ಆ್ಯಪ್ನಗರ

ಬೇಸಿಗೆಗೆ ಹುಮಾ ಖುರೇಶಿ ಸ್ವಿಮ್ಮಿಂಗ್‌ ಮೋಹ

ಬೇಸಿಗೆಯಲ್ಲಿ ಸರಿಯಾದ ಸಮಯದಲ್ಲಿ ಸ್ವಿಮ್ಮಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು .

Vijaya Karnataka 30 Apr 2019, 3:19 pm
ತಾರೆಯರು ಮಾತ್ರವಲ್ಲ, ಬೇಸಿಗೆಗೆ ಎಲ್ಲರೂ ಸ್ವಿಮ್ಮಿಂಗ್‌ಗೆ ಸಮಯ ನೀಡುತ್ತಾರೆ. ಈ ಸೀಸನ್‌ನ ಫಿಟ್ನೆಸ್‌ ಟ್ರೆಂಡ್‌ ಎನ್ನುತ್ತಾರೆ ನಟಿ ಹುಮಾ ಖುರೇಶಿ. ಅವರಿಗೂ ಸ್ವಿಮ್ಮಿಂಗ್‌ ಅಂದ್ರೆ ಇಷ್ಟವಂತೆ. ಸ್ವಿಮ್ಮಿಂಗ್‌ ಕುರಿತಂತೆ ಮಾತನಾಡಿರುವುದಲ್ಲದೇ, ಒಂದಿಷ್ಟು ಟಿಫ್ಸ್‌ ಕೂಡ ನೀಡಿದ್ದಾರೆ.
Vijaya Karnataka Web Huma-Qureshi


ಫಿಟ್‌ನೆಸ್‌ಗೆ ಸಾಥ್‌

ಈಜು ಕಲಿತರೇ ಅದಕ್ಕಿಂತ ಬೇರೆ ವ್ಯಾಯಾಮ ಬೇಕಾಗಿಲ್ಲ. ನೀವು ಯಾವುದೇ ಈಜು ಬರುವ ವ್ಯಕ್ತಿಯನ್ನು ಗಮನಿಸಿ ಅವರು ಫಿಟ್‌ ಅಂಡ್‌ ಫೈನ್‌ ಆಗಿರುತ್ತಾರೆ. ವಾರದಲ್ಲಿ ಎರಡು ಮೂರು ಬಾರಿ ಈಜುವ ಅಭ್ಯಾಸ ಮಾಡಿಕೊಂಡರೇ ಸಾಕು. ಅದು ದೇಹದ ಸ್ನಾಯುಗಳಿಗೆ ಕೆಲಸ ನೀಡುತ್ತದೆ. ದೇಹ ಆರೋಗ್ಯವಾಗಿರುವಲ್ಲಿಯೂ ಇದು ಪ್ರಮುಖ ಪಾತ್ರವಹಿಸುತ್ತದೆ ಎನ್ನುತ್ತಾರೆ ಹುಮಾ.

ಸ್ವಿಮ್ಮಿಂಗ್‌ ನಂತರ

ಸ್ವಿಮ್ಮ್ಮಿಂಗ್‌ ಪೂಲ್‌ನಿಂದ ಹೊರಬಂದ ತಕ್ಷ ಣದಿಂದ ಬ್ಯೂಟಿ ಕೇರ್‌ ಬಗ್ಗೆ ಗಮನಹರಿಸಬೇಕಾದುದು ಅತ್ಯಗತ್ಯ. ಸ್ವಿಮ್ಮಿಂಗ್‌ ಪೂಲ್‌ನಿಂದ ಹೊರಬಂದ ತಕ್ಷ ಣ ಶವರ್‌ ಬಾತ್‌ ಮಾಡುವುದು ಉತ್ತಮ. ಕೆಲವು ನಿಮಿಷಗಳ ಕಾಲ ಮೇಲಿನಿಂದ ನೀರು ಮೈಮೇಲೆ ಬಿದ್ದ ತಕ್ಷ ಣ ಕ್ಲೋರಿನ್‌ಯುಕ್ತ ನೀರು ಹೋಗುವವರೆಗೂ ಸ್ನಾನ ಮಾಡಲೇಬೇಕು. ಕೂದಲು ಹಾಗೂ ಚರ್ಮಕ್ಕೆ ಅಂಟಿಕೊಂಡಿರುವ ಕ್ಲೋರಿನÜನ್ನು ಸಂಪೂರ್ಣವಾಗಿ ತೊಳೆಯುವವರೆಗೂ ವಾಶ್‌ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ