ಆ್ಯಪ್ನಗರ

ಮಾಡೆಲ್ಸ್‌ ಮೇಕಪ್‌ಗೆ 5 ಐಡಿಯಾ

ಮಾಡೆಲ್ಸ್‌ ಮೇಕಪ್‌ಗೆ ಒಳಗಾಗುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

Vijaya Karnataka 10 Sep 2019, 5:00 am
ಲವಲವಿಕೆಸುದ್ದಿಲೋಕ
Vijaya Karnataka Web 0F93515E-FAE4-472B-A85E-C4412F85F7B0

ಮಾಡೆಲ್ಸ್‌ ಮೇಕಪ್‌ಗೆ ಒಳಗಾಗುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಆಯ್ಕೆ ಮಾಡಿ ನೋಡಿ

ಮೊದಲಿಗೆ ಯಾವ ತರಹದ ಮೇಕಪ್‌ ಬೇಕು ಎಂಬುದರ ಬಗ್ಗೆ ಎಕ್ಸ್‌ಪರ್ಟ್ಸ್ ಬಳಿ ಚರ್ಚೆ ಮಾಡಿ. ನಿಮ್ಮ ಸ್ಕಿನ್‌ಟೋನ್‌ಗೆ ತಕ್ಕಂತೆ ಮೇಕಪ್‌ ಚೂಸ್‌ ಮಾಡಿ. ಬ್ರಾಂಡೆಡ್‌ ಮೇಕಪ್‌ ಸಾಧನಗಳಿಗೆ ಪ್ರಾಮುಖ್ಯತೆ ನೀಡಿ.

2. ಥೀಮ್‌ಗೆ ತಕ್ಕಂತಿರಲಿ


ಥೀಮ್‌ ಏನಿದೆ ಎಂಬುದು ಮನಗಂಡಿರಿ. ಯಾವ ಶೈಲಿಯ ಉಡುಪಿಗೆ ಯಾವ ಮೇಕಪ್‌ ಅಗತ್ಯ ಎಂಬುದು ಗೊತ್ತಿರಲಿ. ಬ್ರೈಡಲ್‌, ಕ್ಯಾಶುವಲ್‌, ನ್ಯೂಡ್‌, ಸೀಸನ್‌ ಹೀಗೆ ನಾನಾ ಬಗೆಯ ಮೇಕಪ್‌ ವೆರೈಟಿಗಳಿರುತ್ತವೆ. ಯಾವ ಬಗೆಯ ಸಮಾರಂಭ ಅಥವಾ ರಾರ‍ಯಂಪ್‌ ಶೋ ಎಂಬುದರ ಆಧಾರದ ಮೇಲೆ ಮೇಕಪ್‌ ಆಯ್ಕೆ ಮಾಡಿ.

3. ಬೇಸಿಕ್‌ ಜ್ಞಾನ ಬೇಕು

ಮೇಕಪ್‌ನ ಬೇಸಿಕ್‌ ಜ್ಞಾನ ಮಾಡೆಲ್ಸ್‌ಗೆ ತಿಳಿದಿರುವುದು ಅಗತ್ಯ. ಮಾಡೆಲ್ಸ್‌ ಎತ್ತರ, ತೂಕ ಎಲ್ಲವೂ ಇಲ್ಲಿಪರಿಗಣನೆಯಾಗುತ್ತದೆ. ಪರ್ಸನಾಲಿಟಿಯು ಕೆಲವೊಮ್ಮೆ ಇಡೀ ಮೇಕಪ್‌ನಿಂದ ಹೈಲೈಟ್‌ಆಗುತ್ತದೆ.

4. ಮೇಕಪ್‌ಗೂ ತಾಳ್ಮೆ

ಆದಷ್ಟು ತಾಳ್ಮೆಯಿಂದ ಮೇಕಪ್‌ ಮಾಡಿಸಿಕೊಳ್ಳುವುದು ಅಗತ್ಯ. ಇಲ್ಲವಾದಲ್ಲಿಇಡೀ ಮುಖದ ಲುಕ್‌ ಬದಲಾಗುವ ಚಾನ್ಸ್‌ ಇರುತ್ತದೆ. ಧರಿಸುವ ಡಿಸೈನರ್‌ವೇರ್‌ ವರ್ಣಕ್ಕೆ ತಕ್ಕಂತೆ ಮೇಕಪ್‌ ಶೇಡ್ಸ್‌ ಚೂಸ್‌ ಮಾಡುವುದು ಮುಖ್ಯ.

5. ಮೇಕಪ್‌ ಸಂರಕ್ಷಣೆ

ಬಹಳ ಹೊತ್ತಿನ ತನಕ ಮೇಕಪ್‌ ಸಂರಕ್ಷಿಸಲು ಅಗತ್ಯ ರೂಲ್ಸ್‌ ಪಾಲಿಸುವುದು ಅವಶ್ಯ. ಮೇಕಪ್‌ ನಂತರವೂ ಎಕ್ಸ್‌ಪರ್ಟ್ಸ್ ಸಲಹೆ ಪಾಲಿಸಿ. ಟ್ರೆಂಡಿ ಕಾನ್ಸೆಪ್ಟ್‌ ಆಯ್ಕೆ ಮಾಡುವುದು ಒಳಿತು.

---------------------

ಶೋಗಾಗಿ ಮೇಕಪ್‌ಗೆ ಒಳಗಾಗುವ ಮೊದಲು ಸ್ಟೈಲಿಸ್ಟ್‌ಗಳ ಬಳಿ ತಮ್ಮ ಕಾನ್ಸೆಪ್ಟ್‌ ಬಗ್ಗೆ ಚರ್ಚಿಸುವುದು ಅಗತ್ಯ. ಇಲ್ಲವಾದಲ್ಲಿಧರಿಸಿದ ಡಿಸೈನರ್‌ವೇರ್‌ಗೂ ಹಾಗೂ ಮೇಕಪ್‌ಗೂ ಮ್ಯಾಚ್‌ ಆಗದೇ ಇರಬಹುದು.

- ಮಂಗಲಾ ಭಾನಸುಧೆ, ಸಿಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ