ಆ್ಯಪ್ನಗರ

ಯೀಬಾ ಕೋರೆ ಹಲ್ಲುಗಳನ್ನು ತೋರಿಸುತ್ತ 'ಯಬಾ..' ಎಂಬಂತೆ ನಗುತ್ತಿರುವ ಜಪಾನಿಗರು! (ವೀಡಿಯೋ)

ಇದೊಂಥರ ಕ್ರೇಝಿ ಟ್ರೆಂಡ್‌ ಆಗಿದೆ. ಹಾಕಿಸಿಕೊಂಡ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಈ ಹಲ್ಲು ಕಾಣುವಂತೆ ನಗುವ ಫೋಟೋ ಹಾಕಿಕೊಳ್ಳುವುದು ಕಾಮನ್‌ ಆಗಿದೆ. ಅಚ್ಚರಿಯಾದರೂ ಇದು ನಿಜ. ಸಾಕಷ್ಟು ದುಡ್ಡು ಕೊಟ್ಟು ಇಂತಹ ಕೋರೆಹಲ್ಲುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

Agencies 1 Mar 2019, 2:24 pm
ಸಾಕಷ್ಟು ಮಂದಿ ಹಲ್ಲು ಸುಂದರವಾಗಿ ಕಾಣಬೇಕೆಂದುಕೊಂಡು ಸೈಡಿನ ಹಲ್ಲನ್ನು ತೆಗೆಸಿ ಕ್ಲಿಪ್‌ ಹಾಕಿಸುತ್ತಾರೆ. ಆದರೆ, ಜಪಾನಿನಲ್ಲಿ ಜತೆಗೊಂದೆರಡು ಇರಲಿ ಎಂದು ಎಕ್ಸ್‌ಟ್ರಾ ಹಲ್ಲುಗಳನ್ನು ಫಿಟ್‌ ಮಾಡಿಸಿ ಹಾಕಿಸಿಕೊಳ್ಳುತ್ತಿದ್ದಾರೆ. ಇದೊಂಥರ ಕ್ರೇಝಿ ಟ್ರೆಂಡ್‌ ಆಗಿದೆ. ಹಾಕಿಸಿಕೊಂಡ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಈ ಹಲ್ಲು ಕಾಣುವಂತೆ ನಗುವ ಫೋಟೋ ಹಾಕಿಕೊಳ್ಳುವುದು ಕಾಮನ್‌ ಆಗಿದೆ. ಅಚ್ಚರಿಯಾದರೂ ಇದು ನಿಜ.
Vijaya Karnataka Web Japan Double Tooth


ಯೀಬಾ ಎಂದರೆ ಡಬಲ್‌ ಟೂತ್‌. ಮೇಲಿನ ಕೋರೆ ಹಲ್ಲುಗಳ ಮೇಲೆ ಹೊರ ಚಾಚಿದಂತೆ ತೋರುವ ಹಲ್ಲಿನ ಕ್ಲಿಪ್‌ ಅಳವಡಿಸುವುದಾಗಿದೆ. ಇಂತಹ ವಿಚಿತ್ರ ಹಲ್ಲುಗಳನ್ನು ಹೊಂದುವ ಟ್ರೆಂಡ್‌ಗೆ ಜಪಾನಿಗರು ಮರುಳಾಗಿದ್ದು, ಪ್ರತಿ ಹಲ್ಲಿಗೆ ಸುಮಾರು 130-340 ಡಾಲರ್‌ ವ್ಯಯಿಸುತ್ತಿದ್ದಾರೆ.

ಟೋಕಿಯೋದ ಕ್ಲಿನಿಕ್‌ ಒಂದರಲ್ಲಿ ಶಾಲಾ ಮಕ್ಕಳಿಗೆ 50% ವಿಶೇಷ ರಿಯಾಯಿತಿ ನೀಡುತ್ತಿದೆ ಎಂದರೆ ಲೆಕ್ಕ ಹಾಕಿ ಈ ಹಲ್ಲಿನ ಟ್ರೆಂಡ್‌ ಯಾವ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ ಎಂದು. ಜಪಾನ್‌ 18 ವರ್ಷದ ನಾನಾ, ಮಿಯೋ ಮತ್ತು ರಿಕಾ ಎಂಬ ವಿದ್ಯಾರ್ಥಿನಿಯರು ಹೊರಗೆ ಚಾಚಿದಂತ ತೋರುವ ಕೋರೆ ಹಲ್ಲುಗಳನ್ನು ಅಳವಡಿಸಿಕೊಂಡು ಟಿವೈಬಿ48 ಎಂಬ ಗುಂಪಿನೊಂದಿಗೆ ಗುರುತಿಸಿಕೊಂಡರು. ಹುಡುಗಿಯರ ಮುದ್ದಾದ ಸಂದರ್ಯವನ್ನು ಈ ಕೋರೆ ಹಲ್ಲುಗಳು ಹೆಚ್ಚಿಸಿದ್ದವು. ಸಾಮಾಜಿಕ ತಾಣದಲ್ಲಿ ಟಿವೈಬಿ48 ತಂಡಕ್ಕೆ ಮರುಳಾಗದವರೇ ಇಲ್ಲ. ಇವರಿಗೆ ಇಂತಹ ಹಲ್ಲು ಸೃಷ್ಟಿಸಿಕೊಟ್ಟಿದ್ದು ದಂತವೈದ್ಯ ಸುಕೆ ಯೀಬಾ. ಈ ಕಾರಣಕ್ಕಾಗಿ ಯೀಬಾ ಟೂತ್‌ ಎಂಬ ಹೆಸರಿನೊಂದಿಗೆ ಖ್ಯಾತಿ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ