ್ವೀಟರ್‌ ಹೀಗೆ ಅನೇಕ ಸಾಮಾಜಿಕ ತಾಣಗಳಲ್ಲಿ ಪ್ರೇಮಿಗಳ ದಿನದ ಹಿನ್ನೆಲೆ ತರಹೇವಾರಿ ಸ್ಟೇಟಸ್‌ಗಳು, ಇಮೇಜ್‌ಗಳು, ಸಂದೇಶಗಳು ಹರಿದಾಡುತ್ತಿರುತ್ತವೆ. ಅವುಗಳ ಪೈಕಿ ಒಂದಷ್ಟು ಬೆಸ್ಟ್‌ ಇಲ್ಲಿವೆ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ