ಆ್ಯಪ್ನಗರ

ವೆರೈಟಿ ಪೊಂಗಲ್‌ ಪ್ರಿಯರಿಗೆ 3 ಟಿಪ್ಸ್

ಯಾವುದೇ ಬೇಳೆ ಕಾಳುಗಳನ್ನು ಹುರಿದು, ನೆನೆಸಿಟ್ಟು ಪೊಂಗಲ್‌ಗೆ ಬಳಸುವುದರಿಂದ ಬೇಗ ಬೇಯುತ್ತದೆ ರುಚಿಯು ಹೆಚ್ಚುತ್ತದೆ.

Vijaya Karnataka 14 Jan 2019, 7:45 am
ಪೊಂಗಲ್‌ನ್ನು ಸ್ವಲ್ಪ ತೆಳುವಾಗಿ ನೀರಾಗಿ ತಯಾರಿಸಿದರೆ ತಳ ಹಿಡಿಯುವುದಿಲ್ಲ, ಬೇಕಾದಾಗ ಬಿಸಿ ಮಾಡಿಕೊಳ್ಳಬಹುದು. ಶುಂಠಿಯನ್ನು ಕೊಬ್ಬರಿತುರಿಯಂತೆ ಉದ್ದುದ್ದ ತುರಿದು ಬಳಸಿದರೆ ಅದರ ಪರಿಮಳ ಹೆಚ್ಚುತ್ತದೆ.
Vijaya Karnataka Web Ven-pongal-1


1. ಯಾವುದೇ ಬೇಳೆ ಕಾಳುಗಳನ್ನು ಹುರಿದು, ನೆನೆಸಿಟ್ಟು ಪೊಂಗಲ್‌ಗೆ ಬಳಸುವುದರಿಂದ ಬೇಗ ಬೇಯುತ್ತದೆ ರುಚಿಯು ಹೆಚ್ಚುತ್ತದೆ.

ಕರಿಮೆಣಸು ಜೀರಿಗೆಯನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡುವುದರಿಂದ ಅದರ ರುಚಿ ಪರಿಮಳ ಹೆಚ್ಚುತ್ತದೆ.

2. ಬಾರ್ಲಿ, ಓಟ್ಸ್‌, ಕಾರ್ನ್‌, ಅಕ್ಕಿ, ಗೋಧಿ, ರವೆ ಬಳಸಿ ಸಿಹಿ ಹಾಗೂ ಖಾರ ಎರಡೂ ರೀತಿಯ ಪೊಂಗಲ್‌ ತಯಾರಿಸಬಹುದು. ಅರಿಶಿಣ, ನಿಂಬೆರಸ ಹಾಗು ಉಪ್ಪನ್ನು ಯಾವಾಗಲು ಅಡಿಗೆಯ ಕೊನೆಯಲ್ಲಿ ಬಳಸಿದರೆ ಉತ್ತಮ ರುಚಿ ಪಡೆಯಬಹುದು.

3. ಖಾರ ಪೊಂಗಲ್‌ ಸೌತೆಕಾಯಿಯ ಮೊಸರು ಬಜ್ಜಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ಸಿಹಿ ಖಾರ ಎರಡೂ ಪೊಂಗಲ್‌ ತಯಾರಿಸುವಾಗ ಹೆಸರುಬೇಳೆ ಹಾಗು ನಮಗೆ ಬೇಕಾದ ಕಾಳನ್ನು ಬೇಯಿಸಿ ಖಾರ ಹಾಗು ಸಿಹಿ ಒಗ್ಗರಣೆಗಳಿಗೆ ಬೇರೆ ಬೇರೆಯಾಗಿ ಮಿಶ್ರಣ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ