ಆ್ಯಪ್ನಗರ

ಹಗಲು ಹೊತ್ತಲ್ಲಿ ನಿದ್ರಿಸುವುದು ಹಿತಕಾರಿಯೇ?

ರಾತ್ರಿ ಹೊತ್ತು 6 ರಿಂದ 8 ಗಂಟೆ ನಿದ್ರೆ ಮಾಡಿದರೆ ಉತ್ತಮ ಎನ್ನುತ್ತಾರೆ ವೈದ್ಯರು. ಆದರೆ ಕೆಲವರಿಗೆ ಹಗಲು ಹೊತ್ತು ಸಹ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದೇನು ತಪ್ಪೆಂದಲ್ಲ. ಆದರೆ ಗಡದ್ದಾಗಿ ನಿದ್ದೆ ಮಾಡಬಾರದಷ್ಟೇ.

Agencies 2 Jun 2019, 11:38 am
ಆರೋಗ್ಯಕರ ಬದುಕಿಗೆ ನೆಮ್ಮದಿಯ ನಿದ್ರೆ ಅವಶ್ಯ. ನಿಮ್ಮ ದೈನಂದಿನ ಕಾರ್ಯಶೀಲತೆಯ ಗುಣಮಟ್ಟವನ್ನು ನಿದ್ರೆ ನಿರ್ಧರಿಸುತ್ತದೆ. ಆದರೆ ಊಟಕ್ಕೆ ನಿಗದಿತ ಪ್ರಮಾಣ ಇರುವಂತೆ ನಿದ್ದೆಯೂ ನಿಗದಿತ ಪ್ರಮಾಣದಲ್ಲಿದ್ದರೆ ಉತ್ತಮ. ನಿಮ್ಮ ನಿದ್ರೆಯ ಅವಧಿ ಸೂಕ್ತವಾಗಿರಬೇಕು.
Vijaya Karnataka Web Sleep


ರಾತ್ರಿ ಹೊತ್ತು 6 ರಿಂದ 8 ಗಂಟೆ ನಿದ್ರೆ ಮಾಡಿದರೆ ಉತ್ತಮ ಎನ್ನುತ್ತಾರೆ ವೈದ್ಯರು. ಆದರೆ ಕೆಲವರಿಗೆ ಹಗಲು ಹೊತ್ತು ಸಹ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವುದೇನು ತಪ್ಪೆಂದಲ್ಲ. ಆದರೆ ಗಡದ್ದಾಗಿ ನಿದ್ದೆ ಮಾಡಬಾರದಷ್ಟೇ.

ಹಗಲಿನ ಸಮಯ ನಿದ್ರಿಸುವುದನ್ನು 10ರಿಂದ 30 ನಿಮಿಷಗಳವರೆಗೆ ಸೀಮಿತಗೊಳಿಸಬೇಕು. ಇದನ್ನು ನೇಪ್ಪಿಂಗ್‌ ಅಥವಾ ಕಿರು ನಿದ್ರೆ ಎನ್ನುತ್ತಾರೆ. ಆದರೂ 20-30 ನಿಮಿಷಗಳ ಕಿರು ನಿದ್ರೆಯ ಮನಸ್ಥಿತಿ, ಜಾಗರೂಕತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನೀವು ಹಗಲಿನಲ್ಲಿ ಗಂಟೆಗಳಷ್ಟು ಹೊತ್ತು ನಿದ್ದೆ ಮಾಡಿದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಮತ್ತು ಸೋಮಾರಿತನ ಕೂಡ ಒಕ್ಕರಿಸಿಕೊಳ್ಳುತ್ತದೆ. ಹಗಲು ಹೊತ್ತಿನ ನಿದ್ದೆ ನಿಮ್ಮನ್ನು ಹೆಚ್ಚು ಕಾಡುತ್ತಿದೆ ಎಂದಾದರೆ ಅದು ದೈಹಿಕ ಮತ್ತು ಮಾನಸಿಕವಾಗಿ ನೀವು ದುರ್ಬಲಗೊಳ್ಳುತ್ತಿರುವುದರ ಸಂಕೇತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ